ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾ: 1,059 ಮಂಕಿಪಾಕ್ಸ್ ಪ್ರಕರಣಗಳು ದೃಢ

Last Updated 13 ಆಗಸ್ಟ್ 2022, 1:44 IST
ಅಕ್ಷರ ಗಾತ್ರ

ಒಟ್ಟಾವ: ದೇಶದಲ್ಲಿ ಈವರೆಗೆ 1,059 ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ ಎಂದು ಕೆನಡಾ ಸಾರ್ವಜನಿಕ ಆರೋಗ್ಯ ಸಂಸ್ಥೆ ತಿಳಿಸಿದೆ.

ಇದರಲ್ಲಿ ಒಂಟಾರಿಯೊದಲ್ಲಿ 511 ಪ್ರಕರಣ, ಕ್ವೆಬೆಕ್‌ನಲ್ಲಿ 426, ಬ್ರಿಟಿಷ್ ಕೊಲಂಬಿಯಾದಲ್ಲಿ 98 ಮತ್ತು ಅಲ್ಬೆರ್ಟಾದಲ್ಲಿ 19, ಸಸ್ಕಚೆವನ್ ಮತ್ತು ಯುಕಾನ್‌ನಲ್ಲಿ ಕ್ರಮವಾಗಿ 3 ಮತ್ತು 2 ಪ್ರಕರಣಗಳು ಪ್ರಕರಣ ವರದಿಯಾಗಿವೆ ಎಂದು ಅದು ತಿಳಿಸಿದೆ.

ಕೆನಡಾದಲ್ಲಿ ಮಂಕಿಪಾಕ್ಸ್ ಪ್ರಕರಣಗಳಿಗೆ ಸರ್ಕಾರ ಚುರುಕಾಗಿ ಪ್ರತಿಕ್ರಿಯಿಸುತ್ತಿದೆ. ರಾಷ್ಟ್ರವ್ಯಾಪಿ ಕಾರ್ಯಾಚರಣೆಯ ಭಾಗವಾಗಿ ಪ್ರಾದೇಶಿಕ ಸಾರ್ವಜನಿಕ ಆರೋಗ್ಯ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಪಿಎಚ್‌ಎಸಿ ಹೇಳಿದೆ.

ಪ್ರಾದೇಶಿಕ ಆರೋಗ್ಯ ಘಟಕಗಳಿಗೆ 80,000 ಕ್ಕೂ ಹೆಚ್ಚು ಡೋಸ್ ಇಮ್ವಾಮುನ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ದೇಶದಾದ್ಯಂತ ಇರುವ ಹಲವು ಲ್ಯಾಬ್‌ಗಳಲ್ಲಿ ಮಂಕಿಪಾಕ್ಸ್ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಂಕಿಪಾಕ್ಸ್ ಒಂದು ವೈರಸ್ ಕಾಯಿಲೆಯಾಗಿದ್ದು, ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು. ಅಪ್ಪುಗೆ, ಚುಂಬನ, ಮಸಾಜ್ ಅಥವಾ ಲೈಂಗಿಕ ಸಂಭೋಗದಿಂದ ಹರಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT