ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮವಾಗಿ ಗಡಿ ಪ್ರವೇಶಿಸಿದ್ದ ಆರು ಭಾರತೀಯರು ಅಮೆರಿಕದಲ್ಲಿ ಬಂಧನ

Last Updated 6 ಮೇ 2022, 5:10 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ 19-21 ವರ್ಷ ವಯಸ್ಸಿನ ಆರು ಭಾರತೀಯ ಪ್ರಜೆಗಳನ್ನು ಅಮೆರಿಕದ ಗಡಿ ಅಧಿಕಾರಿಗಳು ಬಂಧಿಸಿದ್ದಾರೆ. ಮುಳುಗುತ್ತಿದ್ದ ದೋಣಿಯಿಂದ ಅವರನ್ನು ರಕ್ಷಿಸಿದ ಅಧಿಕಾರಿಗಳು ಬಳಿಕ ವಶಕ್ಕೆ ಪಡೆದಿದ್ದಾರೆ.

ಕಳೆದ ವಾರ, ಅಕ್ವೆಸಾಸ್ನೆ ಮೊಹಾಕ್ ಪೊಲೀಸರು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ವರದಿ ಮಾಡಿದ್ದರು. ಬಳಿಕ, ಸೇಂಟ್ ರೆಗಿಸ್ ಮೊಹಾಕ್ ಪೊಲೀಸರು ಕೆನಡಾದಿಂದ ಅಮೆರಿಕಾಗೆ ತೆರಳುತ್ತಿದ್ದ ಹಲವು ವ್ಯಕ್ತಿಗಳನ್ನು ಹೊಂದಿರುವ ದೋಣಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.

ಇದೀಗ, ಮುಳುಗುತ್ತಿದ್ದ ದೋಣಿನ್ನು ಪತ್ತೆಹಚ್ಚಿದ ಪೊಲೀಸರು ಅವರನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬೋಟ್‌ಗಳಲ್ಲಿ ಲೈಫ್ ಜಾಕೆಟ್‌ನಂತಹ ಯಾವುದೇ ತುರ್ತು ಸೌಲಭ್ಯಗಳನ್ನು ಮಾಡಿಕೊಳ್ಳದೇ ಇರುವುದು ಕಂಡುಬಂದಿದೆ.

ಬಂಧಿತರ ಮೇಲೆ ಅಮೆರಿಕದ ಕಾನೂನನ್ನು ಉಲ್ಲಂಘಿಸಿ ಗಡಿ ಪ್ರವೇಶದ ಆರೋಪವನ್ನು ಹೊರಿಸಲಾಗಿದೆ. ಅಪರಾಧ ಸಾಬೀತಾದರೆ 10 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ.

ಈ ವರ್ಷದ ಜನವರಿಯಲ್ಲಿ ಭಾರತ ಮೂಲದ ಜಗದೀಶ್ ಬಲದೇವಭಾಯ್ ಪಟೇಲ್, ವೈಶಾಲಿಬೆನ್ ಪಟೇಲ್, ವಿಹಂಗಿ ಪಟೇಲ್ ಮತ್ತು ಧಾರ್ಮಿಕ್ ಪಟೇಲ್ ಅವರು ಕೆನಡಾ ಮತ್ತು ಅಮೆರಿಕ ಗಡಿಯಿಂದ ಸುಮಾರು 12 ಮೀಟರ್ ದೂರದಲ್ಲಿರುವ ಮ್ಯಾನಿಟೋಬಾದ ಎಮರ್ಸನ್ ಬಳಿ ಶವವಾಗಿ ಪತ್ತೆಯಾಗಿದ್ದರು.

ಈ ಕುಟುಂಬವು ಕೆನಡಾದಿಂದ ಕಾಲ್ನಡಿಗೆಯಲ್ಲಿ ಅಮೆರಿಕಾಗೆ ತೆರಳಲು ಪ್ರಯತ್ನಿಸಿತ್ತು. ತಾಪಮಾನ ಮೈನಸ್ ಡಿಗ್ರಿಯಲ್ಲಿದ್ದ ಕಾರಣ ಅವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT