ಕಠ್ಮಂಡು: ನೇಪಾಳದ ನೂತನ ಪ್ರಧಾನಿ ನೇಪಾಳ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಅವರು ಭಾನುವಾರ ಸಂಸತ್ತಿನ ಕೆಳಮನೆಯಲ್ಲಿ ವಿಶ್ವಾಸ ಮತ ಪಡೆಯುವಲ್ಲಿ ಯಶಸ್ವಿಯಾದರು.

275 ಸದಸ್ಯರ ಸದನದಲ್ಲಿ ದೇವುಬಾ ಅವರು 165 ಮತಗಳನ್ನು ಗಳಿಸಿದ್ದಾರೆ ಎಂದು ‘ಹಿಮಾಲಯನ್ ಟೈಮ್ಸ್’ ವರದಿ ಮಾಡಿದೆ.

ಮತದಾನ ಪ್ರಕ್ರಿಯೆಯಲ್ಲಿ ಒಟ್ಟು 249 ಸದಸ್ಯರು ಭಾಗವಹಿಸಿದ್ದರು ಮತ್ತು ಅವರಲ್ಲಿ 83 ಮಂದಿ ದೇವುಬಾ ಅವರ ವಿರುದ್ಧ ಮತ ಚಲಾಯಿಸಿದರೆ, ಒಬ್ಬರು ತಟಸ್ಥರಾಗಿದ್ದರು. ಸಂಸತ್ತಿನ ವಿಶ್ವಾಸವನ್ನು ಗಳಿಸಲು ದೇವುಬಾ ಅವರಿಗೆ ಒಟ್ಟು 136 ಮತಗಳು ಬೇಕಾಗಿದ್ದವು.

ನೇಪಾಳದ ಪ್ರಧಾನಿಯಾಗಿ ಶೇರ್ ಬಹದ್ದೂರ್ ದೇವುಬಾ ಅವರು ಜುಲೈ 13ರಂದು ಅಧಿಕಾರ ಸ್ವೀಕರಿಸಿದ್ದರು. ಸಂವಿಧಾನದ ವಿಧಿ 75 (6)ರ ಅನ್ವಯ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ದೇವುಬಾ ಅವರನ್ನು ನೇಮಕ ಮಾಡಿದ್ದರು.

ನೇಪಾಳದ ಸುಪ್ರೀಂ ಕೋರ್ಟ್, ಐದು ತಿಂಗಳೊಳಗೆ ಎರಡನೇ ಬಾರಿಗೆ ವಿಸರ್ಜಿತ ಸಂಸತ್ತನ್ನು ಮರುಸ್ಥಾಪಿಸಿ, ಶೇರ್ ಬಹದ್ದೂರ್ ದೇವುಬಾ ಅವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಬೇಕೆಂದು ಜುಲೈ 12ರಂದು ಆದೇಶ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.