ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.500 ದಿನಗಳಲ್ಲಿ 40,075 ಕಿ.ಮೀಗೂ ಅಧಿಕ ನಡಿಗೆ, ಗಿನ್ನೆಸ್ ದಾಖಲೆಗೆ ಅರ್ಜಿ

Last Updated 17 ಅಕ್ಟೋಬರ್ 2020, 7:08 IST
ಅಕ್ಷರ ಗಾತ್ರ

ಲಂಡನ್‌: ದೀರ್ಘ ಅಂತರದ ನಡಿಗೆಗಾಗಿ ಪಂಜಾಬ್ ಮೂಲದ, ಐರ್ಲೆಂಡ್ ನಿವಾಸಿಯೊಬ್ಬರು ಗಿನ್ನೆಸ್ ವಿಶ್ವದಾಖಲೆಗಾಗಿ ಅರ್ಜಿ ಸಲ್ಲಿಸಿದ್ದಾರೆ.

ತಾನು ನೆಲೆಸಿರುವ ಲೈಮ್‌ರಿಕ್‌ ನಗರದಿಂದ ಹೊರಹೋಗದೇ 40,075ಕ್ಕೂ ಅಧಿಕ ಕಿ.ಮೀ ನಷ್ಟು ನಡಿಗೆಯನ್ನು 1,500 ದಿನಗಳಲ್ಲಿ ಪೂರೈಸಿದ್ದಾಗಿ ವಿನೋದ್ ಬಜಾಜ್ ಹೇಳಿದ್ದಾರೆ.

ನಿವೃತ್ತ ಎಂಜಿನಿಯರ್, ಬ್ಯುಸಿನೆಸ್‌ ಕನ್ಸಲ್ಟಂಟ್ ಆಗಿರುವ ಇವರು ಚೆನ್ನೈನಲ್ಲಿ ಹುಟ್ಟಿ ಬೆಳೆದಿದ್ದು. 43 ವರ್ಷಗಳ ಹಿಂದೆ ಐರ್ಲೆಂಡ್‌ ಪೌರತ್ವವನ್ನು ಪಡೆದು, ಅಲ್ಲಿಯೇ ಕುಟುಂಬದೊಂದಿಗೆ ವಾಸವಿದ್ದಾರೆ.

‘ದೇಹದ ತೂಕ ಇಳಿಸಲು ಹಾಗೂ ದೈಹಿಕ ಸಾಮರ್ಥ್ಯ ಉಳಿಸಿಕೊಳ್ಳುವ ಗುರಿಯೊಂದಿಗೆ ಆಗಸ್ಟ್ 2016ರಲ್ಲಿ ನಡಿಗೆ ಆರಂಭಿಸಿದೆ. ಸ್ವಲ್ಪ ತೂಕ ಇಳಿದಂತೆ ನಡಿಗೆ ಹೆಚ್ಚಿಸುವ ಉತ್ಸಾಹವೂ ಇಮ್ಮಡಿಯಾಯಿತು. ವಿವಿಧ ಮಾರ್ಗಗಳಲ್ಲಿ ನಡೆಯಲು ಶುರುಮಾಡಿದೆ’ ಎಂದು ಅವರು ಹೇಳಿದರು.

‘ಮೊದಲ ಮೂರು ತಿಂಗಳಲ್ಲಿ 8 ಕೆ.ಜಿ ತೂಕ ಇಳಿಯಿತು. ನಂತರದ ಒಂದು ತಿಂಗಳಲ್ಲಿ 12 ಕೆ.ಜಿ ಇಳಿಯಿತು. ನಾನು ಆಹಾರ ಕ್ರಮ ಬದಲಿಸಲಿಲ್ಲ. ನಡಿಗೆಯಿಂದಲೇ ತೂಕ ಇಳಿಸಿಕೊಂಡೆ. ಬೆಳಿಗ್ಗೆ ಬೇಗನೇ ಮನೆಯಿಂದ ನಿರ್ಗಮಿಸುತ್ತಿದ್ದೆ. ಬಹುತೇಕ ಕೆಲಸಗಳು ಆಗುತ್ತಿದ್ದವು’ ಎಂದು ನಡಿಗೆಯ ಕ್ರಮವನ್ನು ಅವರು ವಿವರಿಸಿದರು.

ಮೊದಲ ವರ್ಷದಲ್ಲಿ 7,600 ಕಿ.ಮೀ ನಡೆದಿದ್ದೆ. ಇದು, ಭಾರತದಿಂದ ಐರ್ಲೆಂಡ್‌ಗೆ ಇರುವಷ್ಟೇ ಅಂತರವಾಗಿತ್ತು. ಬಳಿಕ ನಡೆಯುವುದನ್ನೇ ಮುಂದುವರಿಸಿದೆ ಎನ್ನುತ್ತಾರೆ ಅವರು. ಪ್ರಸ್ತುತ ಗಿನ್ನೆಸ್‌ ದಾಖಲೆಗಾಗಿ ಇವರು ಸಲ್ಲಿಸಿರುವ ಅರ್ಜಿ ಪರಿಶೀಲನೆಯಲ್ಲಿದೆ.

ಅವರು ನಡೆದಿರುವ ನಡಿಗೆಯ ಅಂತರ ಭೂಮಿಯ ಪರಿಭ್ರಮಣೆಗೆ ಸಮನಾದುದೇ ಎಂಬುದು ಪರಿಶೀಲನೆಯಲ್ಲಿದೆ. ತನ್ನ ನಡಿಗೆಯ ಅವಧಿಯಲ್ಲಿ ಸುಮಾರು 12 ಜೊತೆ ಶೂಗಳು ಸವೆದಿವೆ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT