ಭಾರತದಿಂದ ಕೋವಿಡ್-19 ಲಸಿಕೆ ಪಡೆದ ಬ್ರೆಜಿಲ್

ರಿಯೊ ಡಿ ಜನೈರೊ: ಭಾರತದಿಂದ 20 ಲಕ್ಷ ಕೋವಿಡ್-19 ಲಸಿಕೆ ಡೋಸ್ಗಳನ್ನು ಬ್ರೆಜಿಲ್ ಪಡೆದಿದೆ. ಆದರೂ ದಕ್ಷಿಣ ಅಮೆರಿಕದ ಅತಿ ದೊಡ್ಡ ರಾಷ್ಟ್ರದಲ್ಲಿ ಪೂರೈಕೆ ಕೊರತೆ ಕಾಡುತ್ತಿದ್ದು, ಈ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
ಕೋವಿಡ್-19 ಪಿಡುಗಿನ ವಿರುದ್ಧ ಹೋರಾಡಲು ಜಾಗತಿಕ ಸಮುದಾಯಕ್ಕೆ ನೆರವಾಗುವುದರ ಭಾಗವಾಗಿ ಭಾರತವು, ಬ್ರೆಜಿಲ್ಗೆ ಕೋವಿಡ್-19 ಲಸಿಕೆಗಳನ್ನು ರವಾನಿಸಿದೆ.
ಆಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಕೋವಿಡ್-19 ಲಸಿಕೆಗಳು ಶುಕ್ರವಾರ ಸಾವೊ ಪಾಲೊ ತಲುಪಿದೆ ಎಂದು ಬ್ರೆಜಿಲ್ನ ಆರೋಗ್ಯ ಸಚಿವಾಲಯ ತಿಳಿಸಿದೆ. ಬಳಿಕ ಇದನ್ನು ರಿಯೊ ಡಿ ಜನೈರೊದಲ್ಲಿರುವ ಫಿಯೋಕ್ರೂಜ್ ಸಂಸ್ಥೆಗೆ ತಲುಪಿಸಲಾಗಿದೆ. ಫಿಯೋಕ್ರೂಜ್ ಲಸಿಕೆ ತಯಾರಿಸುವ ಹಾಗೂ ವಿತರಿಸುವ ಹಕ್ಕನ್ನು ಹೊಂದಿದೆ.
20 ಲಕ್ಷ ಡೋಸ್ಗಳು ಸಾಕಾಗಲಾರದು. 21 ಕೋಟಿ ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಆದ್ಯತೆಯ ಪ್ರಮಾಣದಲ್ಲಿ ಕೋವಿಡ್-19 ಲಸಿಕೆ ಪೂರೈಸಲು ಹೆಚ್ಚಿನ ಪ್ರಮಾಣದಲ್ಲಿ ಡೋಸ್ಗಳು ಬೇಕಾಗುತ್ತದೆ ಎಂದು ಬ್ರೆಜಿಲ್ನ ಸಾರ್ವಜನಿಕ ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್-19 ಹೋರಾಟಕ್ಕೆ ನೆರವಾಗುತ್ತಿರುವ ಭಾರತ 'ನಿಜವಾದ ಸ್ನೇಹಿತ': ಅಮೆರಿಕ
ಕಳೆದ ವಾರವೇ ಭಾರತದಿಂದ ಕೋವಿಡ್-19 ಲಸಿಕೆಯನ್ನು ಹೊತ್ತ ವಿಮಾನವು ಬ್ರೆಜಿಲ್ಗೆ ತೆರಳಬೇಕಿತ್ತು. ಆದರೆ ಕಾರಣಾಂತರಗಳಿಂದಾಗಿ ವಿಳಂಬವಾದ ಕಾರಣ ಬ್ರೆಜಿಲ್ ಕೋವಿಡ್-19 ಹೋರಾಟಕ್ಕೆ ಅಲ್ಪ ಹಿನ್ನಡೆಯಾಗಿದೆ.
ಜಗತ್ತಿನಾದ್ಯಂತ ರಾಷ್ಟ್ರಗಳು, ಪ್ರಮುಖವಾಗಿಯೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು, ಜನಸಂಖ್ಯೆಗೆ ತಕ್ಕದಾಗಿ ಲಸಿಕೆಗಳನ್ನು ಪೂರೈಸಲು ಸಮಸ್ಯೆಯನ್ನು ಎದುರುತ್ತಿಸುತ್ತಿದೆ.
ಬ್ರೆಜಿಲ್ನಲ್ಲಿ ದೇಶೀಯವಾಗಿ ಲಸಿಕೆಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಫಿಯೋಕ್ರೂಜ್ ಹಾಗೂ ಬುಟಾಂಟನ್ ಹೊಂದಿಲ್ಲ. ಇದರಿಂದಾಗಿ ಇತರೆ ದೇಶಗಳನ್ನು ಅವಲಂಬಿಸಬೇಕಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.