ಭಾನುವಾರ, ಮಾರ್ಚ್ 26, 2023
25 °C

ಬ್ರಿಟನ್‌ಗೆ ಮೋದಿ ಭೇಟಿ; ಹೊಸ ಶಕೆ ಹೊಸ್ತಿಲಲ್ಲಿ ದ್ವಿಪಕ್ಷೀಯ ಸಂಬಂಧ: ಹೈಕಮಿಷನರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ‘ಭಾರತ ಮತ್ತು ಬ್ರಿಟನ್‌ ನಡುವಿನ ಸಂಬಂಧ ಸಕಾರಾತ್ಮಕ ಪಥದಲ್ಲಿದ್ದು, ಹೊಸ ಶಕೆಯ ಹೊಸ್ತಿಲಿನಲ್ಲಿದೆ. ಇಂಥ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶಕ್ಕೆ ಭೇಟಿ ನೀಡುತ್ತಿರುವುದು ಮಹತ್ವದ್ದಾಗಿದೆ’ ಎಂದು ಬ್ರಿಟನ್‌ನಲ್ಲಿ ಭಾರತದ ಹೈಕಮಿಷನರ್ ಗಾಯಿತ್ರಿ ಇಸ್ಸಾರ್‌ ಕುಮಾರ್‌ ಹೇಳಿದ್ದಾರೆ.

ಹವಾಮಾನ ಬದಲಾವಣೆಗೆ ಸಂಬಂಧಿಸಿ ಗ್ಲಾಸ್ಗೊನಲ್ಲಿ ಸೋಮವಾರದಿಂದ (ನ.1) ಎರಡು ದಿನಗಳ ‘ವಿಶ್ವಸಂಸ್ಥೆ ಸಿಒಪಿ 26 ಸಮಾವೇಶ’ ಎಂಬ ವಿಶ್ವ ನಾಯಕರ ಶೃಂಗಸಭೆ (ಡಬ್ಲ್ಯುಎಲ್‌ಎಸ್‌) ನಡೆಯಲಿದ್ದು, ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರೊಂದಿಗೆ ‘ಕಡಲ ಸುರಕ್ಷತೆ, ಬಾಹ್ಯಾಕಾಶ, ವಿಶ್ವಸಂಸ್ಥೆಯಲ್ಲಿ ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ವಿಸ್ತೃತ ಚರ್ಚೆ ನಡೆಸಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು