ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ | ಯುಎಇ ನೆರವಿನ ಹಸ್ತ: ಬುರ್ಜ್ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜ

Last Updated 26 ಏಪ್ರಿಲ್ 2021, 8:25 IST
ಅಕ್ಷರ ಗಾತ್ರ

ದುಬೈ: ಅರಬ್‌ ಸಂಯುಕ್ತ ಸಂಸ್ಥಾನವು (ಯುಎಇ) ಬುರ್ಜ್ ಖಲೀಫಾ ಸೇರಿದಂತೆ ಪ್ರಮುಖ ಕಟ್ಟಡಗಳಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ವಿದ್ಯುತ್‌ದ್ದೀಪದೊಂದಿಗೆ ಬೆಳಗಿಸುವ ಮೂಲಕ ಒಗ್ಗಟ್ಟನ್ನು ‍ಪ್ರದರ್ಶಿಸಿದೆ.

‘ಅಬುಧಾಬಿಯ ರಾಷ್ಟ್ರೀಯ ತೈಲ ಸಂಸ್ಥೆಯ (ಎಡಿಎನ್‌ಒಸಿ) ಮುಖ್ಯ ಕಚೇರಿಯ ಕಟ್ಟಡ ಮತ್ತು ವಿಶ್ವದ ಅತ್ಯಂತ ಎತ್ತರದ ಕಟ್ಟಡಬುರ್ಜ್ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಬೆಳಗಿಸಲಾಗಿತ್ತು. ಈ ಮೂಲಕ ಯುಎಇ, ಕೋವಿಡ್‌ನ ಎರಡನೇ ಅಲೆಯನ್ನು ಎದುರಿಸುತ್ತಿರುವ ಭಾರತಕ್ಕೆ ತನ್ನ ಸಹಕಾರವನ್ನು ಪ್ರದರ್ಶಿಸಿದೆ’ ಎಂದು ಡಬ್ಲ್ಯೂಎಎಂ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ಕೋವಿಡ್‌ ಸೋಂಕಿನ ವಿರುದ್ಧ ಭಾರತ ಹೋರಾಡುತ್ತಿದೆ. ಈ ಕಷ್ಟಕಾಲವನ್ನು ಎದುರಿಸಲು ಮಿತ್ರ ರಾಷ್ಟ್ರಭಾರತದೊಂದಿಗೆ ಯುಎಇ ನಿಂತಿದೆ. ಇದರ ‍ಪ್ರತೀಕವಾಗಿ ಬುರ್ಜ್‌ ಖಲೀಫ್‌ದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಬೆಳಗಿಸಲಾಗಿದೆ’ ಎಂದು ಯುಎಇನಲ್ಲಿರುವ ಭಾರತದ ರಾಯಭಾರ ಕಚೇರಿ ಟ್ವೀಟ್‌ ಮಾಡಿದೆ. ಇದರೊಂದಿಗೆ ವಿಡಿಯೊವೊಂದನ್ನು ಹಂಚಿಕೊಂಡಿದೆ.

‘ಈ ಕಷ್ಟದ ಸಮಯದಲ್ಲಿ ಯುಎಇ ತನ್ನ ಆಪ್ತ ಗೆಳೆಯನಿಗೆ ನೀಡಿದ ಬೆಂಬಲಕ್ಕೆ ಭಾರತ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಯುಎಇನಲ್ಲಿರುವ ಭಾರತದ ರಾಯಭಾರಿ ಪವನ್‌ ಕಪೂರ್‌ ಟ್ವೀಟ್‌ ಮಾಡಿದ್ದಾರೆ.

ಎಡಿಎನ್‌ಒಸಿಯ ಕಟ್ಟಡದಲ್ಲಿ ‘ಸ್ಟೇ ಸ್ಟ್ರಾಂಗ್‌ ಇಂಡಿಯಾ’ ಎಂಬ ಸಂದೇಶವನ್ನು ಬೆಳಗಿಸಲಾಗಿತ್ತು.

ಯುಎಇನ ವಿದೇಶಾಂಗ ಸಚಿವ ಅಬ್ದುಲ್‌ ಬಿಲ್‌ ಜಯೀದ್‌ ಅಲ್ ನಹ್ಯಾನ್ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈ.ಶಂಕರ್‌ ಅವರೊಂದಿಗೆ ಭಾನುವಾರ ಫೋನ್‌ ಕರೆಯ ಮೂಲಕ ಮಾತುಕತೆ ನಡೆಸಿದರು. ಈ ವೇಳೆ, ಭಾರತಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ನೀಡುವುದಾಗಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT