ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಪ್ಟೊ ಹೂಡಿಕೆ ಮಾಹಿತಿ ದುರ್ಬಳಕೆ: ಭಾರತೀಯರಿಬ್ಬರ ವಿರುದ್ಧ ಎಫ್‌ಬಿಐ ಪ್ರಕರಣ

Last Updated 22 ಜುಲೈ 2022, 17:11 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಕ್ರಿಪ್ಟೊಕರೆನ್ಸಿ ಹೂಡಿಕೆಯ ರಹಸ್ಯ ಮಾಹಿತಿಗಳನ್ನು ನೀಡಿ, ಅಕ್ರಮವಾಗಿ ಹಣ ಸಂಪಾದಿಸಿದ ಆರೋಪದಲ್ಲಿ ಇಬ್ಬರು ಭಾರತೀಯ ಸೋದರರು ಮತ್ತು ಅವರ ಅಮೆರಿಕದ ಗೆಳೆಯನೊಬ್ಬನ ವಿರುದ್ಧ ಇಲ್ಲಿ ಪ್ರಕರಣ ದಾಖಲಾಗಿದೆ. ಕ್ರಿಪ್ಟೊಕರೆನ್ಸಿ ಹೂಡಿಕೆಗೆ ಸಂಬಂಧಿಸಿದಂತೆ ಇಂತಹ ಪ್ರಕರಣ ದಾಖಲಾಗಿದ್ದು ಇದೇ ಮೊದಲು.

ಭಾರತೀಯರಾದ ಇಶಾನ್‌ ವಾಹಿ (32), ಅವರ ತಮ್ಮ ನಿಖಿಲ್ ವಾಹಿ (26) ಮತ್ತು ಅಮೆರಿಕದ ಸಮೀರ್ ರಮಾನಿ (33) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕ್ರಿಪ್ಟೊಕರೆನ್ಸಿ ಹೂಡಿಕೆ ನಿರ್ವಹಣಾ ಕಂಪನಿ ‘ಕಾಯ್ನ್‌ಬೇಸ್‌ ಎಕ್ಸ್‌ಚೇಂಜ್‌’ನ ವಹಿವಾಟುಗಳ ಬಗೆಗಿನ ರಹಸ್ಯ ಮಾಹಿತಿಗಳನ್ನು ಆರೋಪಿಗಳು ಹೂಡಿಕೆದಾರರಿಗೆ ನೀಡುತ್ತಿದ್ದರು. ಈ ರೀತಿ ಅಕ್ರಮವಾಗಿ ಕೆಲವು ಹೂಡಿಕೆದಾರರಿಗೆ ಅನುಕೂಲವಾಗುವಂತೆ ಮಾಡಿದ್ದರು. ಇದರಿಂದ ಇತರ ಹೂಡಿಕೆದಾರರಿಗೆ ಮುಕ್ತ ವಹಿವಾಟಿನ ಅವಕಾಶ ತಪ್ಪಿ ಹೋಗುತ್ತಿತ್ತು ಎಂದು ಎಫ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಈ ರೀತಿ ರಹಸ್ಯ ಮಾಹಿತಿಯನ್ನು ನೀಡುವ ಮೂಲಕ ಮೂವರೂ ಒಟ್ಟು ಸುಮಾರು ₹12 ಕೋಟಿ (15 ಲಕ್ಷ ಡಾಲರ್‌) ಹಣವನ್ನು ಅಕ್ರಮವಾಗಿ ಗಳಿಸಿದ್ದಾರೆ. ಈ ಸಂಬಂಧ ಅಮೆರಿಕದ ಸ್ಟಾಕ್‌ ಎಕ್ಸ್‌ಚೇಂಜ್‌ ಕಮಿಷನ್ ನೀಡಿದ್ದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮೂವರ ವಿರುದ್ಧವೂ ಆನ್‌ಲೈನ್‌ ವಂಚನೆಗೆ ಸಂಚು ರೂಪಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಪರಾಧಕ್ಕೆ ಗರಿಷ್ಠ 20 ವರ್ಷಗಳ ಜೈಲುಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT