ಭಾರತದ ಲಸಿಕೆ ಕಾರ್ಯಕ್ರಮ ಎಲ್ಲರಿಗೂ ಮಾದರಿ: ವಿಶ್ವಬ್ಯಾಂಕ್‌ನ ಡೇವಿಡ್ ಮಾಲ್‌ಪಾಸ್

ವಾಷಿಂಗ್ಟನ್: 'ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಪೂರೈಸಲಾಗುವ ಅನೇಕ ಲಸಿಕೆಗಳನ್ನು ಉತ್ಪಾದಿಸುವ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಂತಹ (ಎಸ್‌ಐಐ) ಕಂಪನಿಯನ್ನು ಹೊಂದಿರುವುದು ಭಾರತದ ಅದೃಷ್ಟ. ಭಾರತ ಕೈಗೊಂಡಿರುವ ಲಸಿಕೆ ಕಾರ್ಯಕ್ರಮ ಎಲ್ಲರಿಗೂ ಮಾದರಿ’ ಎಂದು ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಡೇವಿಡ್ ಮಾಲ್‌ಪಾಸ್ ಹೇಳಿದ್ದಾರೆ.
ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಾಗೂ ವಿಶ್ವಬ್ಯಾಂಕ್‌ನ ಮುಂಬರುವ ಸಭೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ದೇಶದ ಜನರಿಗೆ ಲಸಿಕೆ ನೀಡುವ ಬೃಹತ್ ಕಾರ್ಯಕ್ರಮವನ್ನು ಸಹ ಭಾರತ ಹಮ್ಮಿಕೊಂಡಿದ್ದು, ಇದು ಇತರ ದೇಶಗಳಿಗೆ ಮಾದರಿ’ ಎಂದರು.
‘ಅಮೆರಿಕ, ಯುರೋಪ್ ಅಥವಾ ದಕ್ಷಿಣ ಆಫ್ರಿಕಾ ಇಲ್ಲವೇ ಭಾರತದಲ್ಲಿನ ಲಸಿಕಾ ಕಾರ್ಯಕ್ರಮಕ್ಕೆ ಎಷ್ಟು ಲಸಿಕೆಯ ಅಗತ್ಯ ಇದೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ತನ್ನ ಜನರಿಗೆ ಲಸಿಕೆ ನೀಡಲು ಭಾರತ ಕೈಗೊಂಡಿರುವ ಕಾರ್ಯಕ್ರಮದಿಂದ ನಾನು ಉತ್ತೇಜಿತನಾಗಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.