ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾದ ಕಾಯಂ ನಿವಾಸಿಗಳಿಗೆ ಸೇನೆ ಸೇರುವ ಅವಕಾಶ: ಭಾರತಿಯರಿಗೂ ಅನುಕೂಲ

Last Updated 14 ನವೆಂಬರ್ 2022, 12:51 IST
ಅಕ್ಷರ ಗಾತ್ರ

ಟೊರಾಂಟೊ (ಪಿಟಿಐ): ‘ಸೈನಿಕರ ಕೊರತೆ ಎದುರಿಸುತ್ತಿರುವ ಕೆನಡಾ ಶಸ್ತ್ರಾಸ್ತ್ರ ಪಡೆಯು (ಸಿಎಎಫ್‌) ದೇಶದ ಕಾಯಂ ನಿವಾಸಿಗಳಿಗೆ ಸೇನೆ ಸೇರಲು ಅವಕಾಶ ಕಲ್ಪಿಸಿದೆ. ಇದರಿಂದ ಆ ದೇಶದಲ್ಲಿ ಅಧಿಕ ಸಂಖ್ಯೆಯಲ್ಲಿ ನೆಲೆಸಿರುವ ಭಾರತೀಯರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

‘ತನ್ನ ಹಳೆಯ ನೇಮಕಾತಿ ಪ್ರಕ್ರಿಯೆಯನ್ನು ಬದಲಿಸುವುದಾಗಿರಾಯಲ್‌ ಕೆನಡಿಯನ್‌ ಮೌಂಟೆಡ್‌ ಪೊಲೀಸ್‌ (ಆರ್‌ಸಿಎಂಪಿ) ಈ ಹಿಂದೆ ಘೋಷಿಸಿತ್ತು. ಅದಾಗಿ ಐದು ವರ್ಷಗಳ ಬಳಿಕ ನೇಮಕಾತಿ ಪ್ರಕ್ರಿಯೆಯಲ್ಲಿ ಬದಲಾವಣೆ ತರಲಾಗಿದೆ. ಅದರ ಪ್ರಕಾರ ಕೆನಡಾದಲ್ಲಿ 10 ವರ್ಷ ವಾಸವಿದ್ದವರು ಸೇನೆಗೆ ಅರ್ಜಿ ಸಲ್ಲಿಸಬಹುದಾಗಿದೆ’ ಎಂದು ಸಿಟಿವಿ ನ್ಯೂಸ್‌ ವರದಿಯಲ್ಲಿ ತಿಳಿಸಿದೆ.

18 ವರ್ಷ ಮೇಲ್ಪಟ್ಟ, 10 ಅಥವಾ 12ನೇ ತರಗತಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

‘ಶತ್ರು ರಾಷ್ಟ್ರಗಳ ದಾಳಿಯಿಂದ ಪಾರಾಗಬೇಕಾದರೆ ಸಿಎಎಫ್‌ ತನ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು’ ಎಂದು ಕೆನಡಾದ ರಕ್ಷಣಾ ಸಚಿವೆ ಅನಿತಾ ಆನಂದ್‌ ಈ ವರ್ಷದ ಮಾರ್ಚ್‌ನಲ್ಲಿ ಹೇಳಿದ್ದರು.

‘ಕಾಯಂ ನಿವಾಸಿಗಳಿಗೆ ಸೇನೆ ಸೇರಲು ಅನುವು ಮಾಡಿಕೊಟ್ಟಿರುವ ಸಿಎಎಫ್‌ನ ನಿರ್ಧಾರ ಸ್ವಾಗತಾರ್ಹವಾದುದು’ ಎಂದು ಕೆನಡಾದ ರಾಯಲ್‌ ಮಿಲಿಟರಿ ಕಾಲೇಜ್‌ನ ಪ್ರಾಧ್ಯಾಪಕ ಕ್ರಿಸ್ಟಿಯನ್ ಲಿಯುಪ್ರೆಚ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT