ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಪತ್ರಕರ್ತನ ನೊಬೆಲ್ ದಾಖಲೆ ₹808 ಕೋಟಿಗೆ ಮಾರಾಟ

ಉಕ್ರೇನ್ ನಿರಾಶ್ರಿತರ ಮಕ್ಕಳಿಗಾಗಿ ಈ ಹಣ ಸದ್ಬಳಕೆ
Last Updated 21 ಜೂನ್ 2022, 12:16 IST
ಅಕ್ಷರ ಗಾತ್ರ

ನ್ಯೂಯಾರ್ಕ್: ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದ ನಿರಾಶ್ರಿತರಾದ ಉಕ್ರೇನ್ ಮಕ್ಕಳ ನೆರವಿಗಾಗಿ ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೊವ್ ಅವರು ಹರಾಜಿಗೆ ಇಟ್ಟಿದ್ದ ನೊಬೆಲ್ ಪ್ರಶಸ್ತಿಯು ಭರ್ಜರಿ ₹808 ಕೋಟಿ (103.5 ಮಿಲಿಯನ್ ಡಾಲರ್‌) ಮೊತ್ತಕ್ಕೆ ಬಿಕರಿಯಾಗಿದೆ. ಈ ಮೂಲಕ ಹಿಂದಿನ ದಾಖಲೆಗಳನ್ನು ಮುರಿದಿದೆ.

ಪ್ರಶಸ್ತಿ ಮಾರಾಟವನ್ನು ನಿರ್ವಹಿಸುವ ಪಾರಂಪರಿಕ ಹರಾಜಿನ ವಕ್ತಾರ ಈ ಮಾಹಿತಿ ನೀಡಿದ್ದಾರೆ. ಆದರೆ ನೊಬೆಲ್ ಪ್ರಶಸ್ತಿಯನ್ನು ಯಾರು ಖರೀದಿಸಿದ್ದಾರೆ ಎಂಬ ಮಾಹಿತಿಯನ್ನು ಖಚಿತಪಡಿಸಿಲ್ಲ.

ಇದಕ್ಕೂ ಮುಂಚೆ ಡಿಎನ್ಎ ರಚನೆಯನ್ನು ಶೋಧಿಸುವಲ್ಲಿ ಪಾತ್ರ ವಹಿಸಿದ್ದ ಜೇಮ್ಸ್ ವಾಟ್ಸನ್ ಅವರು 1962ರಲ್ಲಿ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಅವರು 2014ರಲ್ಲಿ ತಮ್ಮ ಪ್ರಶಸ್ತಿಯನ್ನು ಹರಾಜಿಗೆ ಇಟ್ಟಿದ್ದರು. ಅದು ₹36 ಕೋಟಿ (4.76 ಮಿಲಿಯನ್ ಡಾಲರ್)ಗೆ ಮಾರಾಟವಾಗಿತ್ತು. 3 ವರ್ಷಗಳ ಬಳಿಕ ಫ್ರಾನ್ಸಿಸ್ ಕ್ರಿಕ್ ಅವರ ನೊಬೆಲ್ ಪ್ರಶಸ್ತಿಯು ₹17 ಕೋಟಿಗೆ(2.27 ಮಿಲಿಯನ್ ಡಾಲರ್) ಮಾರಾಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT