ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮ್ಯಸ್ಥಾನ ತಲುಪಿದ ಚೀನಾದ ಮೆಂಗ್‌ಟಿಯಾನ್ ಬಾಹ್ಯಾಕಾಸ ನೌಕೆ

Last Updated 1 ನವೆಂಬರ್ 2022, 21:03 IST
ಅಕ್ಷರ ಗಾತ್ರ

ಬೀಜಿಂಗ್: ಅಂತರಿಕ್ಷ ಕಕ್ಷೆಯಲ್ಲಿ ತನ್ನ ಅಸ್ತಿತ್ವ ಬಲಪಡಿಸುವು ದರ ಭಾಗವಾಗಿ ಅಂತಿಮ ಹಂತದ ಪರಿಕರಗಳನ್ನು ಹೊತ್ತ ಮೆಂಗ್‌ಟಿಯಾನ್ ಅನ್ನು ತನ್ನ ಶಾಶ್ವತ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸುವಲ್ಲಿಚೀನಾ ಯಶಸ್ವಿಯಾಯಿತು.

ಮೆಂಗ್‌ಟಿಯಾನ್‌ ಎಂದು ಹೆಸರಿಸಲಾದ ಅಂತಿಮ ಹಂತದ ಪರಿಕರಗಳಿದ್ದ ವಾಹಕವು ಟಿಯಾಂಗಾಂಗ್ ನಿಲ್ದಾಣಕ್ಕೆ ಮಂಗಳವಾರ ಬೆಳಿಗ್ಗೆ ತಲುಪಿದೆ ಎಂದು ಸರ್ಕಾರದ ಅಧಿಕೃತ ವಾಹಿನಿ ಸಿಸಿಟಿವಿ ವರದಿ ಮಾಡಿದೆ.

ವೆನ್‌ಚಾಂಗ್ ಉಡಾವಣಾ ಕೇಂದ್ರ ದಿಂದ ಸೋಮವಾರ ಮೆಂಗ್‌ಟಿಯಾನ್‌ ಉಡಾವಣೆ ಮಾಡಲಾಗಿತ್ತು. ಇದು, ಅಂತಿಮ ಗುರಿಯನ್ನು ತಲುಪಲು 13 ಗಂಟೆಯನ್ನು ತೆಗೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT