ವಾಷಿಂಗ್ಟನ್: ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆಯುತ್ತಿದ್ದಾಗ ಮಂಜುಗಡ್ಡೆ ಕುಸಿದು, ಒಬ್ಬ ಮಹಿಳೆ ಸೇರಿ ಭಾರತ ಮೂಲದ ಮೂವರು ಮೃತಪಟ್ಟಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಅರಿಜೋನಾ ರಾಜ್ಯದ ಕೊಕೊನಿನೊ ಕೌಂಟಿಯ ವುಡ್ಸ್ ಕ್ಯಾನಿಯನ್ ಸರೋವರದಲ್ಲಿ ಈ ದುರ್ಘಟನೆ ಸಂಭವಿಸಿದೆ.
‘ಮೃತರನ್ನು ನಾರಾಯಣ ಮುದ್ದಣ(49), ಗೋಕುಲ್ ಮೆಡಿಸೆಟಿ(47) ಮತ್ತು ಹರಿತಾ ಮುದ್ದಣ ಎಂದು ಗುರುತಿಸಲಾಗಿದೆ. ಮೃತರು ಅರಿಜೋನಾದ ಚಾಂಡ್ಲರ್ ನಿವಾಸಿಗಳಾಗಿದ್ದು, ಭಾರತ ಮೂಲದವರಾಗಿದ್ದಾರೆ’ ಎಂದು ಕೊಕಿನಿನೊ ಕೌಂಟಿ ಪೊಲೀಸ್ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಸರೋವರಕ್ಕೆ ಬಿದ್ದ ಹರಿತಾ ಮುದ್ಧಣ ಅವರನ್ನು ಮೇಲೆತ್ತುವಲ್ಲಿ ಸಿಬ್ಬಂದಿ ಯಶಸ್ವಿಯಾಗಿತ್ತು. ಆದರೆ, ಜೀವ ಉಳಿಸುವ ಎಲ್ಲ ತಕ್ಷಣದ ಚಿಕಿತ್ಸೆ ನೀಡಿದರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಅಮೆರಿಕ ಮತ್ತು ಕೆನಡಾದ ಹಲವೆಡೆ ಶೀತ ಮಾರುತದ ಅಬ್ಬರ ಜೋರಾಗಿದ್ದು, ಸುಮಾರು 25 ಕೋಟಿ ಜನರು ಇದರ ಹೊಡೆತಕ್ಕೆ ಸಿಲುಕಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.