ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ನೂತನ ರಾಷ್ಟ್ರೀಯ ಭದ್ರತಾ ನೀತಿ ಬಿಡುಗಡೆ

Last Updated 14 ಜನವರಿ 2022, 11:48 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ರಾಷ್ಟ್ರೀಯ ಭದ್ರತಾ ನೀತಿಯನ್ನು ಪ್ರಧಾನಿ ಇಮ್ರಾನ್ ಖಾನ್‌ ಶುಕ್ರವಾರ ಬಿಡುಗಡೆ ಮಾಡಿದರು.

ನಾಗರಿಕ ಕೇಂದ್ರೀತವಾದ ಈ ನೀತಿಯು ಆರ್ಥಿಕ ಭದ್ರತೆಗೆ ಆದ್ಯತೆ ನೀಡಲಿದೆ. ಈ ಹಿಂದಿನ ನೀತಿಯಲ್ಲಿ ಪ್ರಮುಖವಾಗಿ ಸೇನೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿತ್ತು.

ರಾಷ್ಟ್ರೀಯ ಭದ್ರತಾ ಸಮಿತಿಯು ಕಳೆದ ತಿಂಗಳು ಅನುಮೋದಿಸಿದ್ದ ನೀತಿಯನ್ನು ಸಾರ್ವತ್ರಿಕಗೊಳಿಸಿದ ಇಮ್ರಾನ್‌ ಖಾನ್‌, ಈ ಹಿಂದಿನ ಸರ್ಕಾರಗಳು ದೇಶೀಯ ಆರ್ಥಿಕತೆ ಬಲಪಡಿಸಲು ವಿಫಲವಾಗಿದ್ದವು ಎಂದು ಟೀಕಿಸಿದರು.

100 ಪುಟಗಳ ನೂತನ ನೀತಿಯು ನಾಗರಿಕ ಕೇಂದ್ರೀತವಾಗಿದೆ. ಆರ್ಥಿಕತೆ ಬಲಪಡಿಸಲಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ನೀತಿಯ ಅಭಿವೃದ್ಧಿ ಪರ ಪ್ರಜ್ಞೆಯನ್ನು ಹೊಂದಿದೆ ಎಂದು ಪ್ರತಿಪಾದಿಸಿದರು.

ಪಾಕಿಸ್ತಾನದಲ್ಲಿ 70ಕ್ಕೂ ಹೆಚ್ಚು ವರ್ಷ ಆಡಳಿತ ನಡೆಸಿದ ಪ್ರಭಾವಿ ಸೇನೆಯು, ಭದ್ರತೆ ಅಥವಾ ವಿದೇಶಾಂಗ ನೀತಿಯಲ್ಲಿ ಹೆಚ್ಚು ಪ್ರಭಾವಿಯಾಗಲಿಲ್ಲ ಎಂದು ಹೇಳಿದರು. ಹೊಸ ನೀತಿಯ ಅವಧಿ 2022–26 ಆಗಿದ್ದು, ರಾಷ್ಟ್ರೀಯ ಭದ್ರತೆಗೆ ಜೊತೆಗೆ ಈ ಅವಧಿಯಲ್ಲಿ ಸಾಧಿಸಬೇಕಾದ ಗುರಿಗಳನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT