ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ಕರೆನ್ಸಿ ಸಾಗಣೆಭಾರತದ ಉದ್ಯಮಿ ಬಂಧನ

Last Updated 6 ಜೂನ್ 2022, 14:35 IST
ಅಕ್ಷರ ಗಾತ್ರ

ಕೊಲಂಬೊ (ಪಿಟಿಐ): ಸುಮಾರು 4 ಕೋಟಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ 45 ವರ್ಷದ ಭಾರತೀಯ ಉದ್ಯಮಿಯನ್ನು ಶ್ರೀಲಂಕಾ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ಉದ್ಯಮಿಯ ಹೆಸರು ಬಹಿರಂಗಪಡಿಸಿಲ್ಲ. ಇವರು 117,000 ಕೆನಡಾ ಡಾಲರ್‌ಗಳು (₹90 ಲಕ್ಷ), 19,000 ಯುರೊ(₹15.8 ಲಕ್ಷ) ಅನ್ನು ಸಾಗಣೆ ಮಾಡುತ್ತಿದ್ದರು. ಉದ್ಯಮಿಯ ವರ್ತನೆ ಕುರಿತು ಗುಮಾನಿಯಿಂದ ಬ್ಯಾಗ್‌ ತಪಾಸಣೆ ಮಾಡಿದಾಗ ಕೃತ್ಯ ಗೊತ್ತಾಗಿದೆ.

ಚೆನ್ನೈಗೆ ತೆರಳುತ್ತಿದ್ದ ಇಂಡಿಗೊ ವಿಮಾನ ಏರಲು ಉದ್ಯಮಿ ಸಿದ್ಧತೆ ನಡೆಸಿದ್ದರು ಎಂದು ಸ್ಥಳೀಯ ಡೈಲಿ ನ್ಯೂಸ್‌ ಲಂಕಾ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT