ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ನಡೆಸುತ್ತಿದ್ದಾರೆ. ಪುಟಿನ್ ನಡೆಯನ್ನು ವಿಶ್ವ ಸಮುದಾಯ ತೀವ್ರವಾಗಿ ಖಂಡಿಸಿದೆ. ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಿವೆ. ರಷ್ಯಾ–ಉಕ್ರೇನ್ ಸಂಘರ್ಷದ ಕ್ಷಣಕ್ಷಣದ ಮಾಹಿತಿ ಇಲ್ಲಿದೆ.



‘ಅಮೃತ’ದ ಶತಮಾನ ಧ್ಯಾನ; ಐದು ಪ್ರತಿಜ್ಞೆ ಕೈಗೊಳ್ಳಲು ಜನರಿಗೆ ಪ್ರಧಾನಿ ಮೋದಿ ಕರೆ ಕೃಷಿ ಕಾರ್ಮಿಕರ ಮಕ್ಕಳಿಗೂ ‘ವಿದ್ಯಾನಿಧಿ’: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ ಸಾವರ್ಕರ್, ಟಿಪ್ಪು ಫ್ಲೆಕ್ಸ್ ಅಳವಡಿಕೆ ವಿವಾದ: ಶಿವಮೊಗ್ಗ ಉದ್ವಿಗ್ನ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ: 11 ಅಪರಾಧಿಗಳ ಬಿಡುಗಡೆ ಉತ್ತರ ಪ್ರದೇಶ: ತ್ರಿವರ್ಣ ಧ್ವಜ ವಿತರಣೆ ಮಾಡಿದ ಕುಟುಂಬಕ್ಕೆ ಜೀವ ಬೆದರಿಕೆ ಹರ್ ಘರ್ ತಿರಂಗಾ ವೆಬ್ಸೈಟ್ನಲ್ಲಿ 5 ಕೋಟಿಗೂ ಹೆಚ್ಚು ಸೆಲ್ಫಿ ರಕ್ಷಣಾ ಬಾಂಧವ್ಯ: ಲಂಕಾಗೆ ಭಾರತದ ಕಡಲ ಕಣ್ಗಾವಲು ವಿಮಾನ ಡಾರ್ನಿಯರ್ ಹಸ್ತಾಂತರ ಮರಳಿ ಅಧಿಕಾರಕ್ಕೆ ಬಂದು ವರ್ಷ: ತಾಲಿಬಾನಿಗಳ ಹರ್ಷ
- ‘ಅಮೃತ’ದ ಶತಮಾನ ಧ್ಯಾನ; ಐದು ಪ್ರತಿಜ್ಞೆ ಕೈಗೊಳ್ಳಲು ಜನರಿಗೆ ಪ್ರಧಾನಿ ಮೋದಿ ಕರೆ
- ಕೃಷಿ ಕಾರ್ಮಿಕರ ಮಕ್ಕಳಿಗೂ ‘ವಿದ್ಯಾನಿಧಿ’: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ
- ಸಾವರ್ಕರ್, ಟಿಪ್ಪು ಫ್ಲೆಕ್ಸ್ ಅಳವಡಿಕೆ ವಿವಾದ: ಶಿವಮೊಗ್ಗ ಉದ್ವಿಗ್ನ
- ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ: 11 ಅಪರಾಧಿಗಳ ಬಿಡುಗಡೆ
- ಉತ್ತರ ಪ್ರದೇಶ: ತ್ರಿವರ್ಣ ಧ್ವಜ ವಿತರಣೆ ಮಾಡಿದ ಕುಟುಂಬಕ್ಕೆ ಜೀವ ಬೆದರಿಕೆ
- ಹರ್ ಘರ್ ತಿರಂಗಾ ವೆಬ್ಸೈಟ್ನಲ್ಲಿ 5 ಕೋಟಿಗೂ ಹೆಚ್ಚು ಸೆಲ್ಫಿ
- ರಕ್ಷಣಾ ಬಾಂಧವ್ಯ: ಲಂಕಾಗೆ ಭಾರತದ ಕಡಲ ಕಣ್ಗಾವಲು ವಿಮಾನ ಡಾರ್ನಿಯರ್ ಹಸ್ತಾಂತರ
- Home
- World News
- Russia Ukraine News Live Updates: military operation in Ukraine; Vladimir Putin UN meet Volodymyr Zelenskyy
ಉಕ್ರೇನ್ನ ವಿನ್ನಿಟ್ಸಿಯಾ ವಿಮಾನ ನಿಲ್ದಾಣ ಧ್ವಂಸ
ರಷ್ಯಾ ನಡೆಸಿದ ಬಾಂಬ್ ದಾಳಿಯಿಂದಾಗಿ ಉಕ್ರೇನ್ನ ವಿನ್ನಿಟ್ಸಿಯಾ ವಿಮಾನ ನಿಲ್ದಾಣ ಧ್ವಂಸಗೊಂಡಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲನ್ಸ್ಕಿ ಹೇಳಿದ್ದಾರೆ.
ಒಡೆಸ್ಸಾ ಮೇಲೆ ಶೆಲ್ ದಾಳಿ ನಡೆಸಲಿದೆ ರಷ್ಯಾ: ಝೆಲೆನ್ಸ್ಕಿ
ಬಂದರು ನಗರ ಒಡೆಸ್ಸಾ ಮೇಲೆ ರಷ್ಯಾ ಶೆಲ್ ದಾಳಿ ನಡೆಸಲು ಯೋಜನೆ ರೂಪಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲನ್ಸ್ಕಿ ಭಾನುವಾರ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.
‘ರಷ್ಯನ್ನರು ಯಾವಾಗಲೂ ಒಡೆಸ್ಸಾಕ್ಕೆ ಬರುತ್ತಿರುತ್ತಾರೆ. ಒಡೆಸ್ಸಾದ ಬೆಚ್ಚಿಗಿನ ವಾತಾವರಣವನ್ನು ಅನುಭವಿಸುತ್ತಾರೆ. ಇಲ್ಲಿ ನಿಷ್ಠೆ ಕಾಣುತ್ತಾರೆ. ಆದರೀಗ? ಒಡೆಸ್ಸಾ ಮೇಲೆ ಬಾಂಬ್ ಹಾಲು ನಿಂತಿದ್ದಾರೆ. ಪಿರಂಗಿ ಹಿಡಿದು ಬಂದಿದ್ಡಾರೆ, ಒಡೆಸ್ಸಾ ವಿರುದ್ಧ ಕ್ಷಿಪಣಿಗಳನ್ನು ಹಾಕಲಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರಷ್ಯಾದ 11,000 ಕ್ಕೂ ಅಧಿಕ ಸೈನಿಕರ ಹತ್ಯೆ: ಉಕ್ರೇನ್ ಮಾಹಿತಿ
ಫೆಬ್ರುವರಿ 25ರಿಂದ ಇಲ್ಲಿಯವರೆಗೂ 11,000 ಕ್ಕೂ ಹೆಚ್ಚು ರಷ್ಯಾ ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್ ಸರ್ಕಾರ ಹೇಳಿಕೊಂಡಿದೆ. ಈ ಕುರಿತು ಸುದ್ದಿಸಂಸ್ಥೆ ‘ರಾಯಿಟರ್ಸ್’ ವರದಿ ಮಾಡಿದೆ.
03:30 pm
ರಷ್ಯಾ ವಿರುದ್ಧ ಬ್ರಿಟನ್ ಆರೋಪ
ಯುದ್ಧಪೀಡಿತ ಉಕ್ರೇನ್ನಲ್ಲಿ ಜನನಿಬಿಡ ಪ್ರದೇಶವನ್ನು ರಷ್ಯಾ ಗುರಿಯಾಗಿಸುತ್ತಿದೆ ಎಂದು ಬ್ರಿಟನ್ ಮಿಲಿಟರಿ ಗುಪ್ತಚರ ಇಲಾಖೆ ಭಾನುವಾರ ಹೇಳಿಕೆ ನೀಡಿದೆ.
ಸಂಪೂರ್ಣ ಸುದ್ದಿ ಓದಿ
09:18 pm
ಮಾಸ್ಕೋದ ಪಡೆಗಳು ಕದನ ವಿರಾಮವನ್ನು ಮುರಿದಿದ್ದು, ನಾಗರಿಕ ಸ್ಥಳಾಂತರ ಕಾರ್ಯ ವಿಳಂಬವಾಗುತ್ತಿದೆ ಎಂದು ಉಕ್ರೇನ್ನ ಬಂದರು ನಗರವಾದ ಮಾರಿಯುಪೋಲ್ನ ಅಧಿಕಾರಿಗಳು ತಿಳಿಸಿದ್ದಾರೆ.
07:40 pm
ಸುಮಿ ನಗರದಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ತೀವ್ರ ಕಾಳಜಿ ಹೊಂದಿದ್ದೇವೆ: ಅರಿಂದಮ್ ಬಾಗ್ಚಿ
ನವದೆಹಲಿ: ಪೂರ್ವ ಉಕ್ರೇನ್ನ ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ, ರಷ್ಯಾ ಮತ್ತು ಉಕ್ರೇನ್ ದೇಶಗಳೆರಡು ಸಂಘರ್ಷದ ಪ್ರದೇಶದಿಂದ ಸುರಕ್ಷಿತವಾಗಿ ಹಿಂತಿರುಗಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಬಲವಾಗಿ ಒತ್ತಾಯಿಸಿದೆ.
'ವಿದ್ಯಾರ್ಥಿಗಳು ಸುರಕ್ಷತೆಯಿಂದಿರಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಅನಗತ್ಯ ಅಪಾಯಗಳನ್ನು ತಪ್ಪಿಸಲು ಶೆಲ್ಟರ್ಗಳಲ್ಲಿಯೇ ಉಳಿಯಬೇಕು ಎಂದು ಸಲಹೆ ನೀಡಲಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಸುಮಾರು 700 ಭಾರತೀಯರು ಸುಮಿ ನಗರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರು ಶುಕ್ರವಾರ ತಿಳಿಸಿದ್ದರು.
'ಉಕ್ರೇನ್ನ ಸುಮಿ ನಗರದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಬಗ್ಗೆ ನಾವು ತೀವ್ರ ಕಾಳಜಿ ಹೊಂದಿದ್ದೇವೆ. ನಮ್ಮ ವಿದ್ಯಾರ್ಥಿಗಳಿಗೆ ಸುರಕ್ಷಿತ ಕಾರಿಡಾರ್ ನಿರ್ಮಿಸಲು ರಷ್ಯಾ ಮತ್ತು ಉಕ್ರೇನ್ ಸರ್ಕಾರಗಳನ್ನು ಬಲವಾಗಿ ಒತ್ತಾಯಿಸಿದ್ದೇವೆ' ಎಂದು ಬಾಗ್ಚಿ ಶನಿವಾರ ಟ್ವೀಟ್ ಮಾಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ ರಾಯಭಾರ ಕಚೇರಿ ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದಾರೆ.
03:29 pm
ಧೈರ್ಯವಾಗಿರಿ: ಉಕ್ರೇನ್ನ ಸುಮಿಯಲ್ಲಿ ಸಿಲುಕಿರುವ ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ
ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ಶನಿವಾರ ಭಾಗಶಃ ಯುದ್ಧ ವಿರಾಮ ಘೋಷಿಸಿದ್ದು, ಮರಿಯುಪೋಲ್ ಮತ್ತು ವೊಲ್ನೊವಾಕಾ ನಗರಗಳಿಂದ ಮಾನವೀಯ ಕಾರಿಡಾರ ಮೂಲಕ ವಿದೇಶಿಯರು ಹೊರಹೋಗಲು ಅನುವು ಮಾಡಿಕೊಡಲಾಗಿದೆ.
ಈ ಮಧ್ಯೆ, ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ದೈರ್ಯದಿಂದಿರುವಂತೆ ಭಾರತದ ರಾಯಭಾರ ಕಚೇರಿ ಸಲಹೆ ನೀಡಿದೆ.
ಈ ಮಧ್ಯೆ, ಯುದ್ಧ ವಿರಾಮವು ಭಾರತೀಯರು ಗಡಿ ತಲುಪಲು ನೆರವಾಗುತ್ತದೆ ಎಂದು ಹಾರ್ಕಿವ್ನಿಂದ ಬಂದ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
ಹಲವು ವಿದ್ಯಾರ್ಥಿಗಳು ಈಗಲೂ ಸುಮಿಯಲ್ಲಿ ಸಿಲುಕಿದ್ದು, ಅನ್ನ, ನೀರಿಲ್ಲದೆ ಪರತಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ನಗರದಿಂದ ಹೊರ ಹೋಗಲು 5 ಗಂಟೆ ಅವಕಾಶ
ಉಕ್ರೇನಿಯನ್ ನಗರವಾದ ಮಾರಿಯುಪೋಲ್ನಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದೆ. ಐದು ಗಂಟೆಗಳ ಅವಧಿಯಲ್ಲಿ ನಾಗರಿಕರಿಗೆ ನಗರವನ್ನು ತೊರೆಯಲು ಅನುವು ಮಾಡಿಕೊಡಲಾಗಿದೆ.
ಮಾರಿಯುಪೋಲ್ ಮತ್ತು ವೋಲ್ನೋವಾಖಾ ಪ್ರದೇಶದಲ್ಲಿ ರಷ್ಯಾ ಸೇನೆಯಿಂದ ಕದನ ವಿರಾಮ
ಉಕ್ರೇನ್ನ ಮಾರಿಯುಪೋಲ್ ಮತ್ತು ವೋಲ್ನೋವಾಖಾ ಪ್ರದೇಶದಲ್ಲಿ ರಷ್ಯಾ ಸೇನೆ ಇಂದು ಬೆಳಗ್ಗೆ ಕದನ ವಿರಾಮ ಘೋಷಿಸಿದೆ. ಈ ಮೂಲಕ ಮಾನವೀಯ ಪರಿಹಾರ ಕಾರ್ಯ ಕೈಗೊಳ್ಳಲು ಮತ್ತು ನಾಗರಿಕರು ನಗರದಿಂದ ಹೊರ ಹೋಗಲು ಸೇನೆ ಅವಕಾಶ ಮಾಡಿಕೊಟ್ಟಿದೆ.
ಆದರೆ, ಉಕ್ರೇನ್ನಲ್ಲಿ ಮಿಲಿಟರಿ ಕಾರ್ಯಾಚರಣೆ ಮುಂದುವರಿಯಲಿದೆ ಎಂದೂ ರಷ್ಯಾದ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.
ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಮಾರಿಯುಪೋಲ್ ಮತ್ತು ವೋಲ್ನೊವೋಖಾ ಪ್ರದೇಶದಲ್ಲಿ ಕದನ ವಿರಾಮ ಘೋಷಣೆ ಮಾಡಲಾಯಿತು. ಪರಿಹಾರ ಕಾರ್ಯ ಕೈಗೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ನಾಗರಿಕರು ಈ ನಗರಗಳನ್ನು ತೊರೆಯಲು ಅವಕಾಶ ನೀಡಲಾಗಿದೆ ಎಂದು ರಷ್ಯಾ ಸೇನೆ ತಿಳಿಸಿದೆ.
ವ್ಯೂಹಾತ್ಮಕವಾಗಿ ಪ್ರಾಮುಖ್ಯತೆ ಪಡೆದಿರುವ ಮಾರಿಯುಪೋಲ್ ಮೇಲೆ ರಷ್ಯಾ ಕೆಲವು ದಿನಗಳಿಂದ ನಿರಂತರ ದಾಳಿ ಕೈಗೊಂಡಿತ್ತು. ನಗರಕ್ಕೆ ನೀರು, ವಿದ್ಯುತ್ ಕಡಿತಗೊಂಡು, ಜನ ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ, ಮಾನವೀಯ ಪರಿಹಾರ ಕಾರ್ಯ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಮಾರಿಯುಪೋಲ್ ಮೇಯರ್ ಆಗ್ರಹಿಸಿದ್ದರು.
ಅಣಸ್ಥಾವರದ ಮೇಲಿನ ದಾಳಿ ಯುದ್ಧಾಪರಾಧ
ಉಕ್ರೇನ್ನ ಝಪೊರೀಝ್ಯಾ ಅಣ ವಿದ್ಯುತ್ ಸ್ಥಾವರದ ಮೇಲಿನ ರಷ್ಯಾದ ದಾಳಿಯನ್ನು ಯುದ್ಧಾಪರಾದವೆಂದು ಪರಿಗಣಿಸುವಂತೆ ಉಕ್ರೇನ್ ಒತ್ತಾಯಿಸಿದೆ.
ಶುಕ್ರವಾರ ಬೆಳಗ್ಗೆ ಝಪೊರೀಝ್ಯಾ ಅಣುಸ್ಥಾವರದ ಮೇಲೆ ರಷ್ಯಾ ಶೆಲ್ ದಾಳಿ ನಡೆಸಿತ್ತು. ಇಡೀ ವಿಶ್ವದಲ್ಲಿ ಆತಂಕ ವ್ಯಕ್ತವಾದ ನಂತರ ದಾಳಿಯನ್ನು ನಿಲ್ಲಿಸಲಾಗಿತ್ತು.
ಉಕ್ರೇನ್ನ ವ್ಯೂಹಾತ್ಮಕ ಪ್ರದೇಶ ಮಾರಿಯುಪೋಲ್ ಅನ್ನು ನಿರ್ಬಂಧಿಸಿದ ರಷ್ಯಾ
ಉಕ್ರೇನ್ನ ವ್ಯೂಹಾತ್ಮಕ ಪ್ರದೇಶ, ಬಂದರು ನಗರಿ ಮಾರಿಯುಪೋಲ್ ಅನ್ನು ರಷ್ಯಾ ಸೇನಾ ಪಡೆಗಳು ನಿರ್ಬಂಧಿಸಿವೆ. 4.50 ಲಕ್ಷ ಜನರಿರುವ ನಗರದ ಮೇಲೆ ರಷ್ಯಾ ತೀವ್ರ ದಾಳಿ ನಡೆಸುತ್ತಿದ್ದು, ವಿದ್ಯುತ್, ನೀರಿನ ಸಂಪರ್ಕ ಕಡಿತಗೊಂಡಿದೆ.
ಫೇಸ್ಬುಕ್, ಟ್ವಿಟರ್ ಮೇಲೆ ನಿಷೇಧ ಹೇರಿದ ರಷ್ಯಾ
ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ತಾರತಮ್ಯ ತೋರಿದೆ ಎಂದು ಆರೋಪಿಸಿರುವ ರಷ್ಯಾದ ಮಾಧ್ಯಮ ನಿಯಂತ್ರಕ (Roskomnadzor), ಫೇಸ್ಬುಕ್ ಹಾಗೂ ಟ್ವಿಟರ್ ಮೇಲೆ ನಿಷೇಧ ಹೇರಿದೆ.
07:44 am
ಉಕ್ರೇನ್ ನಗರಗಳ ಮೇಲೆ ಬಾಂಬ್ ದಾಳಿ ನಡೆಸಿಲ್ಲ: ವ್ಲಾಡಿಮಿರ್ ಪುಟಿನ್
ಉಕ್ರೇನ್ ನಗರಗಳ ಮೇಲೆ ಬಾಂಬ್ ದಾಳಿ ನಡೆಸಿರುವ ಆರೋಪವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಳ್ಳಿ ಹಾಕಿದ್ದಾರೆ.
ಜರ್ಮನಿಯ ಚಾನ್ಸೆಲರ್ ಒಲಾಫ್ ಶೋಲ್ಜ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಪುಟಿನ್, ಉಕ್ರೇನ್ ನಗರಗಳ ಮೇಲೆ ಬಾಂಬ್ ದಾಳಿ ಆರೋಪಗಳು 'ಸುಳ್ಳು' ಎಂದು ಹೇಳಿದ್ದಾರೆ.
ಸಂಪೂರ್ಣ ಸುದ್ದಿ ಓದಿ
07:42 am
ನ್ಯಾಟೊ ವಿರುದ್ಧ ಝೆಲೆನ್ಸ್ಕಿ ತೀವ್ರ ಅಸಮಾಧಾನ
ರಷ್ಯಾದ ಬಾಂಬ್ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ 'ನೊ-ಫ್ಲೈ ಜೋನ್' (ಯುದ್ಧ ವಿಮಾನ ಹಾರಾಟ ನಿಷೇಧ ವಲಯ) ಹೇರುವ ಉಕ್ರೇನ್ ಮನವಿಯನ್ನು ನ್ಯಾಟೊ ತಿರಸ್ಕರಿಸಿದೆ.
ನ್ಯಾಟೊ ನಿಲುವನ್ನು ತೀವ್ರವಾಗಿ ಖಂಡಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಉಕ್ರೇನ್ ನಗರಗಳಲ್ಲಿ ರಷ್ಯಾ ಮತ್ತಷ್ಟು ಬಾಂಬ್ ದಾಳಿ ನಡೆಸಲು ನ್ಯಾಟೊ ಹಸಿರು ನಿಶಾನೆ ತೋರಿದೆ ಎಂದು ಆರೋಪಿಸಿದ್ದಾರೆ.
ಏನಿದು 'ನೊ-ಫ್ಲೈ ಜೋನ್'? ಸಂಪೂರ್ಣ ಮಾಹಿತಿ ಪಡೆಯಿರಿ
ವಿಕಿರಣ ಪಸರಿಸಿಲ್ಲ: ಅಮೆರಿಕ
ವಿಕಿರಣ ಪಸರಿಸಿರುವ ಬಗ್ಗೆ ಯಾವುದೇ ಲಕ್ಷಣಗಳು ಕಾಣಿಸಿಲ್ಲ. ಅಮೆರಿಕವು ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಮಾಣು ಸ್ಥಾವರದ ಸುರಕ್ಷತೆ ನಾಶ: ವರದಿ
ಝಪೋರಿಝ್ಯಾ ಪರಮಾಣು ವಿದ್ಯುತ್ ಸ್ಥಾವರದ ಸುರಕ್ಷತೆ ನಾಶಗೊಂಡಿದೆ. ನಾವು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ. ಬೆಂಕಿ ಹೊತ್ತಿ ಉರಿಯುತ್ತಿದೆ. ಅಗ್ನಿಶಾಮಕ ದಳಗಳೂ ಕಾರ್ಯನಿರ್ವಹಿಸಲು ಆಗುತ್ತಿಲ್ಲ. ದೊಡ್ಡ ಅಪಾಯ ಎದುರಾಗಿದೆ. ರಿಯಾಕ್ಟರ್ಗಳು ಅಪಾಯದಲ್ಲಿವೆ’ ಎಂದು ಸ್ಥಾವರದ ಮುಖ್ಯಸ್ಥ ಇಗೊರ್ ಮುರಾಶೋವ್ ಹೇಳಿದ್ದಾರೆ ಎಂದು ಪೂರ್ವ ಯೂರೋಪ್ನ ಪ್ರಖ್ಯಾತ ಸುದ್ದಿ ಸಂಸ್ಥೆ ‘NEXTA’ ವರದಿ ಮಾಡಿದೆ.
ಅಣುಸ್ಥಾವರ ಸುರಕ್ಷಿತ: ಉಕ್ರೇನ್ನಿಂದ ಮಾಹಿತಿ
ಯೂರೋಪ್ನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಷ್ಯಾ ಶೆಲ್ ದಾಳಿ: ತೀವ್ರ ಆತಂಕ
ಉಕ್ರೇನ್ನ ಝಪೊರಿಝ್ಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ಪಡೆಗಳು ಎಲ್ಲ ದಿಕ್ಕಿನಿಂದ ನಿರಂತರ ಶೆಲ್ ದಾಳಿ ನಡೆಸುತ್ತಿವೆ. ಸ್ಥಾವರ ಹೊತ್ತಿ ಉರಿಯುತ್ತಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಶುಕ್ರವಾರ ತಿಳಿಸಿದ್ದಾರೆ. ಸ್ಥಳೀಯ ಮೇಯರ್ ಕೂಡ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಸ್ಥಾವರ ಸ್ಫೋಟಿಸಿದರೆ ಅದರ ಭೀಕರತೆಯು ಚರ್ನೋಬಿಲ್ ದುರಂತಕ್ಕಿಂತಲೂ 10 ಪಟ್ಟು ದೊಡ್ಡದಾಗಿರುತ್ತದೆ. ರಷ್ಯನ್ನರು ತಕ್ಷಣವೇ ದಾಳಿ ನಿಲ್ಲಿಸಬೇಕು. ಅಗ್ನಿಶಾಮಕ ಕಾರ್ಯಕ್ಕೆ ಅವಕಾಶ ನೀಡಬೇಕು ಎಂದು ಕುಲೆಬಾ ಆಗ್ರಹಿಸಿದ್ದಾರೆ.
09:13 pm
ಉಕ್ರೇನ್ ಮತ್ತು ರಷ್ಯಾ ನಡುವೆ ಎರಡನೇ ಸುತ್ತಿನ ಮಾತುಕತೆ ಆರಂಭ
ಕೀವ್: ಬೆಲರೂಸ್ನಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವಿನ ಎರಡನೇ ಸುತ್ತಿನ ಮಾತುಕತೆ ಆರಂಭವಾಗಿದೆ ಎಂದು ರಿಪಬ್ಲಿಕ್ ಆಫ್ ಬೆಲರೂಸ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
06:57 pm
ಉಕ್ರೇನ್ನಲ್ಲಿ ತಕ್ಷಣವೇ ಕದನ ವಿರಾಮ ಘೋಷಿಸುವಂತೆ ಐರೋಪ್ಯ ಒಕ್ಕೂಟ ಒತ್ತಾಯ
06:53 pm
ರಷ್ಯಾ ಜೊತೆ ಅಂತರ ಕಾಯ್ದುಕೊಳ್ಳಿ: ಭಾರತಕ್ಕೆ ಅಮೆರಿಕ ಸೂಚನೆ
04:44 pm
ಉಕ್ರೇನ್: ರಾಜ್ಯದ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಬೊಮ್ಮಾಯಿ
ಬೆಂಗಳೂರು: ಉಕ್ರೇನ್ನ ಕಾರ್ಕೀವ್ ನಗರದಲ್ಲಿ ರಾಜ್ಯದ ಸುಮಾರು 200 ವಿದ್ಯಾರ್ಥಿಗಳು ಇದ್ದು, ಅವರನ್ನು ಆದಷ್ಟು ಬೇಗ ಕರೆ ತರುವ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಉಕ್ರೇನ್ನಲ್ಲಿರುವ ವಿದ್ಯಾರ್ಥಿಗಳ ಜತೆ ಗುರುವಾರ ದೂರವಾಣಿ ಮೂಲಕ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿದರು.
ತಮ್ಮ ಪರಿಸ್ಥಿತಿಯನ್ನು ವಿವರಿಸಿದ ವಿದ್ಯಾರ್ಥಿಗಳು, ಕಾರ್ಕೀವ್ ನಗರದಿಂದ 30 ಕಿ.ಮೀ ದೂರದ ಪ್ರದೇಶಕ್ಕೆ ನಡೆದುಕೊಂಡೇ ಬಂದಿದ್ದೇವೆ. ಸದ್ಯಕ್ಕೆ ಸುರಕ್ಷಿತವಾಗಿರುವುದಾಗಿ ಬೊಮ್ಮಾಯಿ ಅವರಿಗೆ ವಿವರಿಸಿದರು.
ಸಂಕಷ್ಟದ ಈ ಸಂದರ್ಭದಲ್ಲಿ ಧೈರ್ಯವಾಗಿರಬೇಕು. ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಎಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ವ್ಯವಸ್ಥೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
04:03 pm
ರಷ್ಯಾಗೆ ಯುದ್ಧ ನಿಲ್ಲಿಸಿ ಎಂದು ನಾವು ಹೇಳಲು ಸಾಧ್ಯವೇ?: ಮುಖ್ಯ ನ್ಯಾಯಮೂರ್ತಿ
03:06 pm
ಉಕ್ರೇನ್ನಿಂದ ಮಂಗಳೂರಿಗೆ ಮರಳಿದ ಅನುಷಾ ಭಟ್
ಮಂಗಳೂರು: ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ನಗರದ ಬಿಜೈ ನಿವಾಸಿ ಅನುಷಾ ಭಟ್, ಗುರುವಾರ ಸುರಕ್ಷಿತವಾಗಿ ನಗರಕ್ಕೆ ಬಂದಿಳಿದಿದ್ದಾರೆ.
ಉಕ್ರೇನ್ ಸೈನಿಕರು ನಮ್ಮನ್ನು ಗಡಿಯವರೆಗೆ ಬಿಟ್ಟು ಬಂದರು. ನಂತರ ನಾವು ರೊಮೇನಿಯಾಕ್ಕೆ ತೆರಳಿ ಅಲ್ಲಿನ ಆಶ್ರಯ ಕೇಂದ್ರದಲ್ಲಿ ಉಳಿದುಕೊಂಡಿದ್ದೆವು. ರೊಮೇನಿಯಾದಿಂದ ಭಾರತೀಯ ಅಧಿಕಾರಿಗಳು ಮುಂಬೈಗೆ ವಿಮಾನ ವ್ಯವಸ್ಥೆ ಮಾಡಿದ್ದು, ಇದೀಗ ಮುಂಬೈನಿಂದ ಇಲ್ಲಿಗೆ ಬಂದಿದ್ದೇನೆ ಎಂದು ಅನುಷಾ ತಿಳಿಸಿದರು.
ತಾಯಿ ವಿದ್ಯಾ ಭಟ್ ಹಾಗೂ ತಂದೆ ಹರೀಶ್ಚಂದ್ರ ಭಟ್ ಅವರು ವಿಮಾನ ನಿಲ್ದಾಣಕ್ಕೆ ಬಂದು ಮಗಳನ್ನು ಬರಮಾಡಿಕೊಂಡರು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಕೂಡ ವಿಮಾನ ನಿಲ್ದಾಣದಲ್ಲಿ ಅನುಷಾ ಅವರನ್ನು ಸ್ವಾಗತಿಸಿದರು.
ಉಕ್ರೇನ್ನ ದೊಡ್ಡ ನಗರ ಖೆರ್ಸನ್ ವಶಪಡಿಸಿಕೊಂಡ ರಷ್ಯಾ ಪಡೆಗಳು
ಉಕ್ರೇನ್ನ ದೊಡ್ಡ ನಗರಗಳಲ್ಲಿ ಒಂದಾದ ಖೆರ್ಸನ್ಅನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ಖಚಿತಪಡಿಸಿದ್ದಾರೆ. ವಾರದ ಹಿಂದೆ ರಷ್ಯಾ ಆಕ್ರಮಣ ಆರಂಭಿಸಿದ ನಂತರ ರಷ್ಯಾ ತೆಕ್ಕೆ ಸಿಕ್ಕ ಮೊದಲ ಪ್ರಮುಖ ನಗರ ಇದಾಗಿದೆ.
ರಷ್ಯಾ ಉಕ್ರೇನ್ ಸಂಘರ್ಷದಿಂದ 10 ಲಕ್ಷ ಜನ ನಿರಾಶ್ರಿತ
ರಷ್ಯಾದ ಆಕ್ರಮಣದ ನಂತರ 10 ಲಕ್ಷ ಜನರು ಉಕ್ರೇನ್ನಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್ಎಚ್ಆರ್ಸಿ ಹೇಳಿದೆ.
ಯುದ್ಧದಲ್ಲಿ ನಮ್ಮ 498 ಸೈನಿಕರು ಹತರಾಗಿದ್ದಾರೆ: ಸಾವು ನೋವು ಒಪ್ಪಿಕೊಂಡ ರಷ್ಯಾ
ರಷ್ಯಾ ವಿರುದ್ಧದ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ 141 ಮತ: ಭಾರತ, ಚೀನಾ ನಿರ್ಲಪ್ತ
ಭಾರತೀಯರ ರಕ್ಷಣೆ: ಪುಟಿನ್–ಮೋದಿ ಚರ್ಚೆ
12,000 ಭಾರತೀಯ ವಿದ್ಯಾರ್ಥಿಗಳು ಉಕ್ರೇನ್ ತೊರೆದಿದ್ದಾರೆ: ವಿದೇಶಾಂಗ ಕಾರ್ಯದರ್ಶಿ
ತಟಸ್ಥವಾಗಿ ಉಳಿಯಲು ಇದು ಸಮಯವಲ್ಲ, ನಮ್ಮನ್ನು ಬೆಂಬಲಿಸಿ: ಇತರ ದೇಶಗಳಿಗೆ ಝೆಲೆನ್ಸ್ಕಿ ಮನವಿ
ರಷ್ಯಾವು ನಮ್ಮ ಇತಿಹಾಸವನ್ನು ಅಳಿಸಲು ಮುಂದಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದಾರೆ.
ರಷ್ಯಾ–ಉಕ್ರೇನ್ ಸಂಘರ್ಷ: ಹಾರ್ಕಿವ್ ಮೇಲಿನ ದಾಳಿಯಲ್ಲಿ ಕನಿಷ್ಠ 21 ಸಾವು
ರಷ್ಯಾ ವಿರುದ್ಧ ಸಂಘರ್ಷಕ್ಕಿಳಿಯುವುದಿಲ್ಲ ಎಂದ ಅಮೆರಿಕ
ಯುದ್ಧಪೀಡಿತ ಉಕ್ರೇನ್ನಲ್ಲಿ ರಷ್ಯಾದ ವಿರುದ್ಧ ಸಂಘರ್ಷಕ್ಕೆ ಇಳಿಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬುಧವಾರ ಸ್ಪಷ್ಟಪಡಿಸಿದ್ದಾರೆ.
ರಷ್ಯಾದೊಂದಿಗಿನ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸಿದ ಆ್ಯಪಲ್, ಬೋಯಿಂಗ್
ಉಕ್ರೇನ್ ಮೇಲೆ ಮುಂದುವರಿದ ರಷ್ಯಾ ದಾಳಿ
ಹಾರ್ಕಿವ್ ನಗರದ ಪ್ರಾದೇಶಿಕ ಆಡಳಿತದ ಕಟ್ಟಡ ಫ್ರೀಡಮ್ ಸ್ಕ್ವೇರ್ ಮೇಲೆ ಮಂಗಳವಾರ ಬೆಳಗ್ಗೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.
ರಷ್ಯಾ–ಉಕ್ರೇನ್ ಬಿಕ್ಕಟ್ಟು: ಯುರೋಪ್ ಒಕ್ಕೂಟದ ಅಧ್ಯಕ್ಷರ ಜತೆ ಮೋದಿ ಮಾತುಕತೆ
ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ನಲ್ಲಿ ಬಾಂಬ್ ದಾಳಿ ನಡೆಸುತ್ತಿವೆ
ರಷ್ಯಾ ವಿಮಾನಗಳಿಗೆ ನಿರ್ಬಂಧ ವಿಧಿಸಲು ಮುಂದಾದ ಅಮೆರಿಕ
ಉಕ್ರೇನ್ ಮೇಲಿನ ಆಕ್ರಮಣವನ್ನು ರಷ್ಯಾ ತೀವ್ರಗೊಳಿಸಿರುವ ಬೆನ್ನಲ್ಲೇ ಆ ದೇಶದ ವಿಮಾನಗಳಿಗೆ ತನ್ನ ವಾಯು ಪ್ರದೇಶವನ್ನು ನಿರ್ಬಂಧಿಸಲು ಅಮೆರಿಕ ತೀರ್ಮಾನಿಸಿದೆ. ಯುರೋಪ್ ಒಕ್ಕೂಟ ಸಹ ಇದೇ ಕ್ರಮ ಕೈಗೊಳ್ಳಲಿದೆ ಎಂದು ವರದಿಯಾಗಿದೆ.
ರಷ್ಯಾ ಪಡೆಗಳ ಕ್ಷಿಪಣಿ ದಾಳಿ; ಕರ್ನಾಟಕದ ವಿದ್ಯಾರ್ಥಿ ಸಾವು
ಉಕ್ರೇನ್ನಿಂದ ಸ್ಥಳಾಂತರ ಕಾರ್ಯಾಚರಣೆಗೆ ಕೈಜೋಡಿಸಲು ವಾಯುಪಡೆಗೆ ಮೋದಿ ಕರೆ
ಪುಟಿನ್ರ ‘ಬ್ಲ್ಯಾಕ್ ಬೆಲ್ಟ್’ ಕಸಿದ ಟೇಕ್ವಾಂಡೊ: ಉಕ್ರೇನ್ ಮೇಲೆ ದಾಳಿಗೆ ಖಂಡನೆ
ಉಕ್ರೇನ್: ತಕ್ಷಣವೇ ಕೀವ್ ತೊರೆಯುವಂತೆ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ
ಶೆಲ್ ದಾಳಿಯಲ್ಲಿ ಉಕ್ರೇನ್ನ 70 ಸೈನಿಕರ ಸಾವು
ಉಕ್ರೇನ್ನ ಈಶಾನ್ಯ ಸುಮಿ ಪ್ರದೇಶದ ಒಖ್ತಿರ್ಕಾ ಪಟ್ಟಣದಲ್ಲಿ ರಷ್ಯಾದ ಪಡೆಗಳು ಸೇನಾ ನೆಲೆಗಳ ಮೇಲೆ ಭಾನುವಾರ ನಡೆಸಿದ ಶೆಲ್ ದಾಳಿಯಲ್ಲಿ 70ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಡಿಮಿಟ್ರೋ ಝೈವಿಟ್ಸ್ಕಿ ಫೇಸ್ಬುಕ್ನಲ್ಲಿ ತಿಳಿಸಿದ್ದಾರೆ.
ದಕ್ಷಿಣ ಉಕ್ರೇನ್ ಹೊರವಲಯದಲ್ಲಿ ರಷ್ಯಾ ಸೇನೆ
ರಷ್ಯಾದ ಸೇನಾ ಪಡೆಗಳು ದಕ್ಷಿಣ ಉಕ್ರೇನಿನ ಖರ್ಸನ್ನ ಹೊರವಲಯದಲ್ಲಿವೆ ಎಂದು ಉಕ್ರೇನ್ ತಿಳಿಸಿದೆ.
ರಷ್ಯಾ ನೆರವಿಲ್ಲದೇ ಐಎಸ್ಎಸ್ಅನ್ನು ನಿರ್ವಹಿಸುವ ಮಾರ್ಗ ಹುಡುಕುತ್ತಿದೆ ನಾಸಾ
ರಷ್ಯಾದ ಸಹಾಯವಿಲ್ಲದೇ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್ಎಸ್)’ ಕಕ್ಷೆಯಲ್ಲಿ ನಿರ್ವಹಿಸಲು ನಾಸಾ ಮಾರ್ಗಗಳನ್ನು ಹುಡುಕುತ್ತಿದೆ. ಆದರೆ, ಉಕ್ರೇನ್ ಆಕ್ರಮಣದ ನಂತರ ರಷ್ಯಾ ಐಎಸ್ಎಸ್ ಸಹಯೋಗದಿಂದ ಹಿಂದೆ ಸರಿಯುವ ಲಕ್ಷಣಗಳನ್ನೇನೂ ತೋರಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮೆರಿಕದ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ರಷ್ಯಾ ಐಎಸ್ಎಸ್ನ ತನ್ನ ಪಾಲುದಾರಿಕೆಯಿಂದ ಹೊರಬಂದರೆ ಆಗುವ ದುಷ್ಪರಿಣಾಮಗಳ ಬಗ್ಗೆ ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮದ ಮುಖ್ಯಸ್ಥ ಡಿಮಿಟ್ರಿ ರೊಗೊಜಿನ್ ಆತಂಕ ವ್ಯಕ್ತಪಡಿಸಿದ್ದರು. ನಿರ್ವಹಣೆಯಿಂದ ರಷ್ಯಾ ಹಿಂದೆ ಸರಿದರೆ, 400 ಟನ್ ತೂಕದ ಐಎಸ್ಎಸ್ ಭೂಮಿಗೆ ಅಪ್ಪಳಿಸುವ ಭೀತಿ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದರು. ಇದು ಭಾರತ ಅಥವಾ ಚೀನಾದ ಮೇಲೆಯೇ ಬೀಳುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದರು.
ಹಾರ್ಕಿವ್ ಮೇಲೆ ರಷ್ಯಾದಿಂದ ರಾಕೆಟ್ ದಾಳಿ
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಬೆಲಾರಸ್ ಗಡಿ ಭಾಗದಲ್ಲಿ ಸೋಮವಾರ ಸಭೆ ನಡೆಯಿತಾದರೂ, ಫಲಶ್ರುತಿ ಬಂದಿಲ್ಲ. ಹೀಗಾಗಿ ರಷ್ಯಾ ಮಂಗಳವಾರವೂ ಉಕ್ರೇನ್ ಮೇಲೆ ದಾಳಿ ನಡೆಸಿದೆ. ಹಾರ್ಕಿವ್ನಲ್ಲಿ ರಾಕೆಟ್ ದಾಳಿ ನಡೆಯುತ್ತಿದೆ.
ರಷ್ಯಾಗೆ ನಿರ್ಬಂಧ ಹೇರಿದ ಫಿಫಾ
ಅಂತರರಾಷ್ಟ್ರೀಯ ಫುಟ್ಬಾಲ್ನ ಜಾಗತಿಕ ಮಂಡಳಿಯಾಗಿರುವ ಫಿಫಾ, ರಷ್ಯಾವನ್ನು ಒಕ್ಕೂಟದಿಂದ ಹೊರಹಾಕಿದೆ. ಈ ವರ್ಷ ಕತಾರ್ನಲ್ಲಿ ಆಯೋಜನೆಯಾಗಲಿರುವ ವಿಶ್ವಕಪ್ ಟೂರ್ನಿಗೆ ನಡೆಯುವ ಅರ್ಹತಾ ಪಂದ್ಯಗಳಿಂದಲೂ ರಷ್ಯಾದ ತಂಡಗಳನ್ನು ಬಹಿಷ್ಕರಿಸಲಾಗಿದೆ.
ರಷ್ಯಾ ಮತ್ತು ಬೆಲರೂಸ್ನವರೊಂದಿಗೆ ಆಡಲಾರೆ: ಸ್ಟಿಟೊಲಿನಾ
ರಷ್ಯಾ ಮತ್ತು ಬೆಲರೂಸ್ನ ಆಟಗಾರರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸದೇ ಇರಲು ಉಕ್ರೇನ್ ಟೆನಿಸ್ ತಾರೆ ಎಲಿನಾ ಸ್ಟಿಟೊಲಿನಾ ನಿರ್ಧರಿಸಿದ್ದಾರೆ.
‘ರಗ್ಬಿ’ಯಿಂದ ರಷ್ಯಾ, ಬೆಲರೂಸ್ ಅಮಾನತು
ರಗ್ಬಿ ಕ್ರೀಡೆಯಿಂದ ರಷ್ಯಾ ಮತ್ತು ಬೆಲರೂಸ್ ಅನ್ನು ಅಮಾನತು ಮಾಡಲಾಗಿದೆ. ಮುಂದಿನ ಆದೇಶದ ವರೆಗೆ ಅಮಾನತು ಜಾರಿಯಲ್ಲಿ ಇರಲಿದೆ.
ಸೀಮೋಲ್ಲಂಘನ: ದಿಗ್ಗಜರ ಹಗೆ, ಉಕ್ರೇನ್ ಬೇಗೆ
ಆಳ–ಅಗಲ: ಭಾರತೀಯ ವಿದ್ಯಾರ್ಥಿಗಳ ಮೇಲೆ ಪ್ರಹಾರ
5 ಲಕ್ಷಕ್ಕೂ ಅಧಿಕ ಜನರು ಉಕ್ರೇನ್ ತೊರೆದಿದ್ದಾರೆ- ವಿಶ್ವಸಂಸ್ಥೆ
ಬ್ರಿಟನ್, ಜರ್ಮನಿ ಸೇರಿದಂತೆ 36 ರಾಷ್ಟ್ರಗಳ ವಿಮಾನಗಳನ್ನು ನಿಷೇಧಿಸಿದ ರಷ್ಯಾ
ಉಕ್ರೇನ್ನಲ್ಲಿ ಕನ್ನಡಿಗರು: ಬ್ಯಾಗ್ ಹೊತ್ತು 8 ಕಿ.ಮೀ ನಡೆದೇ ಗಡಿ ತಲುಪಿದ ವಿದ್ಯಾ
ಉಕ್ರೇನ್ ನಾಗರಿಕರು ದೇಶದ ರಾಜಧಾನಿ ಕೀವ್ನಿಂದ 'ಮುಕ್ತವಾಗಿ' ಹೊರಹೋಗಬಹುದು ಎಂದು ರಷ್ಯಾದ ಸೇನೆ ಸೋಮವಾರ ಹೇಳಿದೆ.
ರಷ್ಯಾ ವಿರುದ್ಧ ಪ್ರತಿಭಟನೆ: ಪುಟಿನ್ ಸರ್ಕಾರದಿಂದ ಕೆನಡಾಗೆ ಬೆದರಿಕೆ
ಮೊದಲ ಸುತ್ತಿನ ಮಾತುಕತೆ ನಡೆಸುತ್ತಿರುವ ರಷ್ಯಾ, ಉಕ್ರೇನ್ ನಿಯೋಗ
ಬೆಲಾರಸ್ ಗಡಿಯಲ್ಲಿ ರಷ್ಯಾ ಮತ್ತು ಉಕ್ರೇನ್ ದೇಶಗಳ ನಿಯೋಗ ಮೊದಲ ಸುತ್ತಿನ ಮಾತುಕತೆ ನಡೆಸುತ್ತಿವೆ ಎಂದು ಬಿಬಿಸಿ ಟಿ.ವಿ ವರದಿ ಮಾಡಿದೆ. ಆದರೆ ಮಾತುಕತೆಯ ವಿವರಗಳು ಲಭ್ಯವಾಗಿಲ್ಲ
ರಷ್ಯಾದ ಹೂಡಿಕೆದಾರರಿಗೆ ವಾಸಿಸಲು ಅನುಮತಿ ನಿರಾಕರಿಸಿದ ಗ್ರೀಸ್
ರಷ್ಯಾದ 5,000 ಕ್ಕೂ ಅಧಿಕ ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡ ಉಕ್ರೇನ್
ರಷ್ಯಾ–ಉಕ್ರೇನ್ ಶಾಂತಿಯ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಲಿ: ತಾಲಿಬಾನ್ ಆಗ್ರಹ
ಉಕ್ರೇನ್ಗೆ ಮಿಲಿಟರಿ ನೆರವು ಹೆಚ್ಚಿಸಿದ ನ್ಯಾಟೊ ಸದಸ್ಯ ರಾಷ್ಟ್ರಗಳು
ರಷ್ಯಾ ಆಕ್ರಮಣ: ಸಾವಿನ ಬಗ್ಗೆ ಭಿನ್ನ ಮಾಹಿತಿ ಹಂಚಿಕೊಂಡ ಉಕ್ರೇನ್, ವಿಶ್ವಸಂಸ್ಥೆ
ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಕೆ: ಐರೋಪ್ಯ ಒಕ್ಕೂಟ ದೇಶಗಳ ರಕ್ಷಣಾ ಸಚಿವರ ಸಭೆ
ಉಕ್ರೇನ್ ಜೊತೆ ಮಾತುಕತೆ ನಡೆಸಲು ರಷ್ಯಾ ಸಿದ್ಧವಿದೆ. ಆದರೆ ಉಕ್ರೇನ್ ಕೂಡಲೇ ಕದನ ವಿರಾಮ ಘೋಷಣೆ ಮಾಡುವಂತೆ ಬೇಡಿಕೆ ಇಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕದನ ವಿರಾಮಕ್ಕೆ ಉಕ್ರೇನ್ ಬೇಡಿಕೆ
ರಷ್ಯಾ–ಉಕ್ರೇನ್ ಸಂಘರ್ಷ: ರೊಮೇನಿಯಾ ಗಡಿಯಲ್ಲಿ 2 ಸಾವಿರ ಭಾರತೀಯರು
ಭಾರತೀಯರ ಸ್ಥಳಾಂತರ: ಉಕ್ರೇನ್ನ ನೆರೆ ರಾಷ್ಟ್ರಗಳಿಗೆ ತೆರಳಲಿರುವ ಕೇಂದ್ರ ಸಚಿವರು
ಕೀವ್ ಅನ್ನು ವಶಪಡಿಸಿಕೊಳ್ಳುವ ರಷ್ಯಾ ಪ್ರಯತ್ನಗಳು ವಿಫಲ: ಉಕ್ರೇನ್
‘ಕೀವ್ ಉಕ್ರೇನ್ ನಿಯಂತ್ರಣದಲ್ಲಿದೆ. ಅದನ್ನು ಆಕ್ರಮಿಸಿಕೊಳ್ಳುವ ರಷ್ಯಾದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ’ ಎಂದು ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.
ಉಕ್ರೇನ್ ಮೇಲೆ ದಾಳಿ: ಅಮೆರಿಕ, ಕೆನಡಾದಲ್ಲಿ ರಷ್ಯಾ ಮೂಲದ ಮದ್ಯ ಮಾರಾಟ ನಿಷೇಧ
ವಿಶ್ವದ ಅತಿದೊಡ್ಡ ವಿಮಾನವನ್ನು ನಾಶ ಮಾಡಿದ ರಷ್ಯಾ ಸೇನೆ
‘ವಿಶ್ವದ ಅತಿದೊಡ್ಡ ವಿಮಾನ, ಉಕ್ರೇನ್ನ ‘ಆಂಟೊನೊವ್-225’ ಸರಕು ವಿಮಾನವನ್ನು ರಷ್ಯಾದ ಸೇನಾ ಪಡೆಗಳು ಕೀವ್ ಹೊರವಲಯದಲ್ಲಿ ಭಾನುವಾರ ನಾಶ ಮಾಡಿವೆ’ ಎಂದು ಉಕ್ರೇನ್ನ ಸರ್ಕಾರಿ ಸ್ವಾಮ್ಯದ, ಶಸ್ತ್ರಾಸ್ತ್ರ ತಯಾರಕ ಸಂಸ್ಥೆ ‘ಉಕ್ರೊಬೊರಾನ್ಪ್ರೊಮ್’ ಹೇಳಿದೆ.
ರಷ್ಯಾ ಆಕ್ರಮಣದ ವಿರುದ್ಧ ಹೋರಾಡಲು ಸೇನೆ ಸೇರಿದ ಉಕ್ರೇನ್ ಬ್ಯೂಟಿ ಕ್ವೀನ್
ರಷ್ಯಾ ಆಕ್ರಮಣ: ಉಕ್ರೇನ್ನಲ್ಲಿ 14 ಮಕ್ಕಳು ಸೇರಿ 352 ನಾಗರಿಕರು ಸಾವು
ರಷ್ಯಾ ನಡೆಸುತ್ತಿರುವ ಆಕ್ರಮಣದಿಂದಾಗಿ ದೇಶದಲ್ಲಿ 14 ಮಕ್ಕಳು ಸೇರಿದಂತೆ ಒಟ್ಟು 352 ನಾಗರಿಕರು ಇದುವರೆಗೆ ಮೃತಪಟ್ಟಿದ್ದಾರೆ. 116 ಮಕ್ಕಳು ಮತ್ತು 1,684 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವಾಲಯ ತಿಳಿಸಿದೆ.
ಉಕ್ರೇನ್ ಜತೆ ಮಾತುಕತೆ ಸಿದ್ಧ: ರಷ್ಯಾ
ಉಕ್ರೇನ್ ಜತೆಗೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ರಷ್ಯಾ ಭಾನುವಾರ ಹೇಳಿದೆ.
ರಷ್ಯಾ ಭಾನುವಾರ ಉಕ್ರೇನ್ ಪ್ರಮುಖ ನಗರ ಖಾರ್ಕಿವ್ ಪ್ರವೇಶಿಸಿದ್ದು, ಅಲ್ಲಿ ಗ್ಯಾಸ್ ಪೈಪ್ ಲೈನ್ ಸ್ಫೋಟಿಸಿದೆ. ಈ ಮಧ್ಯೆ ಮಾತುಕತೆಯ ಪ್ರಸ್ತಾಪ ಕೇಳಿ ಬಂದಿದೆ.
ಉಕ್ರೇನ್ ಎರಡು ನಗರಗಳಿಗೆ ರಷ್ಯಾ ಮುತ್ತಿಗೆ
ಉಕ್ರೇನ್ನ ದಕ್ಷಿಣ ಮತ್ತು ಆಗ್ನೇಯ ಭಾಗದ ಎರಡು ದೊಡ್ಡ ನಗರಗಳ ಮೇಲೆ ಮುತ್ತಿಗೆ ಹಾಕಲಾಗಿದೆ ಎಂದು ರಷ್ಯಾ ಹೇಳಿಕೊಂಡಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ಖಾರ್ಕಿವ್ ಪ್ರವೇಶಿಸಿದ ರಷ್ಯಾ ಸೇನೆ
ಉಕ್ರೇನ್ನ ಈಶಾನ್ಯ ನಗರವಾದ ಖಾರ್ಕಿವ್ನ ಬೀದಿಗಳಲ್ಲಿ ರಷ್ಯಾ ಸೈನ್ಯದ ವಾಹನಗಳು ಕಂಡುಬಂದಿವೆ ಎಂದು ಉಕ್ರೇನ್ನ ಆಂತರಿಕ ಸಚಿವರ ಸಲಹೆಗಾರ ಆಂಟನ್ ಹೆರಾಶ್ಚೆಂಕೊ ಅವರು ಟೆಲಿಗ್ರಾಮ್ನಲ್ಲಿ ಪ್ರಕಟಿಸಿದ್ದಾರೆ.
ಉಕ್ರೇನ್ನ ಅನಿಲ ಪೈಪ್ಲೈನ್ ಸ್ಫೋಟಿಸಿದ ರಷ್ಯಾ ಪಡೆಗಳು: ದುಷ್ಪರಿಣಾಮದ
ಉಕ್ರೇನ್ ಮೇಲಿನ ಆಕ್ರಮಣವನ್ನು ಮತ್ತಷ್ಟು ತೀವ್ರಗೊಳಿಸಲು ಪುಟಿನ್ ಆದೇಶ
ನಿಲ್ಲದ ರಷ್ಯಾ–ಉಕ್ರೇನ್ ಕಾಳಗ: 198 ಸಾವು
ಉಕ್ರೇನ್ | 50 ಸಾವಿರ ಜನರ ವಲಸೆ: ಮುಂದಿನ ಹೆಜ್ಜೆ ಅಸ್ಪಷ್ಟ, ರೈಲು ನಿಲ್ದಾಣವೇ ಮನೆ
ಆಪರೇಷನ್ ಗಂಗಾ: ಬುಡಾಪೆಸ್ಟ್ನಿಂದ 240 ಭಾರತೀಯರು ತಾಯ್ನಾಡಿಗೆ
ಮೋದಿ ಜೊತೆ ಚರ್ಚಿಸಿದ ಝೆಲೆನ್ಸ್ಕಿ: ವಿಶ್ವಸಂಸ್ಥೆಯಲ್ಲಿ ಬೆಂಬಲ ನೀಡುವಂತೆ ಕೋರಿಕೆ
‘ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದೆ. ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸುವ ಉಕ್ರೇನ್ನ ಪ್ರಯತ್ನಗಳ ಬಗ್ಗೆ ವಿವರಿಸಿದೆ. 1,00,000 ಕ್ಕೂ ಹೆಚ್ಚು ಆಕ್ರಮಣಕಾರರು ಉಕ್ರೇನ್ ನೆಲದಲ್ಲಿರುವುದನ್ನು ಅವರಿಗೆ ತಿಳಿಸಿದ್ದೇನೆ. ರಷ್ಯಾ ನಮ್ಮ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಮಗೆ ರಾಜಕೀಯ ಬೆಂಬಲ ನೀಡುವಂತೆ ಭಾರತವನ್ನು ಒತ್ತಾಯಿಸಿದ್ದೇನೆ. ಆಕ್ರಮಣಕಾರರನ್ನು ಒಗ್ಗಟ್ಟಾಗಿ ತಡೆಯಬೇಕಿದೆ’ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಟ್ವೀಟ್ ಮಾಡಿದ್ದಾರೆ.
ಉಕ್ರೇನ್ ಅಧ್ಯಕ್ಷ ಮತ್ತು ಜನರ ಪರವಾಗಿ ನಿಲ್ಲುವುದಾಗಿ ಬ್ರಿಟನ್ ರಾಜಕುಮಾರ ವಿಲಿಯಂ ಮತ್ತು ಪತ್ನಿ ಕೇಟ್ ಅವರು ಘೋಷಿಸಿದ್ದಾರೆ.
ಉಕ್ರೇನ್ಗೆ ಅಮೆರಿಕದಿಂದ ಮಿಲಿಟರಿ ನೆರವು
ವಾಷಿಂಗ್ಟನ್: ರಷ್ಯಾ ಆಕ್ರಮಣದ ವಿರುದ್ಧ ಹೋರಾಡಲು ಅಮೆರಿಕವು ಉಕ್ರೇನ್ಗೆ 350 ಮಿಲಿಯನ್ ಡಾಲರ್ ( ₹2,626 ಕೋಟಿ) ಹೆಚ್ಚುವರಿ ಮಿಲಿಟರಿ ನೆರವನ್ನು ನೀಡಲಿದೆ. ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಶನಿವಾರ ಈ ವಿಷಯ ಘೋಷಿಸಿದರು.
‘ ರಷ್ಯಾ ವಿರುದ್ಧ ಹೋರಾಡಲು, ಬೆದರಿಕೆಗಳನ್ನು ಎದುರಿಸಲು ಉಕ್ರೇನ್ಗೆ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಈ ಪ್ಯಾಕೇಜ್ನಲ್ಲಿ ಇರಲಿದೆ’ ಎಂದು ಬ್ಲಿಂಕನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲಕ್ಷದಷ್ಟು ಉಕ್ರೇನ್ ನಾಗರಿಕರು ಪೋಲೆಂಡ್ಗೆ
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ನಂತರ ಸುಮಾರು 1 ಲಕ್ಷದಷ್ಟು ಉಕ್ರೇನ್ ನಾಗರಿಕರು ಪೋಲೆಂಡ್ಗೆ ಬಂದಿದ್ದಾರೆ ಎಂದು ಉಪ ಸಚಿವ ಪಾವೆಲ್ ಸ್ಜೆಫರ್ನೇಕರ್ ಹೇಳಿದರು.
ಉಕ್ರೇನ್ನಲ್ಲಿ ಈ ವರೆಗೆ ಮೂವರು ಮಕ್ಕಳು ಸೇರಿ 198 ನಾಗರಿಕರು ಸಾವು
ರಷ್ಯಾ ಪಡೆಗಳು ನಡೆಸಿರುವ ದಾಳಿಯಿಂದಾಗಿ ಉಕ್ರೇನ್ನಲ್ಲಿ ಮೂವರು ಮಕ್ಕಳು ಸೇರಿದಂತೆ 198 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸರ್ಕಾರ ತಿಳಿಸಿದೆ.
1,115 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 33 ಮಕ್ಕಳಿದ್ದಾರೆ ಎಂದು ಆರೋಗ್ಯ ಸಚಿವ ವಿಕ್ಟರ್ ಲಿಯಾಶ್ಕೊ ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ಫ್ರಾನ್ಸ್ ಅಧ್ಯಕ್ಷರೊಂದಿಗೆ ಉಕ್ರೇನ್ ಅಧ್ಯಕ್ಷರ ಮಾತುಕತೆ: ಉಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಕೆ
ಉಕ್ರೇನ್ ಮೇಲೆ ರಷ್ಯಾ ದಾಳಿ ಕುರಿತಂತೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಮ್ಮ ಪಾಲುದಾರರಿಂದ ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪರಕರಣಗಳು ಉಕ್ರೇನ್ಗೆ ಬರುತ್ತಿವೆ. ಯುದ್ಧ-ವಿರೋಧಿ ಒಕ್ಕೂಟವು ಕಾರ್ಯನಿರ್ವಹಿಸುತ್ತಿದೆ' ಎಂದಿದ್ದಾರೆ.
ಉಕ್ರೇನ್ ಮೇಲಿನ ದಾಳಿ: ಫ್ರೆಂಚ್ ರೈತರ ಮೇಲೆ ಪರಿಣಾಮ- ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್
ಉಕ್ರೇನ್ನಲ್ಲಿನ ಯುದ್ಧ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ವಿರುದ್ಧ ತೆಗೆದುಕೊಂಡಿರುವ ಭಾರಿ ನಿರ್ಬಂಧಗಳು ಫ್ರೆಂಚ್ ಕೃಷಿ ವಲಯಕ್ಕೆ ದೀರ್ಘಾವಧಿಯ ಮತ್ತು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಯುರೋಪಿಯನ್ ಒಕ್ಕೂಟದ ಅತಿದೊಡ್ಡ ದೇಶ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಶನಿವಾರ ಹೇಳಿದ್ದಾರೆ.
ಯುಎನ್ಎಸ್ಸಿ ನಿರ್ಣಯ: ಉಕ್ರೇನ್ ಪರವಾಗಿ ಭಾರತ ಮತ ಚಲಾಯಿಸಬೇಕಿತ್ತು- ಕಾಂಗ್ರೆಸ್
ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್ಎಸ್ಸಿ) ನಿರ್ಣಯದಿಂದ ದೂರವಿರಲು ನಿರ್ಧರಿಸಿರುವ ಭಾರತದ ಕ್ರಮವನ್ನು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಟೀಕಿಸಿದ್ದಾರೆ. ಭಾರತವು ಉಕ್ರೇನ್ ಪರವಾಗಿ ನಿರ್ಣಯವನ್ನು ಬೆಂಬಲಿಸಬೇಕಿತ್ತು ಎಂದು ಹೇಳಿದ್ದಾರೆ.
ಉಕ್ರೇನ್ನಲ್ಲಿರುವ ಭಾರತೀಯರನ್ನು ಕರೆತರಲು ಮುಂಬೈನಿಂದ ತೆರಳಿದ ಏರ್ ಇಂಡಿಯಾ ವಿಮಾನ
ರಷ್ಯಾ–ಉಕ್ರೇನ್ ಸಂಘರ್ಷ: ಶಾಂತಿಯುತವಾಗಿ ಬಿಕ್ಕಟ್ಟು ಶಮನಕ್ಕೆ ತಾಲಿಬಾನ್ ಸಲಹೆ
ಉಕ್ರೇನ್ ಮೇಲೆ ರಷ್ಯಾ 'ಆಕ್ರಮಣ' ಖಂಡಿಸುವ ವಿಶ್ವಸಂಸ್ಥೆ ನಿರ್ಣಯದಿಂದ ಭಾರತ ದೂರ
ಉಕ್ರೇನ್ ಮೇಲೆ ರಷ್ಯಾ ನಡೆಸಿದ 'ಆಕ್ರಮಣ'ವನ್ನು ಖಂಡಿಸುವ ಹಾಗೂ ಆ ದೇಶದಿಂದ (ಉಕ್ರೇನ್ನಿಂದ) ತನ್ನ ಸಂಪೂರ್ಣ ಸೇನೆಯನ್ನು ತಕ್ಷಣವೇ ಬೇಷರತ್ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್ಎಸ್ಸಿ) ನಿರ್ಣಯದಿಂದ ಭಾರತ ದೂರ ಉಳಿದಿದೆ.
ರಷ್ಯಾ ರಾಯಭಾರಿಯನ್ನು ವಾಪಸ್ ಹೋಗುವಂತೆ ಆದೇಶಿಸಿದ ಗ್ವಾಟೆಮಾಲ ಅಧ್ಯಕ್ಷ
ರಷ್ಯಾದ 1,000ಕ್ಕೂ ಹೆಚ್ಚು ಸೈನಿಕರ ಹತ್ಯೆ: ಉಕ್ರೇನ್
ಕೀವ್: ಇದುವರೆಗೆ ರಷ್ಯಾದ 1,000ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆಗೈಯಲಾಗಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.
ವಾಯವ್ಯ ಕೀವ್ ವಾಯುನೆಲೆ ವಶಪಡಿಸಿಕೊಳ್ಳಲಾಗಿದೆ: ರಷ್ಯಾ
ಉಕ್ರೇನ್ ಜತೆ ಮಾತುಕತೆಗೆ ನಿಯೋಗ ಕಳುಹಿಸಲು ಸಿದ್ಧ: ರಷ್ಯಾ
ರಷ್ಯಾ ಆಕ್ರಮಣದ ಬಗ್ಗೆ ಪೋಪ್ ಫ್ರಾನ್ಸಿಸ್ ಕಳವಳ
ಉಕ್ರೇನ್ ಮೇಲಿನ ರಷ್ಯಾ ಆಕ್ರಮಣದ ಬಗ್ಗೆ ಪೋಪ್ ಫ್ರಾನ್ಸಿಸ್ ಕಳವಳ ವ್ಯಕ್ತಪಡಿಸಿದ್ದಾರೆ.
ರೋಮ್ ನಗರದಲ್ಲಿರುವ ರಷ್ಯಾದ ರಾಯಭಾರ ಕಚೇರಿಗೆ ಶುಕ್ರವಾರ ತೆರಳಿದ ಪೋಪ್, ರಷ್ಯಾದ ಆಕ್ರಣದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಪೋಪ್ ಅವರ ಈ ನಡೆ ಅಪರೂಪದ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ.
ಪ್ರತೀಕಾರದ ನಿರ್ಬಂಧಗಳನ್ನು ಸಿದ್ಧಪಡಿಸಲಾಗಿದೆ: ರಷ್ಯಾ
ಪಾಶ್ಚಾತ್ಯ ದೇಶಗಳ ದೌರ್ಬಲ್ಯಗಳೇನೆಂಬುದು ನಮಗೆ ತಿಳಿದಿದೆ. ಪ್ರತೀಕಾರದ ನಿರ್ಬಂಧಗಳನ್ನು ಸಿದ್ಧಪಡಿಸಲಾಗಿದೆ ಎಂದು ರಷ್ಯಾದ ಮೇಲ್ಮನೆ ಸ್ಪೀಕರ್ ವ್ಯಾಲೆಂಟಿನಾ ಮ್ಯಾಟ್ವಿಯೆಂಕೊ ಹೇಳಿದ್ದಾರೆ.
ಉಕ್ರೇನ್ ಸೇನೆ ಶಸ್ತ್ರ ಕೆಳಗಿಳಿಸಿದರೆ ಮಾತುಕತೆಗೆ ಸಿದ್ಧ: ರಷ್ಯಾ
ಉಕ್ರೇನ್ ಸೇನೆ ಶಸ್ತ್ರ ಕೆಳಗಿಳಿಸಿದರೆ ಮಾತುಕತೆಗೆ ಸಿದ್ಧವಿರುವುದಾಗಿ ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷರ ಮಾತುಗಳೆಲ್ಲ ಸುಳ್ಳು: ರಷ್ಯಾ
ಉದ್ವಿಗ್ನತೆ ಶಮನಗೊಳಿಸಲು ಮಾತುಕತೆಗೆ ಸಿದ್ಧ ಎಂದು ಹೇಳುತ್ತಿರುವ ಉಕ್ರೇನ್ ಅಧ್ಯಕ್ಷರ ಮಾತುಗಳೆಲ್ಲವೂ ಸುಳ್ಳು ಎಂದು ರಷ್ಯಾದ ವಿದೇಶಾಂಗ ಸಚಿವ ತಿಳಿಸಿದ್ದಾರೆ.
‘ಉಕ್ರೇನ್ ಅನ್ನು ದಬ್ಬಾಳಿಯಿಂದ ಮುಕ್ತಗೊಳಿಸಲು ರಷ್ಯಾ ಬಯಸುತ್ತದೆ’
‘ನಾವು ಉಕ್ರೇನ್ ಅನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ. ಉಕ್ರೇನ್ ಅನ್ನು ದಬ್ಬಾಳಿಯಿಂದ ಮುಕ್ತಗೊಳಿಸಲು ಬಯಸುತ್ತೇವೆ’ ಎಂದು ರಷ್ಯಾದ ವಿದೇಶಾಂಗ ಸಚಿವ ಲಾವ್ರೋವ್ ತಿಳಿಸಿದ್ದಾರೆ.
ಉಕ್ರೇನ್ನ ನಾಗರಿಕರನ್ನು ಸ್ವತಂತ್ರಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ.
ಉಕ್ರೇನ್ ಸರ್ಕಾರ ಪ್ರಜಾಸತ್ತಾತ್ಮಕ ಎಂದು ರಷ್ಯಾ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ
ಉಕ್ರೇನ್ನಲ್ಲಿ ಸದ್ಯ ಇರುವ ಸರ್ಕಾರವನ್ನು ಪ್ರಜಾಸತ್ತಾತ್ಮಕ ಎಂದು ನಾವು ಒಪ್ಪಿಕೊಳ್ಳುವ ಸಾಧ್ಯತೆಗಳು ಇಲ್ಲ ಎಂದು ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್ ತಿಳಿಸಿದ್ದಾರೆ.
ಕೀವ್ ಮೇಲೆ ಕ್ಷಿಪಣಿ ದಾಳಿ ನಡೆಸಿಲ್ಲ: ರಷ್ಯಾ ಸ್ಪಷ್ಟನೆ
ಉಕ್ರೇನ್ ರಾಜಧಾನಿ ಕೀವ್ ಮೇಲೆ ಕ್ಷಿಪಣಿ ದಾಳಿ ನಡೆಸಿಲ್ಲ ಎಂದು ರಷ್ಯಾ ಹೇಳಿದೆ. ಕೀವ್ನಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ನಡೆಸುತ್ತಿದೆ ಎಂದು ಉಕ್ರೇನ್ ಆರೋಪಿಸಿತ್ತು. ಇದಕ್ಕೆ ರಕ್ಷಣಾ ಇಲಾಖೆ ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಮುಂದುವರೆದ ರಷ್ಯಾ ದಾಳಿ ನಿರ್ಬಂಧ ಸಾಕಾಗಿಲ್ಲ ಎಂಬುದನ್ನು ಸೂಚಿಸುತ್ತದೆ: ಉಕ್ರೇನ್
ರಷ್ಯಾದಿಂದ ಸೈಬರ್ ದಾಳಿ: ಸಂಪೂರ್ಣ ಇಂಟರ್ನೆಟ್ ಸಂಪರ್ಕ ಕಳೆದುಕೊಂಡ ಉಕ್ರೇನ್
ಉಕ್ರೇನ್–ರಷ್ಯಾ ಸಂಘರ್ಷ: ನೆಲಮಾಳಿಗೆಯನ್ನು ಆಶ್ರಯಿಸಿದ ಭಾರತದ 400 ವಿದ್ಯಾರ್ಥಿಗಳು
ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ಮಾತುಕತೆ, ರಾಜತಾಂತ್ರಿಕತೆ ಉತ್ತಮ ಮಾರ್ಗ: ಭಾರತ
ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲವ್ರೊವ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಜೊತೆ ಭಾರತದ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ದೂರವಾಣಿ ಮೂಲಕ ಪ್ರತ್ಯೇಕ ಮಾತುಕತೆ ನಡೆಸಿದ್ದು, ಉಕ್ರೇನ್ ಬಿಕ್ಕಟ್ಟು ಶಮನಕ್ಕೆ ರಾಜತಾಂತ್ರಿಕತೆ ಮತ್ತು ಮಾತುಕತೆ ಅತ್ಯುತ್ತಮ ಮಾರ್ಗಗಳು ಎಂದು ಹೇಳಿದ್ದಾರೆ.
ನಾಜಿಗಳ ದಾಳಿಯ ನಂತರದ ಮೊದಲ ಭಯಾನಕ ದಾಳಿ ಇದಾಗಿದೆ: ಉಕ್ರೇನ್
ಸಂಪೂರ್ಣ ಇಂಟರ್ನೆಟ್ ಸಂಪರ್ಕ ಕಳೆದುಕೊಂಡ ಉಕ್ರೇನ್
ಬೃಹತ್ ಸೈಬರ್ ದಾಳಿಯೊಂದಿಗೆ ಉಕ್ರೇನಿಯನ್ ಸರ್ಕಾರಿ ವೆಬ್ಸೈಟ್ಗಳು ಮತ್ತು ಬ್ಯಾಂಕುಗಳ ಮೇಲೆ ದಾಳಿ ಮಾಡಿದ ನಂತರ, ಈಗ ಪೂರ್ಣ ಪ್ರಮಾಣದ ಯುದ್ಧದ ಮಧ್ಯೆ ಸ್ಥಳೀಯರನ್ನು ಮೌನಗೊಳಿಸಲು ದೇಶದಲ್ಲಿ ಇಂಟರ್ನೆಟ್ ಮೂಲಸೌಕರ್ಯಕ್ಕೆ ರಷ್ಯಾ ಪ್ರಾಯೋಜಿತ ಹ್ಯಾಕರ್ಗಳು ತಡೆಯೊಡ್ಡಿದ್ದಾರೆ.
ರಷ್ಯಾ ವಿರುದ್ಧ ಹೋರಾಡಲು 'ಏಕಾಂಗಿಯಾಗಿ ಉಳಿದಿದ್ದೇವೆ': ಉಕ್ರೇನ್ ಅಧ್ಯಕ್ಷ
ಕೀವ್: ಮೊದಲ ದಿನವೇ 130 ಉಕ್ರೇನಿಯನ್ನರನ್ನು ಕೊಂದ ದೊಡ್ಡ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ ನಂತರ ರಷ್ಯಾದ ವಿರುದ್ಧ ಹೋರಾಡಲು ತನ್ನ ದೇಶವನ್ನು ಒಬ್ಬಂಟಿಯಾಗಿ ಬಿಡಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ತಿಳಿಸಿದ್ದಾರೆ.
ಜರ್ಮನಿಗೆ 7,000 ಹೆಚ್ಚುವರಿ ಸೈನಿಕರನ್ನು ಕಳುಹಿಸಲು ಅಮೆರಿಕ ಅಧ್ಯಕ್ಷ ಬೈಡನ್ ಆದೇಶ
ಉಕ್ರೇನ್–ರಷ್ಯಾ ಬಿಕ್ಕಟ್ಟಿನ ಬಗ್ಗೆ ಭಾರತದೊಂದಿಗೆ ಸಮಾಲೋಚನೆ: ಜೋ ಬೈಡನ್
ಉಕ್ರೇನ್ನ ಅಣು ವಿದ್ಯುತ್ ಸ್ಥಾವರ ವಶಪಡಿಸಿಕೊಂಡ ರಷ್ಯಾ ಸೇನೆ
ಉಕ್ರೇನ್ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ ಎಂದು ಉಕ್ರೇನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ.
ಉಕ್ರೇನ್ ಮೇಲೆ ಆಕ್ರಮಣ ಮಾಡುವುದು ಬಿಟ್ಟು ಬೇರೆ ದಾರಿ ಇರಲಿಲ್ಲ: ಪುಟಿನ್
ರಷ್ಯಾದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಉಕ್ರೇನ್ ಮೇಲೆ ಆಕ್ರಮಣ ಮಾಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ತಿಳಿಸಿದ್ದಾರೆ. ತಮ್ಮ ಸೈನ್ಯವು ಉಕ್ರೇನ್ ಮೇಲೆ ದಾಳಿ ಮಾಡಿದ ಗಂಟೆಗಳ ನಂತರ ಮಾತನಾಡಿದರು.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ; 137 ಸೈನಿಕರು, ನಾಗರಿಕರ ಸಾವು
ರಷ್ಯಾ ತನ್ನ ದೇಶದ ಮೇಲೆ ನಡೆಸಿದ ದಾಳಿಯಲ್ಲಿ ಇದುವರೆಗೆ 137 ನಾಗರಿಕರು ಮತ್ತು ಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಶುಕ್ರವಾರದ ಬಿಡುಗಡೆ ಮಾಡಿರುವ ವಿಡಿಯೊ ಹೇಳಿಕೆಯಲ್ಲಿ, ಮೃತ ಸೈನಿಕರನ್ನು ಹೀರೊಗಳು ಎಂದು ಕರೆದಿದ್ದು, ದಾಳಿಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದರು.
ತಕ್ಷಣವೇ ಹಿಂಸಾಚಾರವನ್ನು ನಿಲ್ಲಿಸುವಂತೆ ಮೋದಿ ಮನವಿ
ಉಕ್ರೇನ್ ಬಿಕ್ಕಟ್ಟು ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮೂಲಕ ಮಾತನಾಡಿದ್ದು, ‘ಯುದ್ಧವನ್ನು ತಕ್ಷಣವೇ ನಿಲ್ಲಿಸುವಂತೆ ಮೋದಿ ಅವರು ಮನವಿ ಮಾಡಿದ್ದಾರೆ. ರಾಜತಾಂತ್ರಿಕ ಮಾತುಕತೆಗಳು ಮತ್ತು ಸಂವಾದದ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳು ನಡೆಯಬೇಕು ಎಂದು ಅವರು ಸಲಹೆ ನೀಡಿದ್ದಾರೆ’ ಎಂದು ಹೇಳಿಕೆ ತಿಳಿಸಿದೆ.
ಉಕ್ರೇನ್ಗೆ ಆರ್ಥಿಕ ನೆರವು ನೀಡಲು ವಿಶ್ವ ಬ್ಯಾಂಕ್ ಸಿದ್ಧ
ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೈಗೊಂಡ ಕ್ರಮದ ಬಗ್ಗೆ ವಿಶ್ವ ಬ್ಯಾಂಕ್ ಕಳವಳ ವ್ಯಕ್ತಪಡಿಸಿದ್ದು, ಪ್ರಸ್ತುತ ರಾಜಕೀಯ ಮತ್ತು ಮಿಲಿಟರಿ ಬಿಕ್ಕಟ್ಟು ಎದುರಿಸುತ್ತಿರುವ ಉಕ್ರೇನ್ಗೆ ತಕ್ಷಣದ ಹಣಕಾಸಿನ ನೆರವು ನೀಡಲು ಸಿದ್ಧ ಎಂದು ವಿಶ್ವ ಬ್ಯಾಂಕ್ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್ಐ’ ವರದಿ ಮಾಡಿದೆ.
ತನ್ನಿಷ್ಟದ ಸರ್ಕಾರ ರಚಿಸಲಿರುವ ರಷ್ಯಾ: ಅಮೆರಿಕ ಮುನ್ಸೂಚನೆ
‘ಈಗಿರುವ ಉಕ್ರೇನ್ ಸರ್ಕಾರವನ್ನು ತೆಗೆದು ಹಾಕಲು ರಷ್ಯಾ ಉದ್ದೇಶಿಸಿದೆ. ಮಾಸ್ಕೋ ತನಗೆ ಬೇಕಾದ ನಾಯಕತ್ವನನ್ನು ಉಕ್ರೇನ್ನಲ್ಲಿ ಸ್ಥಾಪಿಸಲು ಇಚ್ಛಿಸಿದೆ’ ಎಂದು ಅಮೆರಿಕದ ರಕ್ಷಣಾ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ.
ನನ್ನ ರಾಷ್ಟ್ರ ಎಲ್ಲಿಯ ವರೆಗೆ ಇರಲಿದೆ ಎಂಬುದು ಗೊತ್ತಿಲ್ಲ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹತಾಶೆ
‘ನನ್ನ ರಾಷ್ಟ್ರ ಎಲ್ಲಿಯವರೆಗೆ ಇರಲಿದೆ ಎಂಬುದು ಗೊತ್ತಿಲ್ಲ’ ಎಂದು ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಹತಾಶೆ ವ್ಯಕ್ತಪಡಿಸಿರುವುದಾಗಿ ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ.
ಉಕ್ರೇನ್ ರಾಜಧಾನಿ ಕೀವ್ನಲ್ಲಿ ಕರ್ಫ್ಯೂ
ಉಕ್ರೇನ್ ರಾಜಧಾನಿ ಕೀವ್ನಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಅಲ್ಲಿನ ಮೇಯರ್ ತಿಳಿಸಿದ್ದಾರೆ.
70 ಕ್ಕೂ ಹೆಚ್ಚು ಮಿಲಿಟರಿ ತಾಣಗಳು ನಾಶ: ರಷ್ಯಾ
ಉಕ್ರೇನ್ನಲ್ಲಿ 11 ವಾಯುನೆಲೆಗಳು ಸೇರಿದಂತೆ 70 ಕ್ಕೂ ಹೆಚ್ಚು ಮಿಲಿಟರಿ ತಾಣಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ಹೇಳಿದೆ
ಯುದ್ಧ ವಿರೋಧಿ ಹೋರಾಟ ನಡೆಸದಂತೆ ರಷ್ಯನ್ನರಿಗೆ ಸರ್ಕಾರ ಎಚ್ಚರಿಕೆ
ರಷ್ಯಾ ಮಿಲಿಟರಿ ಕಾರ್ಯಾಚರಣೆಗೆ ಅಗತ್ಯವಿದ್ದರೆ ಬಿಲರೂಸ್ ಸೇನೆ ಬಳಕೆ
ಪೂರ್ವ ಉಕ್ರೇನ್ನಲ್ಲಿ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಯಲ್ಲಿ ಅಗತ್ಯ ಬಂದರೆ, ಬಿಲರೂಸ್ನ ಸೇನೆಯೂ ಬಳಕೆಯಾಗಲಿದೆ ಎಂದು ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಮಂಗಳವಾರ ಹೇಳಿದ್ದಾರೆ.
14 ಜನರಿದ್ದ ಉಕ್ರೇನ್ ಯುದ್ಧ ವಿಮಾನ ಪತನ
14 ಜನರಿದ್ದ ಉಕ್ರೇನ್ ಯುದ್ಧ ವಿಮಾನವು ಕೈವ್ ಬಳಿ ಪತನ ಎಂದು ಉಕ್ರೇನ್ ತುರ್ತು ಸೇವೆಗಳ ವಿಭಾಗ ತಿಳಿಸಿದೆ.
ಪುಟಿನ್ ಸರ್ವಾಧಿಕಾರಿ: ಬ್ರಿಟನ್ ಪ್ರಧಾನಿ ಆಕ್ರೋಶ
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪುಟಿನ್ 'ಸರ್ವಾಧಿಕಾರಿ' ಎಂದು ಅವರು ಹೇಳಿದ್ದಾರೆ. ಉಕ್ರೇನ್ ಮೇಲಿನ ಆಕ್ರಮಣವನ್ನು 'ಭೀಕರ ಮತ್ತು ಅನಾಗರಿಕ' ಎಂದೂ ಅವರು ಕರೆದಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ನ ಉತ್ತರ ಭಾಗ ಪ್ರವೇಶಿಸಿದ ರಷ್ಯಾ: ಉಕ್ರೇನ್
ಉಕ್ರೇನ್ಗೆ ರಕ್ಷಣಾ ಪಡೆಗಳನ್ನು ಕಳುಹಿಸುವ ಯೋಜನೆ ಇಲ್ಲ: ನ್ಯಾಟೊ
ನಾಗರಿಕ ಹಡಗಿನ ಮೇಲೆ ಉಕ್ರೇನ್ ದಾಳಿ: ರಷ್ಯಾ ಆರೋಪ
ಉಕ್ರೇನಿನ ಕ್ಷಿಪಣಿ ದಾಳಿಯಿಂದಾಗಿ ಅಜೋವ್ ಸಮುದ್ರದಲ್ಲಿ ರಷ್ಯಾದ ಎರಡು ನಾಗರಿಕ ಸರಕು ಹಡಗುಗಳು ಹಾನಿಗೀಡಾಗಿವೆ. ಹಲವು ಸಾವು ನೋವುಗಳೂ ಸಂಭವಿಸಿವೆ ಎಂದು ‘ರಾಷ್ಟ್ರೀಯ ಭದ್ರತಾ ಸೇವೆ’ಯ ಮಾಹಿತಿ ಉಲ್ಲೇಖಿಸಿ ರಷ್ಯಾದ ಸುದ್ದಿ ಸಂಸ್ಥೆ ‘ಟಾಸ್’ ಸುದ್ದಿ ವರದಿ ಮಾಡಿದೆ.
ರಕ್ಷಣಾ ನೆರವಿಗಾಗಿ ವಿಶ್ವ ನಾಯಕರಿಗೆ ಮೊರೆಯಿಟ್ಟ ಉಕ್ರೇನ್ ಅಧ್ಯಕ್ಷ
ರಷ್ಯಾ ಆಕ್ರಮಣದ ವಿರುದ್ಧ ರಕ್ಷಣಾ ನೆರವು ಒದಗಿಸುವಂತೆ ಉಕ್ರೇನ್ ಅಧ್ಯಕ್ಷ ವಿಶ್ವ ಸಮುದಾಯವನ್ನು ಕೋರಿದ್ದಾರೆ.
‘ಉಕ್ರೇನ್ನ ವಾಯುಪ್ರದೇಶವನ್ನು ರಕ್ಷಿಸಿಕೊಳ್ಳಲು, ರಷ್ಯಾದ ವಿರುದ್ಧ ಹೋರಾಡಲು ರಕ್ಷಣಾ ನೆರವು ನೀಡಿ’ ಎಂದು ವ್ಲಾಡಿಮಿರ್ ಝೆಲೆನ್ಸ್ಕಿ ಜಗತ್ತಿನ ನಾಯಕರನ್ನು ಆಗ್ರಹಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ರಷ್ಯಾದ 50 ಆಕ್ರಮಣಕಾರರು ಬಲಿ: ಉಕ್ರೇನ್
ಪೂರ್ವ ಉಕ್ರೇನ್ನ ಎರಡು ಬಂಡುಕೋರ ಪ್ರದೇಶಗಳಲ್ಲಿ ರಷ್ಯಾ ಕೈಗೊಂಡಿರುವ ಮಿಲಿಟರಿ ಕಾರ್ಯಾಚರಣೆಗೆ ವಿರುದ್ಧ ನಡೆಸಿರುವ ಪ್ರತಿದಾಳಿಯಲ್ಲಿ 50 ಆಕ್ರಮಣಕಾರರನ್ನು ಕೊಲ್ಲಲಾಗಿದೆ ಎಂದು ಉಕ್ರೇನ್ ತಿಳಿಸಿದೆ.
ಇದೇ ವೇಳೆ ಉಕ್ರೇನ್ ಕಡೆ, 40 ಸೈನಿಕರು, 10 ನಾಗರಿಕರು ಮೃತಪಟ್ಟಿರುವುದಾಗಿ ಸರ್ಕಾರ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು: ಉಕ್ರೇನ್ ರಾಯಭಾರಿ
ರಷ್ಯಾ–ಉಕ್ರೇನ್ ಸಂಘರ್ಷವನ್ನು ಅಂತ್ಯಗೊಳಿಸಲು ಭಾರತ ಮಧ್ಯಪ್ರವೇಶ ಮಾಡಬೇಕು ಎಂದು ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಡಾ ಇಗೊರ್ ಪೊಲಿಖಾ ಮನವಿ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಈ ವಿಚಾರವಾಗಿ ಚರ್ಚೆ ನಡೆಸಬೇಕು ಎಂದೂ ಅವರು ಕೋರಿದ್ದಾರೆ.
'ಈ ಸಂದರ್ಭದಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಬಲ್ಲವರು ಎಂದು ನಾನು ಭಾವಿಸುತ್ತೇನೆ. ಅವರು ನಮ್ಮ ಅಧ್ಯಕ್ಷರೊಂದಿಗೂ ಮಾತನಾಡಬಹುದು. ಇತಿಹಾಸದಲ್ಲಿ ಹಲವು ಬಾರಿ ಭಾರತ ಶಾಂತಿಪಾಲನಾ ಪಾತ್ರ ನಿರ್ವಹಿಸಿದೆ. ಈ ಯುದ್ಧವನ್ನು ನಿಲ್ಲಿಸಲು ನಿಮ್ಮ ಬಲವಾದ ಬೆಂಬಲವನ್ನು ನಾವು ಕೋರುತ್ತೇವೆ,’ ಎಂದು ಡಾ ಇಗೊರ್ ಪೋಲಿಖಾ ತಿಳಿಸಿದ್ದಾರೆ.
ರಷ್ಯಾ ಮೇಲೆ ನಿರ್ಬಂಧ: ಬೈಡನ್
ಜಿ–7 ರಾಷ್ಟ್ರಗಳೊಂದಿಗೆ ನಾಳೆ (ಶುಕ್ರವಾರ) ಸಭೆ ನಡೆಸಲಿದ್ದೇನೆ. ಯುಎಸ್ ಮತ್ತು ನಮ್ಮ ಮಿತ್ರ ಕೂಟಗಳು ಹಾಗೂ ಪಾಲುದಾರರು ರಷ್ಯಾದ ಮೇಲೆ ನಿರ್ಬಂಧಗಳನ್ನು ಹೇರಲಿದ್ದಾರೆ. ಉಕ್ರೇನ್ಗೆ ಬೆಂಬಲ ಮತ್ತು ನೆರವನ್ನು ಮುಂದುವರಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
ರಷ್ಯಾ–ಉಕ್ರೇನ್ ಸಂಘರ್ಷ: ರಷ್ಯಾ ದಾಳಿಯಿಂದ 8 ಸಾವು, 9 ಜನರಿಗೆ ಗಾಯ
ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ದಾಳಿಯಿಂದಾಗಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 9 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ರೊವರಿ ಹಾಗೂ ರಾಜಧಾನಿ ಕಿವ್ನಲ್ಲಿ ಒಬ್ಬರು ಮೃತಪಟ್ಟು ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವಾಲಯ ತಿಳಿಸಿದೆ
ಈ ವಿಚಾರದಲ್ಲಿ ಭಾರತ ನಿಲುವು ತಟಸ್ಥವಾಗಿರಲಿದೆ: ಕೇಂದ್ರ
ರಷ್ಯಾ–ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವ ಡಾ.ರಾಜಕುಮಾರ್ ರಂಜನ್ ಸಿಂಗ್, 'ಭಾರತದ ನಿಲುವು ತಟಸ್ಥವಾಗಿರಲಿದೆ ಮತ್ತು ಶಾಂತಿಯುತ ಪರಿಹಾರವನ್ನು ನಿರೀಕ್ಷಿಸುತ್ತೇವೆ' ಎಂದು ತಿಳಿಸಿದ್ದಾರೆ.
ಏನಿದು ಉಕ್ರೇನ್-ರಷ್ಯಾ ಸಂಘರ್ಷ? ಭಾರತಕ್ಕೆ ಯಾಕೆ ಕಳವಳ?
ರಷ್ಯಾ–ಉಕ್ರೇನ್ ಸಂಘರ್ಷದ ಪರಿಸ್ಥಿತಿಯ ಗಂಭೀರ ಅವಲೋಕನ: ಭಾರತ
ರಷ್ಯಾ–ಉಕ್ರೇನ್ ಸಂಘರ್ಷದ ಪರಿಸ್ಥಿತಿಯನ್ನು ನಾವು ಗಂಭೀರವಾಗಿ ಅವಲೋಕನ ಮಾಡುತ್ತಿದ್ದೇವೆ. ಭಾರತೀಯರು, ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳ ಸುರಕ್ಷತೆಯತ್ತ ಗಮನ ಹರಿಸಿದ್ದೇವೆ. ವಿದೇಶಾಂಗ ಸಚಿವಾಲಯದ ಕಂಟ್ರೋಲ್ ರೂಂ ಕಾರ್ಯಚರಣೆಯನ್ನು ವಿಸ್ತರಿಸಲಾಗಿದೆ. 24X7 ಅವಧಿ ಕಾರ್ಯಾಚರಿಸಲಿದೆ ಎಂದು ಮೂಲಗಳು ತಿಳಿಸಿವೆ.
ರಷ್ಯಾದ ಐದು ವಿಮಾನಗಳು ಮತ್ತು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಸೇನೆ ಹೇಳಿಕೊಂಡಿದೆ
11:57 am
ಮಾನವೀಯತೆ ದೃಷ್ಟಿಯಿಂದ ಸಂಘರ್ಷ ನಿಲ್ಲಿಸುವಂತೆ ಪುಟಿನ್ಗೆ ವಿಶ್ವಸಂಸ್ಥೆ ಮುಖ್ಯಸ್ಥರ ಮನವಿ
ಉಕ್ರೇನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಮಾನವೀಯತೆಯ ದೃಷ್ಟಿಯಿಂದ ನಿಲ್ಲಿಸುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಮನವಿ ಮಾಡಿದ್ದಾರೆ.
ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಂಡು ಗೆಲುವು ಸಾಧಿಸಲಿದೆ
ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಂಡು ಗೆಲುವು ಸಾಧಿಸಲಿದೆ. ಪುಟಿನ್ ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿದ್ದಾರೆ. ಶಾಂತವಾಗಿದ್ದ ಉಕ್ರೇನಿನ ನಗರಗಳ ಮೇಲೆ ಈಗ ಆಕ್ರಮಣವಾಗುತ್ತಿದೆ. ವಿಶ್ವವು ಪುಟಿನ್ ಅವರನ್ನು ನಿರ್ಬಂಧಿಸಬೇಕು. ಇದು ಕಾರ್ಯಪ್ರೌವೃತ್ತರಾಗುವ ಸಮಯ ಎಂದು ಉಕ್ರೇನ್ ವಿದೇಶಾಂಗ ಸಚಿವರು ಹೇಳಿದ್ದಾರೆ.
ಈಗ ರಷ್ಯಾದ ಮೇಲೆ ತ್ವರಿತ ನಿರ್ಬಂಧಗಳನ್ನು ಹೇರಿ ಪ್ರತ್ಯೇಕಿಸಬೇಕು: ಉಕ್ರೇನ್ ಸಚಿವ
ಈಗ ರಷ್ಯಾದ ಮೇಲೆ ವಿನಾಶಕಾರಿ ಮತ್ತು ತ್ವರಿತ ನಿರ್ಬಂಧಗಳು ಏರುವ ಮೂಲಕ ಜಗತ್ತು ಕೂಡಲೇ ಕಾರ್ಯಚರಣೆ ಆರಂಭಿಸಬೇಕು. ಎಲ್ಲಾ ಸ್ವರೂಪಗಳಲ್ಲಿ ಎಲ್ಲಾ ವಿಧಾನಗಳಿಂದ ರಷ್ಯಾವನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿ. ಉಕ್ರೇನ್ಗೆ ಶಸ್ತ್ರಾಸ್ತ್ರಗಳು, ಉಪಕರಣಗಳು. ಆರ್ಥಿಕ ಮತ್ತು ಮಾನವೀಯ ನೆರವು ನೀಡಬೇಕು. ಯುರೋಪ್ ಮತ್ತು ಪ್ರಪಂಚದ ಭವಿಷ್ಯವು ಅಪಾಯದಲ್ಲಿದೆ: ಉಕ್ರೇನ್ ವಿದೇಶಾಂಗ ಸಚಿವ
182 ನಾಗರಿಕರು ಭಾರತಕ್ಕೆ ವಾಪಸ್
ವಿಮಾನ ನಿಲ್ದಾಣಗಳು ಬಂದ್; ಏರ್ ಇಂಡಿಯಾ ದೆಹಲಿಗೆ ವಾಪಸ್
ರಷ್ಯಾದೊಂದಿಗಿನ ಸಂಘರ್ಷದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರವು ವಿಮಾನ ನಿಲ್ದಾಣಗಳನ್ನು ಮುಚ್ಚಲು ಆದೇಶಿಸಿದೆ. ಹೀಗಾಗಿ, ಭಾರತೀಯರನ್ನು ಕರೆತರಲು ಹೊರಟಿದ್ದ ಏರ್ ಇಂಡಿಯಾದ AI1947 ದೆಹಲಿಗೆ ವಾಪಸ್ ಆಗಿದೆ.
ಭಾರತೀಯರನ್ನು ಕರೆತಂದ ವಿಶೇಷ ವಿಮಾನ
ವಿದ್ಯಾರ್ಥಿಗಳು ಸೇರಿದಂತೆ ದೇಶದ 182 ನಾಗರಿಕರನ್ನು ಉಕ್ರೇನ್ನಿಂದ ಕರೆತಂದಿರುವ ವಿಶೇಷ ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಬಂದಿಳಿದಿದೆ.
ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣಗಳನ್ನು ಮುಚ್ಚಿದ ಉಕ್ರೇನ್, ವಾಯುಪ್ರದೇಶದ ಅಪಾಯದ ಬಗ್ಗೆ ಎಚ್ಚರಿಕೆ
ಯುದ್ಧ ಭೀತಿ: ಶಾಂತಿ ಕಾಪಾಡಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ
ರಾಷ್ಟ್ರದ ಹಿತಾಸಕ್ತಿ, ಭದ್ರತೆಯಲ್ಲಿ ರಾಜೀ ಇಲ್ಲ: ಪುಟಿನ್ ಸ್ಪಷ್ಟ ಸಂದೇಶ
ಉಕ್ರೇನ್ ಬಿಕ್ಕಟ್ಟು: ಹೆಚ್ಚಿದ ಯುದ್ಧ ಭೀತಿ
ಯುದ್ಧ ಭೀತಿ: ಉಕ್ರೇನ್ನಲ್ಲಿ ತುರ್ತು ಪರಿಸ್ಥಿತಿ