ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾದಲ್ಲಿ ಸರಣಿ ಚೂರಿ ಇರಿತ: 10 ಸಾವು

Last Updated 5 ಸೆಪ್ಟೆಂಬರ್ 2022, 16:04 IST
ಅಕ್ಷರ ಗಾತ್ರ

ರೆಜಿನಾ, ಕೆನಡಾ: ಸ್ಥಳೀಯ ಸಮುದಾಯದ ಮೇಲೆ ಮತ್ತು ಸಾಸ್ಕಾಚೆವಾನ್‌ನ ಸಮೀಪದ ಮತ್ತೊಂದು ಪಟ್ಟಣದಲ್ಲಿ ಭಾನುವಾರ ನಡೆದ ಸರಣಿ ಚೂರಿ ಇರಿತಗಳಲ್ಲಿ 10 ಮಂದಿ ಮೃತಪಟ್ಟು, 15 ಮಂದಿ ಗಾಯಗೊಂಡಿದ್ದಾರೆ. ಇಬ್ಬರು ಶಂಕಿತರಿಗಾಗಿ ಶೋಧ ನಡೆಸಲಾಗಿದೆ ಎಂದು ಕೆನಡಾ ಪೊಲೀಸರು ತಿಳಿಸಿದ್ದಾರೆ.

ಜೇಮ್ಸ್ ಸ್ಮಿತ್ ಕ್ರೀ ನೇಷನ್‌ನಲ್ಲಿ ಮತ್ತು ಸಾಸ್ಕಾಟೂನ್‌ನ ಈಶಾನ್ಯದಲ್ಲಿರುವ ವೆಲ್ಡನ್ ಗ್ರಾಮದ ಹಲವು ಸ್ಥಳಗಳಲ್ಲಿ ಈ ಘಟನೆ ನಡೆದಿದೆ.

ಕೆನಡಾದ ಇತಿಹಾಸದಲ್ಲಿ ಭೀಕರ ಸಾಮೂಹಿಕ ಹತ್ಯೆಗಳಲ್ಲಿ ಇದು ಒಂದಾಗಿದೆ. 2020 ರಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಯಂತೆ ವೇಷ ಧರಿಸಿಬಂದೂಕಿನಿಂದ ಗುಂಡು ಹಾರಿಸಿ, ನೋವಾ ಸ್ಕಾಟಿಯಾ ಪ್ರಾಂತ್ಯದಾದ್ಯಂತ ಬೆಂಕಿ ಹಚ್ಚಿ 22 ಜನರನ್ನು ಕೊಂದು ಹಾಕಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT