ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅಸ್ವಸ್ಥ: ಆಸ್ಪತ್ರೆಗೆ ದಾಖಲು

Last Updated 29 ಮಾರ್ಚ್ 2022, 4:58 IST
ಅಕ್ಷರ ಗಾತ್ರ

ಬ್ರೆಸಿಲಿಯಾ: ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅಸ್ವಸ್ಥಗೊಂಡಿದ್ದು, ಅವರನ್ನು ಬ್ರೆಸಿಲಿಯಾದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

2018ರಲ್ಲಿ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬೋಲ್ಸನಾರೊ ಅವರ ಹೊಟ್ಟೆಗೆ ಇರಿಯಲಾಗಿತ್ತು. ಆ ಬಳಿಕ ಅವರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಆರಂಭವಾಗಿದ್ದವು.

ಅನಾರೋಗ್ಯದ ಕಾರಣ ಬೋಲ್ಸನಾರೊ ಅವರು ರಿಪಬ್ಲಿಕನ್ ಪಕ್ಷ ಸೋಮವಾರ ಆಯೋಜಿಸಿರುವ ಸಭೆಯಲ್ಲಿ ಭಾಗವಹಿಸಿಲ್ಲ.

ಈ ಮಧ್ಯೆ, ‘ಅಧ್ಯಕ್ಷರು ಚೆನ್ನಾಗಿದ್ದಾರೆ. ಕೆಲವೊಂದು ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿರುವ ಕಾರಣ ಅವರು ಸಭೆಗೆ ಬಂದಿಲ್ಲ’ ಎಂದು ಪಕ್ಷದ ಅಧ್ಯಕ್ಷ ಮಾರ್ಕೋಸ್ ಪಿರೇರಾ ತಿಳಿಸಿದ್ದಾರೆ.

ಬೋಲ್ಸನಾರೊ ಅವರ ಪತ್ನಿ ಮಿಷೆಲ್ ಬೋಲ್ಸನಾರೊ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದು, ಪತಿಯು ಸುಧಾರಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ‘ಜಿ1’ ಸುದ್ದಿ ತಾಣ ವರದಿ ಮಾಡಿದೆ. ಅಧ್ಯಕ್ಷರು ಸಣ್ಣಮಟ್ಟಿನ ಅಸ್ವಸ್ಥತೆಗೆ ಒಳಗಾಗಿದ್ದರಷ್ಟೇ ಎಂದು ಸಂವಹನ ಸಚಿವ ಫ್ಯಾಬಿಯೊ ಫರಿಯಾ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT