ಮಂಗಳವಾರ, ಡಿಸೆಂಬರ್ 7, 2021
24 °C

ಜಾಗತಿಕ ತಾಪಮಾನದಿಂದ ಆರೋಗ್ಯ ಸಮಸ್ಯೆ ಹೆಚ್ಚಳ: ಅಧ್ಯಯನ ವರದಿ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಹವಾಮಾನ ಬದಲಾವಣೆಯಿಂದಾಗಿ ಆರೋಗ್ಯ ಸಮಸ್ಯೆಗಳು ತೀವ್ರಗೊಳ್ಳುತ್ತಿವೆ ಎಂದು ಬುಧವಾರ ಪ್ರಕಟವಾದ ಎರಡು ಅಧ್ಯಯನ ವರದಿಗಳಿಂದ ತಿಳಿದುಬಂದಿದೆ.

ವೈದ್ಯಕೀಯ ಜರ್ನಲ್‌ ಲ್ಯಾನ್ಸೆಟ್‌ ಪ್ರಕಟಿಸಿರುವ ವಾರ್ಷಿಕ ವರದಿಯಲ್ಲಿ ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗಿರುವ 44 ಜಾಗತಿಕ ಆರೋಗ್ಯ ಸೂಚಕಗಳನ್ನು ಉಲ್ಲೇಖಿಸಿದೆ. ಇದರಲ್ಲಿ ತಾಪಮಾನ ಏರಿಕೆಯಿಂದ ಸಂಭವಿಸುವ ಸಾವು, ಸಾಂಕ್ರಾಮಿಕ ರೋಗಗಳು ಮತ್ತು ಹಸಿವಿನಂತಹ ಅಂಶಗಳು ಸೇರಿವೆ. ಈ ಎಲ್ಲವೂ ಕಠಿಣ ಸವಾಲುಗಳನ್ನು ಒಡ್ಡುತ್ತಿದೆ ಎಂದು ಲ್ಯಾನ್ಸೆಟ್ ಕೌಂಟ್‌ಡೌನ್ ಯೋಜನಾ ಸಂಶೋಧನಾ ನಿರ್ದೇಶಕಿ, ಜೀವರಸಾಯನ ಶಾಸ್ತ್ರಜ್ಞೆ ಮರೀನಾ ರೊಮೆನೆಲ್ಲೊ ಹೇಳಿದರು.

'ಏರುತ್ತಿರುವ ತಾಪಮಾನವು ತೀವ್ರ ತರಹದ ಪರಿಣಾಮಗಳನ್ನು ಉಂಟು ಮಾಡುತ್ತಿದೆ‘ ಎಂದು ಈ ಸಂಶೋಧನಾ ವರದಿಯ ಸಹ ಲೇಖಕರು ಹಾಗೂ ವಾಷಿಂಗ್ಟನ್‌ ವಿಶ್ವವಿದ್ಯಾನಿಲಯದ ಪರಿಸರ ಆರೋಗ್ಯ ಪ್ರಾಧ್ಯಾಪಕ ಕ್ರಿಸ್ಟಿ ಎಬಿ ಹೇಳಿದ್ದಾರೆ.

ಈ ವರ್ಷ ಪ್ರಕಟವಾಗಿರುವ ವರದಿಗಳಲ್ಲಿ, ಒಂದು ಜಾಗತಿಕ ಮಟ್ಟದ ಮಾಹಿತಿಯನ್ನು ನೀಡಿದರೆ, ಇನ್ನೊಂದು ಅಮೆರಿಕವನ್ನು ಆಧಾರವಾಗಿಟ್ಟುಕೊಂಡು ವರದಿ ಪ್ರಕಟಿಸಿದೆ. ಈ ವರದಿಗಳಲ್ಲಿ ‘ತೀವ್ರ ಅಪಾಯದಲ್ಲಿ ಭವಿಷ್ಯದ ಆರೋಗ್ಯ‘ ಎಂದು ಉಲ್ಲೇಖಿಸಿದ್ದು, ಭವಿಷ್ಯದಲ್ಲಿ ಎದುರಾಗುವ ಅಪಾಯಗಳನ್ನು ಎತ್ತಿ ತೋರಿಸಿದೆ.

ಇದನ್ನೂ ಓದಿ: ಜಾಗತಿಕ ತಾಪಮಾನ ಹೆಚ್ಚಳ ಮಹಾ ವಿಪ್ಲವದ ಸಂಕೇತ ಎಂದ ವಿಶ್ವಸಂಸ್ಥೆ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು