ಶುಕ್ರವಾರ, ಸೆಪ್ಟೆಂಬರ್ 24, 2021
23 °C

ಅಮೆರಿಕ: ಕೋವಿಡ್‌ ನಿರ್ಬಂಧ ವಿಸ್ತರಣೆಗೆ ಪೆಲೊಸಿ, ಡೆಮಾಕ್ರಟಿಕ್ ನಾಯಕರ ಒತ್ತಾಯ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣ, ರಾಷ್ಟ್ರದಾದ್ಯಂತ ಜಾರಿಗೊಳಿಸಿರುವ ನಿರ್ಬಂಧವನ್ನು ಇನ್ನಷ್ಟು ವಿಸ್ತರಿಸುವಂತೆ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿ ಪೆಲೊಸಿ ಮತ್ತು ಡೆಮಾಕ್ರಟಿಕ್ ಪಕ್ಷದ ಕೆಲವು ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಸಮಯದಲ್ಲಿ ಅಮೆರಿಕನ್ನರು ಮನೆಯಿಂದ ಹೊರ ಬರದಂತೆ, ತಾವೇ ‘ನೈತಿಕ ನಿರ್ಬಂಧವನ್ನು‘ ವಿಧಿಸಿಕೊಳ್ಳುವಂತೆ ಜನರ ಮನವೊಲಿಸುವತ್ತ ಬೈಡನ್ ಸರ್ಕಾರ ಕಾರ್ಯನಿರ್ವಹಿಸುವಂತೆ ಅವರು ಒತ್ತಾಯಿಸಿದರು.

ಕೋವಿಡ್‌ ಸಾಂಕ್ರಾಮಿಕದ ಸಂಬಂಧ ಈಗಾಗಲೇ ವಿಧಿಸಿದ್ದ ನಿರ್ಬಂಧ ಶನಿವಾರ ರಾತ್ರಿಗೆ ಕೊನೆಗೊಂಡಿದ್ದು, ಅದನ್ನು ವಿಸ್ತರಿಸುವ ಆದೇಶ ಹೊರಡಿಸಲು ಸಂಸತ್ತಿಗೆ ಸಾಧ್ಯವಾಗಲಿಲ್ಲ. ಈಗ ಆ ಕೆಲಸವನ್ನು ಜೋ ಬೈಡನ್ ಆಡಳಿತ ಮಾಡಬೇಕಿದೆ ಎಂದು ಡೆಮಾಕ್ರಟಿಕ್ ಪಕ್ಷದ ನಾಯಕರು ಹೇಳಿದ್ದು, ತಕ್ಷಣವೇ ನಿರ್ಬಂಧವನ್ನು ವಿಸ್ತರಿಸುವಂತೆ ಆಡಳಿತಕ್ಕೆ ತಿಳಿಸಿದ್ದಾರೆ.

‘ಸೋಂಕು ನಿಯಂತ್ರಣಖ್ಕೆ ತಕ್ಷಣವೇ ಕ್ರಮ ಕೈಗೊಳ್ಳುವ ಅಗತ್ಯವಿದೆ. ಆ ಕೆಲಸವನ್ನೂ ಬೈಡನ್ ಆಡಳಿತವೇ ಮಾಡಬೇಕು‘ ಎಂದು ಪೆಲೊಸಿ, ಸ್ಟೆನಿ ಹೋಯರ್, ವಿಪ್ ಜೇಮ್ಸ್ ಇ.ಕ್ಲೈಬರ್ನ್ ಮತ್ತು ಸಹಾಯಕ ಸ್ಪೀಕರ್ ಕ್ಯಾಥರೀನ್ ಕ್ಲಾರ್ಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು