ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಶೀತ ಗಾಳಿ ಮುಂದುವರಿಕೆ; 34 ಸಾವು, ಜನಜೀವನ ಅಸ್ತವ್ಯಸ್ತ

Last Updated 26 ಡಿಸೆಂಬರ್ 2022, 15:47 IST
ಅಕ್ಷರ ಗಾತ್ರ

ಬಫೆಲೊ (ಅಮೆರಿಕ) (ಎಪಿ): ಚಳಿಗಾಲದಲ್ಲಿ ಅಪ್ಪಳಿಸಿದ ಚಂಡಮಾರುತದಿಂದಾಗಿ ಅಮೆರಿಕದಲ್ಲಿ ಶೀತ ಗಾಳಿ ಮುಂದುವರೆದಿದೆ. ನ್ಯೂಯಾರ್ಕ್‌ ನಗರಗಳಲ್ಲಿ ಭಾರಿ ಹಿಮದಿಂದಾಗಿ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿದೆ. ಅಪಾಯಕಾರಿ ರಸ್ತೆಗಳಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ವಿಮಾನ ಹಾರಾಟವನ್ನೂ ಸ್ಥಗಿತಗೊಳಿಸಲಾಗಿದೆ.

ಶೀತ ಗಾಳಿಯಿಂದ ಈಗಾಗಲೇ ದೇಶದಲ್ಲಿ 34 ಜನ ಮೃತಪಟ್ಟಿದ್ದಾರೆ. ವಿಪರೀತ ಚಳಿಗೆ ಹೆದರಿ ಅನೇಕರು ಮನೆಯ ಒಳಗೆ ಸಿಲುಕಿಕೊಂಡಿದ್ದಾರೆ.

ನಗರದ ನಯಾಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ 43 ಇಂಚುಗಳಷ್ಟು (1.1ಮೀಟರ್‌) ಹಿಮ ಆವೃತವಾಗಿತ್ತು ಎಂದು ರಾಷ್ಟ್ರೀಯ ಹವಾಮಾನ ಸೇವೆ ಹೇಳಿದೆ.

ಅಗ್ನಿಶಾಮಕ ಸಿಬ್ಬಂದಿ ವಾಹನಗಳು ಅಲ್ಲಲ್ಲಿ ನಿಂತು ಅಪಾಯಕಾರಿ ರಸ್ತೆಗಳಲ್ಲಿ ಸಂಚರಿಸದಂತೆ ವಾಹನ ಸವಾರರಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT