ಬುಧವಾರ, ಜುಲೈ 6, 2022
22 °C

ಸಿಂಗಪುರ: ವಾಹನದ ಎಂಜಿನ್‌ನಲ್ಲಿ ಮಣ್ಣು ಸುರಿದ ಭಾರತೀಯನಿಗೆ ಜೈಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ತಾನು ಉದ್ಯೋಗದಲ್ಲಿದ್ದ ಕಂಪನಿಯ ವಾಹನದ ಎಂಜಿನ್‌ನಲ್ಲಿ ಮಣ್ಣು ಸುರಿದಿದ್ದ ಭಾರತೀಯ ಚಾಲಕನಿಗೆ ಸಿಂಗಪುರದ ಕೋರ್ಟ್‌ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ಸೀನಿ ಪರಶಿವಮ್ (40) ಜೈಲು ಶಿಕ್ಷೆಗೆ ಗುರಿಯಾದ ಚಾಲಕ.

ಇಂಟಿಗ್ರೇಟೆಡ್ ಇನ್ಫ್ರಾಸ್ಟ್ರಕ್ಚರ್ ಎಂಬ ಕಂಪನಿಯಲ್ಲಿ ಚಾಲಕನಾಗಿದ್ದ ಸೀನಿ, ಕಂಪನಿಗೆ ಸೇರಿದ ವಿಶ್ರಾಂತಿಧಾಮದಲ್ಲಿಯೇ ವಾಸ್ತವ್ಯ ಮಾಡುತ್ತಿದ್ದ. ಉದ್ಯೋಗಕ್ಕೆ ಸಂಬಂಧಿಸಿದ ವಿಷಯವಾಗಿ ಆಡಳಿತ ಮಂಡಳಿ ಬಗ್ಗೆ ಕೋಪಗೊಂಡಿದ್ದ ಆತ 2020ರ ಮಾರ್ಚ್ 21ರಂದು ಈ ಕೃತ್ಯ ಎಸಗಿದ್ದ. ವಾಹನದ ಎಂಜಿನ್‌ನಲ್ಲಿ ಆತ ಮಣ್ಣು ಸುರಿದ ದೃಶ್ಯಗಳು ಸಿ.ಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು ಎಂದು ನ್ಯೂಸ್ ಏಷ್ಯಾ ವಾಹಿನಿ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು