ಗುರುವಾರ , ಆಗಸ್ಟ್ 11, 2022
26 °C

ಅಮೆರಿಕ: ಭಾರತ ಮೂಲದ ಮತ್ತೊಬ್ಬ ವ್ಯಕ್ತಿ ಗುಂಡಿನ ದಾಳಿಗೆ ಬಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್: ಅಮೆರಿಕದ ಮೇರಿಲ್ಯಾಂಡ್ ರಾಜ್ಯದಲ್ಲಿ ತಲೆಗೆ ಬಿದ್ದ ಗುಂಡೇಟಿನಿಂದ ಭಾರತದ ವ್ಯಕ್ತಿಯೊಬ್ಬರು ಹತ್ಯೆಯಾದ ಬೆನ್ನಲ್ಲೇ, ನಿಂತಿದ್ದ ಕಾರಿನಲ್ಲಿ ಕೂತಿದ್ದ ಭಾರತೀಯ ಮೂಲದ 31 ವರ್ಷದ ವ್ಯಕ್ತಿಯನ್ನು ಬಂದೂಕುಧಾರಿ ವ್ಯಕ್ತಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. 

ಸತ್ನಂ ಸಿಂಗ್(31) ಅವರು ಶನಿವಾರ ತಮ್ಮ ಸ್ನೇಹಿತರೊಬ್ಬರಿಂದ ಪಡೆದ ಜೀಪ್ ರಾಂಗ್ಲರ್ ಸಹರಾ ಕಾರನ್ನು ಸೌತ್ ಓಝೋನ್ ಉದ್ಯಾನದಲ್ಲಿ ನಿಲ್ಲಿಸಿ ಕೂತಿದ್ದರು. ಮಧ್ಯಾಹ್ನ 3.45ರ ವೇಳೆಗೆ ಬಂದ ಬಂದೂಕುಧಾರಿಯು, ಗುಂಡು ಹಾರಿಸಿದ್ದಾನೆ. ಈ ವೇಳೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಬಂದೂಕುಧಾರಿ ವ್ಯಕ್ತಿಯು, ಸತ್ನಂ ಸಿಂಗ್ ಅವರನ್ನು ಕೊಲ್ಲುವ ಉದ್ದೇಶ ಹೊಂದಿದ್ದನೇ ಅಥವಾ ಕಾರಿನ ಮಾಲೀಕನನ್ನು ಕೊಲ್ಲುವ ಉದ್ದೇಶವಿತ್ತೇ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು