ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಂತರಿ ಕೊರೊನಾ ವೈರಸ್ ಹಳೆಯದಕ್ಕಿಂತ ಹೆಚ್ಚು ಮಾರಣಾಂತಿಕ: ಬೋರಿಸ್ ಜಾನ್ಸನ್

Last Updated 23 ಜನವರಿ 2021, 2:39 IST
ಅಕ್ಷರ ಗಾತ್ರ

ಲಂಡನ್: ಕಳೆದ ವರ್ಷದ ಅಂತ್ಯದಲ್ಲಿ ಇಂಗ್ಲೆಂಡ್‌ನಲ್ಲಿ ಪತ್ತೆಯಾದ ಕೊರೊನಾ ವೈರಸ್‌ನ ಹೊಸ ರೂಪಾಂತರವು ಮತ್ತಷ್ಟು ಮಾರಣಾಂತಿಕವಾಗಿದ್ದಂತೆ ತೋರುತ್ತಿರುವುದಾಗಿ ಆರಂಭಿಕ ಪುರಾವೆಗಳು ಸೂಚಿಸುತ್ತವೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಹೊಸ ಮತ್ತು ಉದಯೋನ್ಮುಖ ವೈರಸ್ ಅಪಾಯಗಳ ಸಲಹಾ ಸಮೂಹದ (NERVTAG)ವಿಜ್ಞಾನಿಗಳು ನೀಡಿರುವ ಪ್ರಾಥಮಿಕ ಡೇಟಾ ಆಧಾರದ ಮೇಲೆ, ಜಾನ್ಸನ್ ಹೊಸ ರೂಪಾಂತರವು ಮತ್ತಷ್ಟು ಮಾರಕವೆಂದು ತೋರುತ್ತದೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಎಲ್ಲ ವಿಧದ ಕೊರೊನಾ ವೈರಾಣುಗಳ ವಿರುದ್ಧ ಪರಿಣಾಮಕಾರಿಯಾಗಿರುವ ಫೈಜರ್ / ಬಯೋಟೆಕ್ ಮತ್ತು ಆಕ್ಸ್‌ಫರ್ಡ್ / ಅಸ್ಟ್ರಾಜೆನೆಕಾ ಕಂಪನಿಗಳ ಎರಡೂ ಲಸಿಕೆಗಳನ್ನು ಬ್ರಿಟನ್ನಿನಲ್ಲಿ ನೀಡಲಾಗುತ್ತಿದೆ ಎಂದು ಒತ್ತಿ ಹೇಳಿದ್ದಾರೆ.

"ಲಂಡನ್ ಮತ್ತು ಆಗ್ನೇಯ [ಇಂಗ್ಲೆಂಡ್] ನಲ್ಲಿ ಮೊದಲು ಕಂಡು ಬಂದ ರೂಪಾಂತರಿ ಕೊರೊನಾ ವೈರಸ್ ವೇಗವಾಗಿ ಹರಡುವ ಜೊತೆಗೆ ಸಾವಿನ ಪ್ರಮಾಣ ಅತಿ ಹೆಚ್ಚಾಗಿರಬಹುದು ಎಂಬುದಕ್ಕೆ ಕೆಲವು ಪುರಾವೆಗಳು ಈಗ ಕಂಡುಬಂದಿವೆ . ಹಾಗಾಗಿ, ರಾಷ್ಟ್ರೀಯ ಆರೋಗ್ಯ ಸೇವೆ ತೀವ್ರ ಒತ್ತಡದಲ್ಲಿದೆ” ಎಂದು ಅವರು ತಿಳಿಸಿದ್ದಾರೆ.

“ನಾವು ನೀಡುತ್ತಿರುವ ಎರಡೂ ಲಸಿಕೆಗಳು ಹಳೆಯ ಮತ್ತು ಹೊಸ ಮಾದರಿಯ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿಯಾವೆ ಎಂಬುದನ್ನು ಪ್ರಸ್ತುತ ಪುರಾವೆಗಳು ಸಾಬೀತುಪಡಿಸಿವೆ,” ಎಂದು ತಿಳಿಸಿದ್ದಾರೆ.

ಮೊದಲು ಆಗ್ನೇಯ ಇಂಗ್ಲೆಂಡ್‌ನ ಕೆಂಟ್‌ನಲ್ಲಿ ಕಂಡು ಬಂದ ಹೊಸ ರೂಪಾಂತರಿ ವೈರಸ್ ಬಳಿಕ ಲಂಡನ್ ಮೂಲಕ ಇತರ ಪ್ರದೇಶಗಳಿಗೆ ವೇಗವಾಗಿ ಹರಡಿತು.

ಇದನ್ನು ಈಗಾಗಲೇ ವೇಗವಾಗಿ ಹರಡುವ ರೂಪಾಂತರಿ ಎಂದು ವರ್ಗೀಕರಿಸಲಾಗಿದೆ. ಆದರೆ, ಅದರ ಅಪಾಯದ ಮಟ್ಟವು ಹಳೆಯ ವೈರಾಣುವಿಗಿಂತ ದೊಡ್ಡದಾಗಿದೆ ಎಂಬುದಕ್ಕೆ ಪುರಾವೆ ಸಿಕ್ಕಿರಲಿಲ್ಲ.

"ಹಳೆಯ ರೂಪಾಂತರಕ್ಕೆ ಹೋಲಿಸಿದರೆ ಹೊಸ ರೂಪಾಂತರಿ ವೈರಸ್ ಸೋಂಕಿತ ಜನರಿಗೆ ಹೆಚ್ಚಿನ ಅಪಾಯವಿದೆ ಎಂಬುದಕ್ಕೆ ಪುರಾವೆಗಳಿವೆ" ಎಂದು ಮಾಧ್ಯಮಗೋಷ್ಠಿಯಲ್ಲಿ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಸರ್ ಪ್ಯಾಟ್ರಿಕ್ ವ್ಯಾಲೆನ್ಸ್ ಹೇಳಿದ್ದಾರೆ.

ಇದೇವೇಳೆ, ರೂಪಾಂತರಿ ವೈರಾಣು ಡೇಟಾ "ಅನಿಶ್ಚಿತ"ತೆಯಿಂದ ಕೂಡಿದೆ. ಆದರೆ, 60 ವರ್ಷ ವಯಸ್ಸಿನ ವ್ಯಕ್ತಿಗೆ ಹೊಸ ರೂಪಾಂತರ ವೈರಸ್‌ನಿಂದ ಸಾವಿನ ಅಪಾಯವು ಪ್ರತಿ 1000 ದಲ್ಲಿ 13 ರಷ್ಟಿದೆ. ಹಳೆಯ ವೈರಾಣುವಿನಲ್ಲಿ 1,000 ದಲ್ಲಿ 10 ರಷ್ಟಿತ್ತು ಎಂದು ಅವರು ತಿಳಿಸಿದ್ದಾರೆ. ಹಳೆಯ ವೈರಾಣುವಿಗಿಂತ ಇದು ಸುಮಾರು 30 ಪ್ರತಿಶತದಷ್ಟು ಹೆಚ್ಚು ಅಪಾಯಕಾರಿ. ಆದರೆ, ಲಸಿಕೆ ಪಡೆದ ಜನರಲ್ಲಿ ಹೊಸ ರೂಪಾಂತರ ವೈರಸ್ ಅಪಾಯ ಉಂಟುಮಾಡದಂತೆ ರೋಗ ನಿರೋಧಕಶಕ್ತಿ ಹೆಚ್ಚಾಗಿರುವುದು ಕಂಡುಬಂದಿದೆ. ಈ ಹಿಂದೆ ಮೂಲ ಸೋಂಕಿನಿಂದ ಸೋಂಕಿಗೆ ಒಳಗಾಗಿದ್ದ ಜನರು ಲಸಿಕೆ ಪಡೆದು ಹೊಸ ರೂಪಾಂತರ ಸೋಂಕು ಹರಡದಂತ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಹಾಗಾಗಿ, ಲಸಿಕೆ ಬಂದಿದ್ದು ದೇಶದ ಜನರಿಗೆ ಒಂದೊಳ್ಳೆ ಸುದ್ದಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT