ಬುಧವಾರ, ಜನವರಿ 19, 2022
23 °C

ಅಫ್ಗಾನಿಸ್ತಾನ: 130 ಮಹಿಳೆಯರ ಮಾರಾಟ ಆರೋಪ, ವ್ಯಕ್ತಿ ಬಂಧನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕುಂಡುಜ್‌: ಉತ್ತರ ಅಫ್ಗಾನಿಸ್ತಾನದಲ್ಲಿ 130 ಮಹಿಳೆಯರನ್ನು ಮಾರಾಟ ಮಾಡಿದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ತಾಲಿಬಾನ್‌ ಪಡೆಗಳು ಬಂಧಿಸಿವೆ.

‘ಜಾಜ್‌ಜಾನ್‌ ಪ್ರಾಂತ್ಯದಲ್ಲಿ ದಮುಲ್ಲಾ ಸೆರಾಜ್‌ ಎಂಬಾತನನ್ನು ಸೋಮವಾರ ಬಂಧಿಸಲಾಗಿದೆ’ ಎಂದು ತಾಲಿಬಾನ್‌ ಪ್ರಾಂತೀಯ ಪೊಲೀಸ್‌ ಮುಖ್ಯಸ್ಥ ಮೊಹಮ್ಮದ್ ಸರ್ದಾರ್ ಮುಬಾರಿಜ್‌ ಸುದ್ದಿಗಾರರಿಗೆ ತಿಳಿಸಿದರು.

‘ಬಡ ಮಹಿಳೆಯರೇ ಈ ಮಾರಾಟ ಜಾಲದ ಸಂತ್ರಸ್ತರಾಗಿರುವುದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ. ತನಿಖೆ ಪೂರ್ಣಗೊಂಡ ನಂತರ ಈ ಮಾರಾಟ ಜಾಲದ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವುದು’ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು