ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ 2.49 ಲಕ್ಷ ಭಾರತೀಯ ವಿದ್ಯಾರ್ಥಿಗಳು

Last Updated 29 ಆಗಸ್ಟ್ 2020, 10:16 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ 2019ರಲ್ಲಿ ಅಧ್ಯಯನ ಮಾಡುತ್ತಿದ್ದ ವಿದೇಶಿಯರಲ್ಲಿ ಚೀನಾ ಮತ್ತು ಭಾರತದ ಶೇಕಡ 48ರಷ್ಟು ವಿದ್ಯಾರ್ಥಿಗಳಿದ್ದರು ಎಂದು ವರದಿಯೊಂದು ತಿಳಿಸಿದೆ.

ವಲಸೆ ವಿದ್ಯಾರ್ಥಿಗಳ ಕುರಿತು ಅಮೆರಿಕ ವಲಸೆ ಮತ್ತು ಕಸ್ಟಮ್ಸ್‌ ಜಾರಿ (ಐಸಿಇ) ಈ ಬಗ್ಗೆ ವರದಿ ಸಿದ್ಧಪಡಿಸಿದೆ.

ಶೇಕಡ 48ರಷ್ಟು ಅಂದರೆ 7.33 ಲಕ್ಷ ವಿದ್ಯಾರ್ಥಿಗಳು ಅಮೆರಿಕದಲ್ಲಿ ಅಧ್ಯಯನ ನಡೆಸಿದ್ದಾರೆ. ಇವರಲ್ಲಿ ಚೀನಾದ 4.74 ಲಕ್ಷ ಮತ್ತು ಭಾರತದ 2.49 ಲಕ್ಷ ವಿದ್ಯಾರ್ಥಿಗಳಿದ್ದಾರೆ. 2018ರಲ್ಲಿ ಉಭಯ ದೇಶಗಳ ಶೇಕಡ 47ರಷ್ಟು ವಿದ್ಯಾರ್ಥಿಗಳಿದ್ದರು.

ಏಷ್ಯಾದ ಕೆಲವು ರಾಷ್ಟ್ರಗಳಾದ ಕತಾರ್‌, ಸಿರಿಯಾ ಮತ್ತು ಯೆಮೆನ್‌ ರಾಷ್ಟ್ರಗಳು ಕೆಲವೇ ವಿದ್ಯಾರ್ಥಿಗಳನ್ನು ಅಮೆರಿಕಕ್ಕೆ ಕಳುಹಿಸಿವೆ. ಆದರೆ, ಕಾಂಬೋಡಿಯಾ ಮತ್ತು ಕಿರ್ಗಿಸ್ತಾನ ಹೆಚ್ಚು ವಿದ್ಯಾರ್ಥಿಗಳನ್ನು ಅಮೆರಿಕಕ್ಕೆ ಕಳುಹಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿದೇಶಿಯರಲ್ಲಿ 6.71ಲಕ್ಷ (ಶೇಕಡ 49) ವಿದ್ಯಾರ್ಥಿನಿಯರಿದ್ದರು. 4.42 ಲಕ್ಷ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಅಧ್ಯಯನದಲ್ಲಿ ತೊಡಗಿದ್ದರು ಎಂದು ವರದಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT