ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂತ್ರಿಕನ ಮದುವೆಯಾಗಲು ರಾಜಮನೆತನ ತೊರೆದ ನಾರ್ವೆ ಯುವರಾಣಿ!

Last Updated 12 ನವೆಂಬರ್ 2022, 7:28 IST
ಅಕ್ಷರ ಗಾತ್ರ

ನ್ಯೂಯಾರ್ಕ್: ನಾರ್ವೆ ದೇಶದ ಯುವರಾಣಿ ಮಾರ್ತಾ ಲೂಯಿಸ್ ಅವರು ಅಮೆರಿಕದ ಮಂತ್ರವಾದಿ ಹಾಗೂ ಲೇಖಕ, ಉದ್ಯಮಿಡ್ಯೂರೆಕ್ ವೆರೆಟ್ ಅವರನ್ನು ವರಿಸಲಿದ್ದಾರೆ. ಈ ಬಗ್ಗೆ ಸ್ವತಃ 51 ವರ್ಷದ ಯುವರಾಣಿಮಾರ್ತಾ, ನಾನು ಡ್ಯೂರೆಕ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಡ್ಯೂರೆಕ್ ವೆರೆಟ್ ಒಬ್ಬ ಅಮೆರಿಕನ್ಉದ್ಯಮಿ, ಪೃಕೃತಿ ಚಿಕಿತ್ಸಕ. ಅವರು ಮಂತ್ರವಾದಿ ಎಂದು ಖ್ಯಾತಿ ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾರ್ವೆ ಮಾಧ್ಯಮಗಳು ಡ್ಯೂರೆಕ್ ಅವರನ್ನು ‘ವಂಚಕ’ ಎಂದು ಕರೆದಿದ್ದವು.

ಮಾರ್ತಾ ಲೂಯಿಸ್ ಕೂಡ ಅತಿಮಾನುಷ ಶಕ್ತಿಗಳಲ್ಲಿ ನಂಬಿಕೆ ಹೊಂದಿದ್ದಾರೆ. ಈ ಬಗ್ಗೆ ಅವರು ನಾರ್ವೆಯಲ್ಲಿ ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದರು. ಇದೀಗ ಅವರು ರಾಜಮನೆತದ ಕರ್ತವ್ಯಗಳಿಂದ ವಿಮುಕ್ತಿ ಘೋಷಿಸಿ, ತಾವು ಮಂತ್ರವಾದಿ ಡ್ಯೂರೆಕ್ ಅವರನ್ನು ವಿವಾಹವಾಗುತ್ತಿರುವುದಾಗಿ ಘೋಷಿಸಿದ್ದಾರೆ.

ಮಾರ್ತಾ ಲೂಯಿಸ್ ಅವರು ನಾರ್ವೆಯ ರಾಜ ಹರ್ಲಾಡ್ ಹಾಗೂ ರಾಣಿ ಸೋನಾಜ್ ಅವರ ಪುತ್ರಿಯಾಗಿದ್ದಾರೆ.ಡ್ಯೂರೆಕ್ ವೆರೆಟ್ ಹಾಲಿವುಡ್‌ನ ಆಧ್ಯಾತ್ಮಿಕ ಗುರು ಎಂದು ಕೂಡ ಹೆಸರು ಗಳಿಸಿದ್ದಾರೆ.

ಡ್ಯೂರೆಕ್ ವೆರೆಟ್ ಕೊರೊನಾ ಸಂದರ್ಭದಲ್ಲಿ ತಾಯತ ಕಟ್ಟಿಕೊಂಡರೇ ಕೊರೊನಾ ವೈರಸ್ ಬರುವುದಿಲ್ಲ ಎಂದು ಹೇಳಿ ಸುದ್ದಿಯಾಗಿದ್ದರು. ಇನ್ನು ಮಾರ್ತಾ ಅವರು, ತಾವು ಇನ್ನುಮುಂದೆಡ್ಯೂರೆಕ್ ಜೊತೆ ಸೇರಿ ಕ್ಯಾನ್ಸರ್ ಸೇರಿದಂತೆ ಇತರ ರೋಗಗಳಿಗೆ ಪರ್ಯಾಯ ಔಷಧ ಕಂಡುಹಿಡಿಯುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT