ಶುಕ್ರವಾರ, ಜುಲೈ 1, 2022
22 °C
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಇದಕ್ಕಿಂತಲೂ ದೊಡ್ಡ ಗೆಲುವು ಖಚಿತ

ಅಮೆರಿಕದಲ್ಲೂ ಬಿಜೆಪಿ ಚುನಾವಣೆ ಗೆಲುವಿಗೆ ಸಂಭ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಉತ್ತರ ಪ್ರದೇಶ ಸೇರಿದಂತೆ ಭಾರತದ 5 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿರುವುದಕ್ಕೆ ಅಮೆರಿಕದಲ್ಲಿ ವಿಜಯೋತ್ಸವ ಆಚರಿಸಲಾಗಿದೆ.

ಈ ರಾಜ್ಯಗಳಲ್ಲಿ ಬಿಜೆಪಿ ಮಾಡಿದ ಉತ್ತಮ ಕಾರ್ಯಗಳಿಂದಾಗಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದೆ ಎಂದು ಅಮೆರಿಕನ್‌ ಇಂಡಿಯಾ ಪಬ್ಲಿಕ್‌ ಅಫೇರ್ಸ್‌ ಕಮಿಟಿಯ ಅಧ್ಯಕ್ಷ ಜಗದೀಶ್ ಸೇವ್ಹಾನಿ ತಿಳಿಸಿದ್ದಾರೆ.

‘ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಆಡಳಿತದ ಬಗ್ಗೆ ಜನ ನಂಬಿಕೆಯಿಟ್ಟಿರುವುದನ್ನು ದೃಢಪಡಿಸುತ್ತದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಬಡವರು, ರೈತರು ಮತ್ತು ಅಭಿವೃದ್ಧಿ ಪರವಾದ ನೀತಿಗಳಿಗೆ ಹಿಡಿದ ಕನ್ನಡಿಯಾಗಿದೆ. ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಮೇಲಿನ ಜನರ ನಂಬಿಕೆಯಿಂದ ನಾವು ಸೆಮಿಫೈನಲ್ ಗೆದ್ದಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಇದಕ್ಕಿಂತಲೂ ದೊಡ್ಡ ಮಟ್ಟದ ಗೆಲುವು ಸಿಗಲಿದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ನಾವು ಈಗ ನ್ಯೂಯಾರ್ಕ್‌ನಲ್ಲಿ ಬಿಜೆಪಿಯ ವಿಜಯದ ಸಂಭ್ರಮ ಆಚರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ವಾಷಿಂಗ್ಟನ್ ಡಿಸಿ, ಹೂಸ್ಟನ್, ಲಾಸ್ ಏಂಜಲೀಸ್ ಮತ್ತು ಅಟ್ಲಾಂಟಾ ಸೇರಿ ಇತರ ನಗರಗಳಲ್ಲಿ ಇದೇ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು