ಭಾನುವಾರ, ಜುಲೈ 3, 2022
27 °C

ತಾಂಜಾನಿಯಾದಲ್ಲಿ ಅಪಘಾತ22 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾರ್ ಎಸ್ ಸಲಾಮ್ (ಎಎಫ್‌ಪಿ): ತಾಂಜಾನಿಯಾದ ಪೂರ್ವ ಭಾಗದ ಮೆಲೆಲಾ ಕಿಬಾನಿ ಬಳಿ ಶುಕ್ರವಾರ ಸಂಭವಿಸಿದ ಬಸ್‌ ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ.

‘ಇತರೆ 38 ಮಂದಿ ಗಾಯಗೊಂಡಿದ್ದಾರೆ. ಮೋಟರ್‌ಬೈಕ್‌ ಹಿಂದಿಕ್ಕುವ ಯತ್ನದಲ್ಲಿ ಲಾರಿ ಚಾಲಕ ವಾಹನ ಮುನ್ನುಗ್ಗಿಸಿದ್ದೆ ಅಪಘಾತಕ್ಕೆ ಕಾರಣ’ ಎಂದು ಮೊರೊಗೊರೊ ವಲಯದ ಪೊಲೀಸ್‌ ಮುಖ್ಯಸ್ಥ ಫಾರ್ಚುನಾಟಸ್ ಮುಸ್ಲಿಂ ಅವರು ಪ್ರತಿಕ್ರಿಯಿಸಿದ್ದಾರೆ. 

ಮೇ 2017ರಲ್ಲಿ ಸಂಭವಿಸಿದ್ದ ಅಪಘಾತದಲ್ಲಿ 32 ಮಕ್ಕಳು ಸೇರಿದಂತೆ 35 ಮಂದಿ ಮೃತಪಟ್ಟಿದ್ದರು. ಅದಕ್ಕೂ ಹಿಂದೆ 2006ರಲ್ಲಿ ಬಸ್‌ ನದಿಗೆ ಬಿದ್ದು ಸಂಭವಿಸಿದ್ದ ಅಪಘಾತದಲ್ಲಿ 54 ಮಂದಿ ಮೃತಪಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು