ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅಂಜಲಿ ಚತುರ್ವೇದಿಗೆ ಅಮೆರಿಕದಲ್ಲಿ ಪ್ರಧಾನ ವಕೀಲ ಸ್ಥಾನ

ಅಧ್ಯಕ್ಷ ಬೈಡನ್‌ರಿಂದ ನಾಮನಿರ್ದೇಶನ
Last Updated 23 ಜೂನ್ 2022, 10:48 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಭಾರತೀಯ-ಅಮೆರಿಕದ ಕಾನೂನು ತಜ್ಞೆ ಅಂಜಲಿ ಚತುರ್ವೇದಿ ಅವರನ್ನು ಹಿರಿಯ ನಾಗರಿಕರ ಆರೋಗ್ಯ ಸೇವೆ ಇಲಾಖೆಯ ಪ್ರಧಾನ ವಕೀಲರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ.

ಶ್ವೇತಭವನದ ವೆಬ್‌ಸೈಟ್ ಪ್ರಕಾರ ಅಂಜಲಿ ಅವರು ಸದ್ಯ ಅಮೆರಿಕದ ನ್ಯಾಯ ಇಲಾಖೆಯ ಅಪರಾಧ ವಿಭಾಗದಲ್ಲಿಉಪ ಸಹಾಯಕ ಅಟಾರ್ನಿ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇದೀಗ ಅವರು ಅಮೆರಿಕದ ಹಿರಿಯ ನಾಗರಿಕರ ಆರೋಗ್ಯ ಸೇವೆ ಇಲಾಖೆಯ ಪ್ರಧಾನ ವಕೀಲರಾಗಿ ನಾಮ ನಿರ್ದೇಶನಗೊಂಡಿದ್ದಾರೆ.

ದೇಶದ ಹಿರಿಯ ನಾಗರಿಕರಿಗೆ ವಿಶ್ವ ಗುಣಮಟ್ಟದ ಸೌಲಭ್ಯಗಳು, ಸೇವೆಗಳನ್ನು ನೀಡುವುದು ಈ ಇಲಾಖೆಯ ದೂರದೃಷ್ಟಿಯಾಗಿದ್ದು, ಸಹಾನುಭೂತಿ, ಬದ್ಧತೆ, ಉತ್ಕೃಷ್ಟತೆ, ವೃತ್ತಿಪರತೆ, ಸಮಗ್ರತೆ, ಹೊಣೆಗಾರಿಕೆ ಮತ್ತು ಉಸ್ತುವಾರಿಗಳ ಅತ್ಯುನ್ನತ ಮಾನದಂಡಗಳನ್ನು ಅನುಸರಿಸುತ್ತದೆ.

ಇದರೊಂದಿಗೆ ಅಧ್ಯಕ್ಷ ಬೈಡನ್ ಸರ್ಕಾರದಲ್ಲಿ ಭಾರತೀಯ ಮೂಲದ ನಾಲ್ವರು ಭಾರತೀಯ ಸಂಜಾತರು ಉನ್ನತ ಹುದ್ದೆಗಳನ್ನು ಪಡೆದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT