ಗುರುವಾರ , ಜೂನ್ 24, 2021
27 °C

ಚೀನಾದಲ್ಲಿ ಪ್ರಬಲ ಬಿರುಗಾಳಿ; 7 ಮಂದಿ ಸಾವು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಬಿಜೀಂಗ್‌: ಚೀನಾದ ವುಹಾನ್‌ ಮತ್ತು ಸೂಜೌ ಪ್ರದೇಶದಲ್ಲಿ ಬೀಸಿದ ಎರಡು ‍ಪ್ರಬಲ ಬಿರುಗಾಳಿಯಿಂದಾಗಿ 7 ಮಂದಿ ಮೃತಪಟ್ಟಿದ್ದು, 239 ಮಂದಿ ಗಾಯಗೊಂಡಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.

ವುಹಾನ್‌ನಲ್ಲಿ ಶುಕ್ರವಾರ ರಾತ್ರಿ 8.39ಕ್ಕೆ ಬಿರುಗಾಳಿ ಬೀಸಿದ್ದು, ಇದರ ವೇಗವು ಪ್ರತಿ ಸೆಕೆಂಡಿಗೆ 23.9 ಮೀಟರ್‌ ಇತ್ತು. ಈ ಬಿರುಗಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದು, 218 ಮಂದಿ ಗಾಯಗೊಂಡಿದ್ದಾರೆ. ಹಲವು ಕಟ್ಟಡಗಳು, ಮರಗಳು ಉರುಳಿವೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಈ ಬಿರುಗಾಳಿಯಲ್ಲಿ 27 ಮನೆಗಳು, ಎರಡು ಕ್ರೇನ್‌ಗಳು ಮತ್ತು 8000 ಚದರ ಮೀಟರ್‌ನ ನಿರ್ಮಾಣ ಸ್ಥಳದಲ್ಲಿದ್ದ ಶೆಡ್‌ಗಳು ಹಾನಿಯಾಗಿವೆ’ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಸೂಜೌನ ಶೆಂಗ್ಜೆ ಪಟ್ಟಣದಲ್ಲಿ ಶುಕ್ರವಾರ ರಾತ್ರಿ 7 ಗಂಟೆಗೆ ಮತ್ತೊಂದು ಬಿರುಗಾಳಿ ಎದ್ದಿದ್ದು, ಇದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 21 ಮಂದಿ ಗಾಯಗೊಂಡಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು