ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವ್ಯಾಕ್ಸಿನ್‌ಗೆ 24 ತಾಸಿನಲ್ಲಿ ಡಬ್ಲ್ಯುಎಚ್‌ಒ ಮಾನ್ಯತೆ?

Last Updated 26 ಅಕ್ಟೋಬರ್ 2021, 19:25 IST
ಅಕ್ಷರ ಗಾತ್ರ

ಜಿನೀವಾ (ಪಿಟಿಐ): ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕೋವಿಡ್‌–19 ಲಸಿಕೆ ಕೋವ್ಯಾಕ್ಸಿನ್‌ಗೆ ಸಂಬಂಧಿಸಿದ ದತ್ತಾಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ತಾಂತ್ರಿಕ ಸಲಹಾ ಸಮಿತಿಯು ಮಂಗಳವಾರ ಪರಿಶೀಲನೆಗೆ ಒಳಪಡಿಸಿದೆ. ದತ್ತಾಂಶಗಳು ತೃಪ್ತಿಕರ ಎಂದು ಕಂಡುಬಂದರೆ ಮುಂದಿನ 24 ತಾಸುಗಳಲ್ಲಿ ಕೋವ್ಯಾಕ್ಸಿನ್‌ನ ತುರ್ತು ಬಳಕೆಗೆ ಮಾನ್ಯತೆ ದೊರಕಲಿದೆ ಎಂದು ಡಬ್ಲ್ಯುಎಚ್‌ಒ ವಕ್ತಾರರು ಹೇಳಿದ್ದಾರೆ.

ಹೈದರಾಬಾದ್‌ನ ಭಾರತ್‌ ಬಯೊಟೆಕ್‌ ಸಂಸ್ಥೆಯು ಕೋವ್ಯಾಕ್ಸಿನ್‌ ಲಸಿಕೆಯನ್ನು ಅಭಿವೃದ್ಧಿಪಡಿಸಿ, ತಯಾರಿಸುತ್ತಿದೆ. ತುರ್ತು ಬಳಕೆಯ ಮಾನ್ಯತೆಗಾಗಿ ಸಂಸ್ಥೆಯು ಡಬ್ಲ್ಯುಎಚ್‌ಒಗೆ ಅರ್ಜಿ ಸಲ್ಲಿಸಿದೆ. ಈ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಈಗಾಗಲೇ ಅನುಮತಿ ನೀಡಲಾಗಿದೆ.

ಲಕ್ಷಣಗಳಿರುವ ಕೋವಿಡ್‌–19 ರೋಗದ ವಿರುದ್ಧ ಕೋವ್ಯಾಕ್ಸಿನ್‌ ಶೇ 77.8ರಷ್ಟು ಪರಿಣಾಮಕಾರಿ. ಹೊಸ ಡೆಲ್ಟಾ ರೂಪಾಂತರ ತಳಿಯ ವಿರುದ್ಧ ಶೇ 65.2ರಷ್ಟು ಪರಿಣಾಮಕಾರಿ ಎಂದು ಹೇಳಲಾಗಿದೆ. ಮೂರನೇ ಹಂತದ ಪ್ರಯೋಗದ ದತ್ತಾಂಶಗಳ ವಿಶ್ಲೇಷಣೆಯೂ ನಡೆದಿದೆ ಎಂದು ಭಾರತ್‌ ಬಯೊಟೆಕ್‌ ಹೇಳಿದೆ.

ಆಸ್ಟ್ರಾ ಜೆನೆಕಾ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಭಾರತದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಕೋವಿಡ್‌ ತಡೆ ಲಸಿಕೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT