ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ 30 ನಗರಗಳ ಜೊತೆ ನಿತ್ಯಾನಂದನ ಸಾಂಸ್ಕೃತಿಕ ಸಹಭಾಗಿತ್ವ: ವರದಿ

Last Updated 18 ಮಾರ್ಚ್ 2023, 5:14 IST
ಅಕ್ಷರ ಗಾತ್ರ

ನ್ಯೂಯಾರ್ಕ್: ದೇಶಭ್ರಷ್ಟ, ಭಾರತ ಮೂಲದ ನಿತ್ಯಾನಂದನ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ವು ಅಮೆರಿಕದ 30ಕ್ಕೂ ಹೆಚ್ಚು ನಗರಗಳೊಂದಿಗೆ ಸಾಂಸ್ಕೃತಿಕ ಸಹಭಾಗಿತ್ವಕ್ಕೆ ಸಹಿ ಹಾಕಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ಅಮೆರಿಕದ ನ್ಯೂಜೆರ್ಸಿಯ ನೆವಾರ್ಕ್ ನಗರವು ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದ ಜೊತೆಗಿನ ‘ಸಿಸ್ಟರ್‌ ಸಿಟಿ ಒಪ್ಪಂದ’ವನ್ನು ರದ್ದುಗೊಳಿಸಿದ ಕೆಲ ದಿನಗಳ ಬಳಿಕ ಈ ವರದಿ ಬಂದಿದೆ.

ನೆವಾರ್ಕ್ ಮತ್ತು ಕೈಲಾಸದ ನಡುವೆ ಸಿಸ್ಟರ್ ಸಿಟಿ ಒಪ್ಪಂದಕ್ಕೆ ಜನವರಿ 12ರಂದು ಸಹಿ ಹಾಕಲಾಗಿತ್ತು. ಬಳಿಕ, ಈ ತಿಂಗಳ ಆರಂಭದಲ್ಲಿ ಒಪ್ಪಂದ ರದ್ದು ಮಾಡಲಾಗಿತ್ತು.

‘ಕೈಲಾಸ ಎಂಬ ದೇಶ ಅಸ್ತಿತ್ವಕ್ಕೆ ಬಂದ ಸಂದರ್ಭಗಳನ್ನು ಗಮನಿಸಲಾಯಿತು. ಈ ಹಿಂದೆ ವಂಚನೆ ಇರುವುದು ಖಚಿತವಾದ ಬೆನ್ನಲ್ಲೇ ಒಪ್ಪಂದವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ನೆವಾರ್ಕ್ ನಗರದ ಸಂವಹನ ಇಲಾಖೆಯ ಪತ್ರಿಕಾ ಕಾರ್ಯದರ್ಶಿ ಸುಸಾನ್ ಗರೊಫಾಲೊ ಹೇಳಿದ್ದರು.

ವಿಜ್ಞಾನದ ಉಲ್ಲೇಖದ ಮೂಲಕ ನಿತ್ಯಾನಂದನ ಆಧ್ಯಾತ್ಮಿಕ ಪ್ರಚಾರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುತ್ತವೆ. ಅದರ ಮುಂದುವರಿದ ಭಾಗವಾಗಿ, 2019 ರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ದೇಶವನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದಾನೆ.

ಅದರ ವೆಬ್‌ಸೈಟ್‌ ಪ್ರಕಾರ, ಅಮೆರಿಕದ 30ಕ್ಕೂ ಹೆಚ್ಚು ನಗರಗಳು ಕೈಲಾಸದೊಂದಿಗೆ ಸಾಂಸ್ಕೃತಿಕ ಪಾಲುದಾರಿಕೆಗೆ ಸಹಿ ಹಾಕಿವೆ. ರಿಚ್ಮಂಡ್, ವರ್ಜೀನಿಯಾದಿಂದ ಡೇಟನ್, ಓಹಿಯೊ, ಬ್ಯೂನಾ ಪಾರ್ಕ್, ಫ್ಲಾರಿಡಾದವರೆಗಿನ ಭೂಪಟದ ಬಹುತೇಕ ನಗರಗಳು ಈ ಒಪ್ಪಂದಕ್ಕೆ ಒಳಪಟ್ಟಿವೆ ಎಂದು ಉಲ್ಲೇಖಿಸಲಾಗಿದೆ.

ನಕಲಿ ದೇಶದ ಜೊತೆ ಸಹಿ ಹಾಕಿರುವ ಸತ್ಯಾಸತ್ಯತೆ ಕುರಿತ ಪರಿಶೀಲನೆಗೆ ಅಮೆರಿಕದ ನಗರಗಳ ಆಡಳಿತವನ್ನು ಸಂಪರ್ಕಿಸುತ್ತಿದ್ದೇವೆ. ಈವರೆಗೆ ಸಂಪರ್ಕ ಮಾಡಿದ ಹೆಚ್ಚಿನ ನಗರಗಳು ಈ ಘೋಷಣೆಗಳು ನಿಜವೆಂದು ದೃಢಪಡಿಸಿವೆ ಎಂದು ಫಾಕ್ಸ್‌ ನ್ಯೂಸ್ ವರದಿ ಹೇಳಿದೆ.

ಅಲ್ಲದೆ, ನಕಲಿ ದೇಶದ ಬಗ್ಗೆ ಪರಿಶೀಲನೆ ನಡೆಸದ ನಗರಗಳ ಆಡಳಿತವನ್ನು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT