ಶುಕ್ರವಾರ, ಜುಲೈ 30, 2021
23 °C

ಇರಾನ್‌: ಏಕೈಕ ಪರಮಾಣು ವಿದ್ಯುತ್‌ ಸ್ಥಾವರ ತುರ್ತು ಸ್ಥಗಿತ

ಎಪಿ Updated:

ಅಕ್ಷರ ಗಾತ್ರ : | |

Prajavani

ಟೆಹರಾನ್‌: ‘ಇರಾನ್‌ನ ಏಕೈಕ ಪರಮಾಣು ವಿದ್ಯುತ್‌ ಸ್ಥಾವರವನ್ನು ತುರ್ತಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ.

‘ಬುಶೆಹ್ರ್ ಸ್ಥಾವರವನ್ನು ಶನಿವಾರ ಸ್ಥಗಿತಗೊಳಿಸಲಾಗಿದ್ದು, ಮೂರು, ನಾಲ್ಕು ದಿನಗಳ ಕಾಲ ಸ್ಥಾವರ ಮುಚ್ಚಿರಲಿದೆ. ಇದರಿಂದಾಗಿ ವಿದ್ಯುತ್‌ ಕಡಿತ ಉಂಟಾಗುವ ಸಾಧ್ಯತೆಗಳಿವೆ’ ಎಂದು ಸರ್ಕಾರಿ ಸ್ವಾಮ್ಯದ ವಿದ್ಯುಚ್ಛಕ್ತಿ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ವಿದ್ಯುತ್‌ ಸ್ಥಾವರವನ್ನು ತುರ್ತಾಗಿ ಸ್ಥಗಿತಗೊಳಿಸಲಾಗಿದೆ. ಈ ಸ್ಥಾವರ ರಷ್ಯಾದ ನೆರವಿನೊಂದಿಗೆ 2011ರಲ್ಲಿ ಪ್ರಾರಂಭವಾಗಿತ್ತು. ಅಣ್ವಸ್ತ್ರ ಪ್ರಸರಣ ನಿಷೇಧ ಕಾನೂನಿನಂತೆ ಈ ಸ್ಥಾವರದಲ್ಲಿ ಬಳಸಲಾದ ಯುರೇನಿಯಂ ಇಂಧನ ಸರಳುಗಳನ್ನು ರಷ್ಯಾಕ್ಕೆ ಕಳುಹಿಸಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು