ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಕೋವಿಡ್ ನಿಧಿಗೆ ₹ 13 ಕೋಟಿ ವಂಚನೆ– ಭಾರತ ಮೂಲದ ವ್ಯಕ್ತಿಗೆ 2 ವರ್ಷ ಜೈಲು

Last Updated 25 ಆಗಸ್ಟ್ 2021, 8:27 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಕೋವಿಡ್ 19 ವಿಪತ್ತು ಪರಿಹಾರ ಸಾಲದಲ್ಲಿ ಸುಮಾರು 1.8 ಮಿಲಿಯನ್ ಅಮೆರಿಕ ಡಾಲರ್(ಸುಮಾರು 13 ಕೋಟಿ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 48 ವರ್ಷದ ಭಾರತ ಮೂಲದ ಟೆಕ್ ಎಕ್ಸಿಕ್ಯೂಟಿವ್‌ಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ವಾಷಿಂಗ್ಟನ್‌ನ ಕ್ಲೈಡ್ ಹಿಲ್‌ನ ಮುಕುಂದ್ ಮೋಹನ್ ಮಾರ್ಚ್ 15 ರಂದು ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ತಿಳಿಸಿದೆ.

ಮೋಹನ್ ಅವರು ತಾವು ನಡೆಸುತ್ತಿದ್ದ ಕಂಪನಿಗಳಿಗೆ ಸರ್ಕಾರದ ಪೇಚೆಕ್ ಪ್ರೊಟೆಕ್ಷನ್ ಪ್ರೋಗ್ರಾಂ ಮೂಲಕ ಮೋಸದಿಂದ ಸಾಲ ಪಡೆದಿದ್ದಾರೆ. ಇದಕ್ಕಾಗಿ, ನಕಲಿ ಉದ್ಯೋಗ ದಾಖಲೆಗಳನ್ನು ಸೃಷ್ಟಿಸಿದ್ದಾರೆ.

ನಕಲಿ ದಾಖಲೆಗಳನ್ನು ಬಳಸಿ ಅವರು 5.5 ಮಿಲಿಯನ್ ಅಮೆರಿಕ ಡಾಲರ್ ಸಾಲಕ್ಕೆ ಅರ್ಜಿ ಸಲ್ಲಿಸಿ, 1.8 ಮಿಲಿಯನ್ ಪಡೆದಿದ್ದರು. ಜುಲೈ 2020ರಲ್ಲಿ ಅವರನ್ನು ಬಂಧಿಸಲಾಗಿತ್ತು.

ಮೋಹನ್‌ ಅವರಿಗೆ ಮಂಗಳವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ನ್ಯಾಯಾಲಯದ ದಾಖಲೆಗಳ ಪ್ರಕಾರ, ಮೋಹನ್ ಎಂಟು ವಿಪತ್ತು ಸಾಲದ ಅರ್ಜಿಗಳನ್ನು ಸಲ್ಲಿಸಿದ್ದರು.

ಸಾಲದ ಅರ್ಜಿಗಳಿಗೆ ಬೆಂಬಲವಾಗಿ ಅವರು, ನಕಲಿ ಮತ್ತು ತಿರುಚಲಾದ ದಾಖಲೆಗಳನ್ನು ಸಲ್ಲಿಸಿದ್ದರು. ಅದರಲ್ಲಿ, ನಕಲಿ ಫೆಡರಲ್ ತೆರಿಗೆ ಫೈಲಿಂಗ್‌ಗಳು ಸಹ ಇದ್ದವು.

2019ರಲ್ಲಿ ಮೋಹನ್ ಸಾಲದಾತರಿಗೆ ತಪ್ಪು ಮಾಹಿತಿ ನೀಡಿದ್ದರು. ಅವರ ಕಂಪನಿಯಾದ ಮಹೆಂಜೊ ಇಂಕ್ ಹತ್ತಾರು ಉದ್ಯೋಗಿಗಳನ್ನು ಹೊಂದಿದ್ದು, ಉದ್ಯೋಗಿಗಳ ವೇತನ ಮತ್ತು ತೆರಿಗೆ ರೂಪದಲ್ಲಿ ಲಕ್ಷಾಂತರ ಡಾಲರ್‌ ಪಾವತಿಸಿರುವುದಾಗಿ ಮಾಹಿತಿ ನೀಡಿದ್ದರು.

ಸತ್ಯವೇನೆಂದರೆ, ಮಹೆಂಜೊ ಕಂಪನಿಯನ್ನು ಮೋಹನ್ 2020ರಲ್ಲಿ ಖರೀದಿಸಿದ್ದಾರೆ. ಆಗ, ಕಂಪನಿಯಲ್ಲಿ ಯಾವುದೇ ಉದ್ಯೋಗಿಗಳು ಮತ್ತು ಉದ್ಯಮ ಚಟುವಟಿಕೆಗಳು ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT