ಬುಧವಾರ, ಆಗಸ್ಟ್ 10, 2022
23 °C

Covid-19 World Update: ಕೋವಿಡ್ ಸೋಂಕಿತರ ಸಂಖ್ಯೆ 2.99 ಕೋಟಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಜಗತ್ತಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,99,40,411 ಆಗಿದೆ. ಜಾನ್ಸ್  ಹಾಪ್ಕಿನ್ಸ್ ಕೊರೊನಾವೈರಸ್ ಸಂಪನ್ಮೂಲ ಕೇಂದ್ರದ ಅಂಕಿ ಅಂಶಗಳ ಪ್ರಕಾರ ಈವರೆಗೆ ಸಾವಿಗೀಡಾದವರ ಸಂಖ್ಯೆ 94,2,259. ಅಮೆರಿಕದಲ್ಲಿ 6,64,4311 ಸೋಂಕು ಪ್ರಕರಣಗಳು ವರದಿ ಆಗಿದ್ದು 19,7,120 ಮಂದಿ ಸಾವಿಗೀಡಾಗಿದ್ದಾರೆ. 

ಅತೀ ಹೆಚ್ಚು ಸೋಂಕಿತರಿರುವ ರಾಷ್ಟ್ರಗಳ  ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಸೋಂಕಿತರ ಸಂಖ್ಯೆ 51,18,253 ಆಗಿದೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 83,198. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ  ಸೋಂಕಿತರ ಸಂಖ್ಯೆ 44,19,083 ಆಗಿದ್ದು ಸಾವಿನ ಸಂಖ್ಯೆ 13,4,106 ಆಗಿದೆ. ರಷ್ಯಾ  - 10,81,152, ಪೆರು- 74,4,400, ಕೊಲಂಬಿಯಾ- 73,6,377 ಸೋಂಕಿತರಿದ್ದಾರೆ. ವರ್ಲ್ಡೊ ಮೀಟರ್ ಅಂಕಿ ಅಂಶದ ಪ್ರಕಾರ 2,19,06,827 ಮಂದಿ ಈವರೆಗೆ ಚೇತರಿಸಿಕೊಂಡಿದ್ದಾರೆ.

ಕೋವಿಡ್ -19 ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾದರೆ ಅಮೆರಿಕದ ಎಲ್ಲ ಜನರಿಗೂ ಉಚಿತವಾಗಿ ಲಭ್ಯವಾಗುವಂತೆ ಮಾಡುವ ಯೋಜನೆ ಇದೆ ಎಂದು ಅಮೆರಿಕ ಸರ್ಕಾರ ಹೇಳಿದೆ. ಆದಾಗ್ಯೂ ಮುಂದಿನ ವರ್ಷದವರೆಗೆ ವ್ಯಾಪಕವಾಗಿ ಲಸಿಕೆ ನೀಡುವ ಕಾರ್ಯ ಆರಂಭವಾಗುವುದಿಲ್ಲ ಎಂದು ಉನ್ನತ ಆರೋಗ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.

ಮೂರು  ಅಥವಾ ನಾಲ್ಕು ವಾರಗಳಲ್ಲಿ ಲಸಿಕೆ  ಲಭ್ಯವಾಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ ಲಸಿಕೆಗೆ ಅನುಮೋದನೆ ಸಿಕ್ಕಿದ ನಂತರ ದೇಶದಾದ್ಯಂತ ಲಭ್ಯವಾಗಬೇಕಾದರೆ 6 ರಿಂದ 9 ತಿಂಗಳುಗಳು ಬೇಕಾಗುತ್ತದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ  ಕೇಂದ್ರದ ಮುಖ್ಯಸ್ಥರು  ಹೇಳಿದ್ದಾರೆ.

ಕೋವಿಡ್‌ನಿಂದ ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಳ
ನಿರುದ್ಯೋಗಿಗಳಿಗೆ ಅಮೆರಿಕ ಸಹಾಯ ಮಾಡುತ್ತಿದ್ದು ಈ ಸಹಾಯ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ  8,60,000 ಆಗಿದೆ. ಆರ್ಥಿಕ ಹೊಡೆತದಿಂದಾಗಿ ಇಲ್ಲಿನ ಜನರು ಕಂಗೆಟ್ಟಿದ್ದಾರೆ. ಅಮೆರಿಕದಲ್ಲಿ ಮೊದಲ ಕೋವಿಡ್ ಪ್ರಕರಣ ಕಂಡು ಬಂದು ಸೆಪ್ಟೆಂಬರ್‌ಗೆ 9 ತಿಂಗಳುಗಳಾಗಿದೆ.  ಕಳೆದ ವಾರಕ್ಕಿಂತ ಅಮೆರಿಕದಲ್ಲಿ 33,000 ಉದ್ಯೋಗ ನಷ್ಟವಾಗಿದೆ ಎಂದು ಅಲ್ಲಿನ ಕಾರ್ಮಿಕ ಇಲಾಖೆ ಹೇಳಿದೆ.

ನೇಪಾಳದಲ್ಲಿ 60,000 ಗಡಿ ತಲುಪಿದ  ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ
ಒಂದೇ ದಿನದಲ್ಲಿ 1,246 ಹೊಸ ಸೋಂಕುಗಳು ಪತ್ತೆಯಾಗಿರುವ ನೇಪಾಳದಲ್ಲಿ ಕೊರೋನವೈರಸ್ ಪ್ರಕರಣಗಳ ಸಂಖ್ಯೆ ಗುರುವಾರ 60,000 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 10,641 ಪರೀಕ್ಷೆಗಳನ್ನು ನಡೆಸಿದ್ದು 1,246 ಹೊಸ ಕೋವಿಡ್  ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಜನಸಂಖ್ಯಾ ಸಚಿವಾಲಯದ ವಕ್ತಾರ ಜಾಗೇಶ್ವರ ಗೌತಮ್ ಹೇಳಿದ್ದಾರೆ.

ಈಶಾನ್ಯ ಇಂಗ್ಲೆಂಡ್‌ನಲ್ಲಿ ಲಾಕ್‌ಡೌನ್ ನಿಯಮ ಮತ್ತಷ್ಟು ಬಿಗಿ
ನಾರ್ತ್ ಅಂಬರ್‌ಲ್ಯಾಂಜ್, ನ್ಯೂಕಾಸಲ್, ಸಂಡರ್‌ಲ್ಯಾಂಡ್ , ನಾರ್ತ್ ಆ್ಯಂಡ್  ಸೌತ್ ಟೈನ್‌ಸೈಡ್, ಗೇಟ್‌ಶೆಡ್ ಮಮತ್ತು ಕೌಂಟಿ ಡರ್ಹಾಮ್‌ನಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಇಲ್ಲಿ ಸಂಚಾರಕ್ಕೆ ಕಠಿಣ ನಿರ್ಬಂಧ ವಿಧಿಸಲಾಗಿದೆ.  
ಇಲ್ಲಿ 1 ಲಕ್ಷ ಜನರ ಪೈಕಿ 103  ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಬ್ರಿಟನ್‌ನ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹನ್‌ಕಾಕ್ ಹೇಳಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು