ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಫಲ್ಯಗಳಿಂದ ಪಾಠ– ಫ್ರಾನ್ಸ್‌ನಿಂದ ಕಲಿಯಿರಿ: ಅಶ್ವಿನಿ ವೈಷ್ಣವ್‌

Last Updated 15 ಜೂನ್ 2022, 15:26 IST
ಅಕ್ಷರ ಗಾತ್ರ

ಪ್ಯಾರಿಸ್‌: ‘ಫ್ರಾನ್ಸ್‌ ಚಿಂತನೆಯ ವಿಧಾನದಿಂದ ಭಾರತೀಯ ಸ್ಟಾರ್ಟ್‌ಅಪ್‌ಗಳು ತಮ್ಮ ವೈಫಲ್ಯಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕಲಿಯಬೇಕು. ಇವು ಉತ್ತಮ ಗುಣಮಟ್ಟದ ಉತ್ಪನ್ನಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ’ ಎಂದು ಭಾರತದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.

ವೈವಾಟೆಕ್‌ನಲ್ಲಿ ನಡೆದ ತಾಂತ್ರಿಕ ಪ್ರದರ್ಶನದಲ್ಲಿ ಭಾರತೀಯ ಪೆವಿಲಿಯನ್‌ ಅನ್ನು ಉದ್ಘಾಟಿಸಿದ ಅವರು, ‘ಶತಕೋಟಿಯಷ್ಟು ಮೊಬೈಲ್‌ಗಳು, ಶತಕೋಟಿಯಷ್ಟು ಬ್ಯಾಂಕ್ ಖಾತೆಗಳು ಹಾಗೂ ಅದಕ್ಕೂ ಅಧಿಕವಾದ ಡಿಜಿಟಲ್‌ ಸಾಧನಗಳ ಸಂಯೋಜನೆಯು ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಮತ್ತು ವಿಶಿಷ್ಟ ಬಳಕೆದಾರರ ಸೃಷ್ಟಿಗೆ ದಾರಿ ಮಾಡಿಕೊಟ್ಟಿದೆ’ ಎಂದರು.

‘ನಾವು ಫ್ರಾನ್ಸ್‌ನಿಂದ ಕಲಿಯಬೇಕಾದ ಒಂದು ಸಂಗತಿಯೆಂದರೆ, ಇಲ್ಲಿಯವರ ಚಿಂತನಾ ವಿಧಾನ. ಸಾಮಾನ್ಯವಾಗಿ ನಾವೆಲ್ಲರೂ ಉಪಯುಕ್ತದಲ್ಲಿರುವ ಸಾಧನಗಳ ಬಗ್ಗೆ ಅಧ್ಯಯನ ನಡೆಸುತ್ತೇವೆ. ಆದರೆ ವೈಫಲ್ಯಗೊಂಡ ಪ್ರಕ್ರಿಯೆಗಳನ್ನು ಹೇಗೆ ಉತ್ತಮಪಡಿಸಬೇಕು ಎಂದು ಇಲ್ಲಿನ ಚಿಂತನಾ ವಿಧಾನ ಹೇಳುತ್ತದೆ’ ಎಂದರು.‌

ವೈವಾಟೆಕ್‌ನ ತಾಂತ್ರಿಕ ಪ್ರದರ್ಶನದಲ್ಲಿ ಭಾರತವು ವರ್ಷದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT