ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಸ್ಕರ್’ ಪ್ರದಾನ ಸಮಾರಂಭ: ಲತಾ, ದಿಲೀಪ್‌ಕುಮಾರ್‌ ಸ್ಮರಣೆ ಮರೆತ ‘ಅಕಾಡೆಮಿ’

Last Updated 28 ಮಾರ್ಚ್ 2022, 13:01 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್‌/ಮುಂಬೈ: ಲಾಸ್‌ ಏಂಜಲೀಸ್‌ನಲ್ಲಿ ನಡೆದ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತೀಯ ಚಿತ್ರಗಳ ಅಭಿಮಾನಿಗಳಿಗೆ ನಿರಾಸೆ ಹಾಗೂ ಆಘಾತ ಕಾದಿತ್ತು.

ಚಿತ್ರರಂಗಕ್ಕೆ ಅಗಾಧ ಕೊಡುಗೆ ನೀಡಿ, ಇತ್ತೀಚೆಗೆ ಅಗಲಿದ ಗಣ್ಯರನ್ನು ಸ್ಮರಿಸುವ ವಿಭಾಗದಡಿ (ಇನ್‌ ಮೆಮೊರಿಯಮ್), ಭಾರತೀಯ ಚಿತ್ರರಂಗ ಹೆಸರಾಂತ ಗಾಯಕಿ ಲತಾ ಮಂಗೇಶ್ಕರ್‌ ಹಾಗೂ ನಟ ದಿಲೀಪ್‌ ಕುಮಾರ್‌ ಅವರ ಹೆಸರುಗಳಿಗೆ ಸ್ಥಾನ ನೀಡದೇ ಇರುವುದು ಈ ನಿರಾಸೆ–ಆಘಾತಕ್ಕೆ ಕಾರಣವಾಗಿದೆ.

‘ಅಕಾಡೆಮಿ ಅವಾರ್ಡ್ಸ್‌’ನ ಈ ನಡೆ ಬಗ್ಗೆ ಅನೇಕರು ಟ್ವಿಟರ್‌ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಭಾರತೀಯ ಚಿತ್ರರಂಗದ ಈ ಇಬ್ಬರು ಮಹನೀಯರನ್ನು ಸ್ಮರಿಸದ ಸಂಘಟಕರ ನಡೆಯನ್ನು ಖಂಡಿಸಿದ್ದಾರೆ.

‘ಬ್ರಿಟಿಷ್‌ ಅಕಾಡೆಮಿ ಆಫ್‌ ಫಿಲ್ಮ್ ಆ್ಯಂಡ್ ಟೆಲಿವಿಷನ್ ಅವಾರ್ಡ್ಸ್‌’ (ಬಿಎಎಫ್‌ಟಿಎ) ಸಂಸ್ಥೆಯು ಇದೇ ತಿಂಗಳ ಆರಂಭದಲ್ಲಿ ಹಮ್ಕಿಕೊಂಡಿದ್ದ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್‌ ಹಾಗೂ ದಿಲೀಪ್‌ ಕುಮಾರ್‌ ಅವರಿಗೆ ಗೌರವ ಸಲ್ಲಿಸಿತ್ತು. ಅವರ ಸಾಧನೆ, ಚಿತ್ರರಂಗ ನೀಡಿದ ಕೊಡುಗೆಯನ್ನು ಸ್ಮರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT