ಮಂಗಳವಾರ, ಫೆಬ್ರವರಿ 7, 2023
27 °C

ನೇಪಾಳ: ಹೊಸ ಸರ್ಕಾರ ರಚನೆ ಕುರಿತು ಚರ್ಚಿಸಲು ಸಭೆ

ಪಿಟಿಐ Updated:

ಅಕ್ಷರ ಗಾತ್ರ : | |

ಕಠ್ಮಂಡು: ನೇಪಾಳದಲ್ಲಿ ಐದು ಪಕ್ಷಗಳ ಒಕ್ಕೂಟ ನಾಯಕರು ಸೋಮವಾರ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿ ಹೊಸ ಸರ್ಕಾರ ರಚನೆಯ ಕುರಿತು ಚರ್ಚಿಸಿದರು. 

ನೇಪಾಳಿ ಕಾಂಗ್ರೆಸ್‌ನ ಉಪಾಧ್ಯಕ್ಷ ಪುರ್ಣ ಬಹದ್ದೂರ್ ಖಡ್ಕ, ಹಿರಿಯ ನಾಯಕ ರಾಮ್‌ಚಂದ್ರ ಪೌಡೆಲ್, ಸಿಪಿಎನ್ (ಮಾವೋವಾದಿ ಕೇಂದ್ರ)ದ ಅಧ್ಯಕ್ಷ ಪುಷ್ಪ ಕಮಲ್ ದಹಲ್ ‘ಪ್ರಚಂಡ’, ಹಿರಿಯ ಉಪಾಧ್ಯಕ್ಷ ನಾರಾಯಣ ಕಜಿ ಶ್ರೇಷ್ಠ, ಸಿಪಿಎನ್ (ಯುಎಸ್‌) ಅಧ್ಯಕ್ಷ ಮಾಧವ್ ನೇಪಾಳ್ ಹಾಗೂ ರಾಷ್ಟ್ರೀಯ ಜನಮೋರ್ಚಾದ ಉಪಾಧ್ಯಕ್ಷ ದುರ್ಗಾ ಪೌಡಲ್ ಸಭೆಯಲ್ಲಿ ಪಾಲ್ಗೊಂಡಿದ್ದರು. 

ಐದು ಪಕ್ಷಗಳ ಒಕ್ಕೂಟವು ಸಂಸತ್ ಚುನಾವಣೆಯಲ್ಲಿ ಒಟ್ಟು 165ರಲ್ಲಿ 90 ಸ್ಥಾನಗಳನ್ನು ಪಡೆದಿದೆ. 

ಪರಸ್ಪರ ತಿಳಿವಳಿಕೆ ಮತ್ತು ಸಹಕಾರದೊಂದಿಗೆ ಮುನ್ನಡೆಯುವ ಅಗತ್ಯವನ್ನು ಚುನಾವಣಾ ಫಲಿತಾಂಶ ಸೂಚಿಸಿದ್ದು, ದೇಶದ ಮುಂದಿರುವ ಸವಾಲುಗಳನ್ನು ಎದುರಿಸಲು ಪ್ರಸ್ತುತ ಒಕ್ಕೂಟವನ್ನು ಮುಂದುವರಿಸುವುದು ಅಗತ್ಯ ಎಂದು ಸಭೆಯ ಬಳಿಕ ಸಮ್ಮಿಶ್ರ ಪಕ್ಷಗಳ ನಾಯಕರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು