ಶನಿವಾರ, ಅಕ್ಟೋಬರ್ 24, 2020
26 °C

ಗೆಳತಿಯನ್ನು ಕೊಂದ ನರಭಕ್ಷಕನಿಗೆ ಜೀವಾವಧಿ ಶಿಕ್ಷೆ

ಎ‌ಪಿ Updated:

ಅಕ್ಷರ ಗಾತ್ರ : | |

ಜೆಫರ್ಸ್‌ನ್‌ವಿಲ್ಲೆ (ಅಮೆರಿಕ): ತನ್ನ ಮಾಜಿ ಗೆಳೆತಿಯನ್ನು ಕೊಂದು ಆಕೆಯ ದೇಹದ ಭಾಗಗಳನ್ನು ತಿನ್ನುತ್ತಿದ್ದ ದಕ್ಷಿಣ ಇಂಡಿಯಾನಾದ ವ್ಯಕ್ತಿಯೊಬ್ಬನಿಗೆ ಪೆರೋಲ್ ಇಲ್ಲದೆ ಮಂಗಳವಾರ ಜೀವಾವಧಿ ಶಿಕ್ಷೆಯನ್ನು ಅಲ್ಲಿನ ನ್ಯಾಯಾಲಯ ವಿಧಿಸಿದೆ.

ಜೋಸೆಫ್‌ ಒಬೆರ್‌ಹಾನ್ಸ್ಲೆ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಗೆಳತಿ ಟಮ್ಮಿ ಜೋ ಬ್ಲಾಂಟನ್‌ಳನ್ನು ಕ್ರೂರವಾಗಿ ಕೊಂದಿದ್ದ. ಪ್ರಕರಣದ ವಿಚಾರಣೆ ನಡೆಸಿದ ಕ್ಲಾರ್ಕ್‌ ಸರ್ಕ್ಯೂಟ್‌ ನ್ಯಾಯಾಧೀಶರಾದ ವಿಕ್ಕಿ ಕಾರ್ಮೈಕಲ್ ಅವರು ಒಬೆರ್‌ಹಾನ್ಸ್ಲೆಗೆ ಶಿಕ್ಷೆ ವಿಧಿಸಿದರು.

46 ವರ್ಷದ ಬ್ಲಾಂಟನ್‌ ಅವರು 2014ರ ಸೆಪ್ಟೆಂಬರ್‌ 11 ರಂದು ಅವರ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದರು. ಅವರ ದೇಹದ ಮೇಲೆ 25 ಗಾಯಗಳಾಗಿದ್ದವು. ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು