ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.22ರಂದು ವಿಶ್ವದ ಅತಿ ದೊಡ್ಡ ಕಾರಂಜಿ ಲೋಕಾರ್ಪಣೆ

Last Updated 5 ಅಕ್ಟೋಬರ್ 2020, 6:46 IST
ಅಕ್ಷರ ಗಾತ್ರ

ದುಬೈ: ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ದುಬೈ ನಗರ ಈಗ ಗಿನ್ನಿಸ್‌ ದಾಖಲೆಯ ಹೊಸ್ತಿಲಿನಲ್ಲಿದೆ. ಅದಕ್ಕೆ ಕಾರಣ ಇಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿ ದೊಡ್ಡ ಕಾರಂಜಿ. ಈ ಕಾರಂಜಿಯು ಇದೇ ತಿಂಗಳ 22ರಂದು ಲೋಕಾರ್ಪಣೆಯಾಗಲಿದೆ.

ಪಾಯಿಂಟೆ ಪ್ರದೇಶದಲ್ಲಿ ತಲೆ ಎತ್ತಿರುವ ಕಾರಂಜಿಯು 14,000 ಚದರ ಅಡಿಯಷ್ಟು ವ್ಯಾಪ್ತಿಯಲ್ಲಿ ಚಾಚಿಕೊಂಡಿದ್ದು ಇದಕ್ಕೆ ಬಳಸಿರುವ ‘ಸೂಪರ್‌ ಶೂಟರ್‌’ಗಳು 105 ಮೀಟರ್‌ನಷ್ಟು ಎತ್ತರವಾಗಿವೆ. ಈ ಕಾರಂಜಿಯು 3,000ಕ್ಕೂ ಅಧಿಕ ಎಲ್‌ಇಡಿ ದೀಪಗಳನ್ನು ಒಳಗೊಂಡಿದೆ. ಪ್ರತಿದಿನ ರಾತ್ರಿ 7 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಒಟ್ಟು ಐದು ವಿಭಿನ್ನ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು ಖಲೀಜಿ, ಪಾಪ್‌, ಕ್ಲಾಸಿಕ್‌ ಹಾಗೂ ಪಾಶ್ಚಿಮಾತ್ಯ ದೇಶಗಳ ಪ್ರಸಿದ್ಧ ಹಾಡುಗಳು ಅನುರಣಿಸಲಿವೆ.

‘ಗ್ರಾಹಕರು, ಸ್ಥಳೀಯರು ಹಾಗೂ ಪ್ರವಾಸಿಗರನ್ನು ಅತಿ ಹೆಚ್ಚು ಸಂಖ್ಯೆಯಲ್ಲಿಪಾಯಿಂಟೆ‌ ತಾಣದತ್ತ ಸೆಳೆಯಲು ಈ ಕಾರಂಜಿಯು ನೆರವಾಗಲಿದೆ’ ಎಂದು ನಖೀಲ್‌ ಮಾಲ್‌ನ ವ್ಯವಸ್ಥಾಪಕ ನಿರ್ದೇಶಕ ಓಮರ್‌ ಖೂರಿ ತಿಳಿಸಿದ್ದಾರೆ.

‘ದುಬೈನ ವಿಶ್ವಪ್ರಸಿದ್ಧ ತಾಣಗಳ ಪಟ್ಟಿಗೆ ಈಗ ಪಾಮ್‌ ಕಾರಂಜಿ ಕೂಡ ಸೇರ್ಪಡೆಗೊಳ್ಳಲಿದೆ. ಇದು ಪ್ರವಾಸಿಗರು ಹಾಗೂ ಸ್ಥಳೀಯರ ಆಕರ್ಷಣೀಯ ತಾಣವಾಗುವುದರಲ್ಲಿ ಅನುಮಾನವೇ ಇಲ್ಲ’ ಎಂದು ದುಬೈ ಫೆಸ್ಟಿವಲ್ಸ್‌ ಆ್ಯಂಡ್‌ ರೀಟೆಲ್‌ ಎಸ್ಟಾಬ್ಲಿಷ್‌ಮೆಂಟ್‌‌ (ಡಿಎಫ್‌ಆರ್‌ಇ) ಸಂಸ್ಥೆಯ ಸಿಇಒ ಅಹಮದ್‌ ಅಲ್‌ ಖಾಜಾ ಹೇಳಿದ್ದಾರೆ.

ಚೀನಾದ ಬೀಜಿಂಗ್‌ ವಾಟರ್‌ ಡಿಸೈನ್‌ ಟೆಕ್ನಾಲಜಿ ಸಂಸ್ಥೆಯ ಮುಖ್ಯಸ್ಥ ಕ್ಸಿನ್‌ ಸು ಅವರು ಪಾಮ್‌ ಕಾರಂಜಿಯ ವಿನ್ಯಾಸಕಾರರಾಗಿದ್ದಾರೆ.

‘ಪಾಮ್‌ ಕಾರಂಜಿಯನ್ನು ವಿನ್ಯಾಸಗೊಳಿಸುವ ಯೋಜನೆ ನಮಗೆ ಸಿಕ್ಕಿದ್ದು ಹೆಮ್ಮೆಯ ಸಂಗತಿ’ ಎಂದು ಕ್ಸಿನ್‌ ಸು ನುಡಿದಿದ್ದಾರೆ.

‘ಗಿನ್ನಿಸ್‌ ವಿಶ್ವ ದಾಖಲೆ ತಂಡವು ಪಾಮ್‌ ಕಾರಂಜಿಯನ್ನು ಪರಿಶೀಲಿಸುತ್ತಿದೆ. ಈ ಕಾರಂಜಿಯುಗಿನ್ನಿಸ್‌ ದಾಖಲೆ ಪುಟ ಸೇರುವ ಸಾಧ್ಯತೆ ಇದ್ದು, ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲು ಉತ್ಸುಕರಾಗಿದ್ದೇವೆ’ ಎಂದು ಎಂಇಎನ್‌ಎಯ ಹಿರಿಯ ಮಾರ್ಕೆಟಿಂಗ್‌ ಮ್ಯಾನೇಜರ್‌ ಶ್ಯಾಡಿ ಗಾದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT