ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡರ್ಬನ್‌ನಲ್ಲಿ ಮುಂದುವರಿದ ಪ್ರವಾಹ: ಸಾವು 300ಕ್ಕೆ ಏರಿಕೆ

Last Updated 14 ಏಪ್ರಿಲ್ 2022, 14:50 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌:ದಕ್ಷಿಣ ಆಫ್ರಿಕಾದ ಡರ್ಬನ್‌ ಭಾಗದಲ್ಲಿ ಪ್ರವಾಹ ಮುಂದುವರಿದಿದ್ದು, ಮೃತಪಟ್ಟವರ ಸಂಖ್ಯೆ 300ಕ್ಕೆ ಏರಿದೆ. ಕೊಚ್ಚಿಹೋದ ಮನೆಗಳ ಅವಶೇಷಗಳನ್ನೇ ಹುಡುಕಿ ಜೀವನ ಕಟ್ಟಿಕೊಳ್ಳಲು ಯತ್ನಿಸುತ್ತಿರುವ ಜನರ ದಯನೀಯ ಸ್ಥಿತಿ ಎಲ್ಲೆಡೆ ಕಾಣಿಸಿದ್ದು, ಸರ್ಕಾರದಿಂದ ಯಾವುದೇ ನೆರವು ದೊರೆತಿಲ್ಲ ಎಂದು ಜನರು ಆರೋಪಿಸಿದ್ದಾರೆ.

ಒಡೆದ ಪೈಪ್‌ಗಳಿಂದಲೇ ನೀರು ಸಂಗ್ರಹಿಸುವ, ಕುಸಿದು ಬಿದ್ದ ಮನೆಗಳಲ್ಲಿ ಇರಬಹುದಾದ ವಸ್ತುಗಳನ್ನು ಸಂಗ್ರಹಿಸಲು ಜನರ ಪರದಾಟವೇ ಈ ಭಾಗದಲ್ಲಿ ಸದ್ಯ ಕಾಣಿಸುವ ಸಾಮಾನ್ಯ ದೃಶ್ಯವಾಗಿದೆ.2017 ಮತ್ತು 2019ರಲ್ಲಿ ಸಹ ಇಂತಹದೇ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಕಳೆದ ನಾಲ್ಕು ದಿನದಿಂದ ಕ್ವಾಝುಲು–ನಟಾಲ್‌ ಪ್ರಾಂತ್ಯದಲ್ಲಿ ವಿದ್ಯುತ್‌ ಇಲ್ಲದೇ ಜನರು ‍ಪರದಾಡುತ್ತಿದ್ದಾರೆ. ಇದರಿಂದ ರಕ್ಷಣಾ ಕಾರ್ಯವೂ ವಿಳಂಬವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT