ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ ಭೂಕಂಪ: ಸತ್ತವರ ಸಂಖ್ಯೆ 26ಕ್ಕೆ ಏರಿಕೆ

ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಸತ್ತವರ ಸಂಖ್ಯೆ 26ಕ್ಕೆ ಏರಿದ್ದು, ಸುಮಾರು 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Last Updated 31 ಅಕ್ಟೋಬರ್ 2020, 7:49 IST
ಅಕ್ಷರ ಗಾತ್ರ

ಇಜ್ಮೀರ್ ‌(ಟರ್ಕಿ): ಟರ್ಕಿಯ ಕರಾವಳಿ ಮತ್ತು ಗ್ರೀಕ್ ದ್ವೀಪ ಸಮೋಸ್ ಮಧ್ಯಭಾಗದಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಸತ್ತವರ ಸಂಖ್ಯೆ 26ಕ್ಕೆ ಏರಿದ್ದು, ಸುಮಾರು 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪರಿಹಾರ ಕಾರ್ಯ ಪಡೆಯವರು ಶನಿವಾರ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕಾಂಕ್ರಿಟ್‌ ಬ್ಲಾಕ್‌ಗಳನ್ನು ತೆರವುಗೊಳಿಸುತ್ತಾ ಕಟ್ಟಡದ ಅವಶೇಷಗಳಡಿ ಸಿಲುಕಿ, ಬದುಕುಳಿದವರನ್ನು ರಕ್ಷಿಸುವಲ್ಲಿ ತಂಡಗಳು ನಿರತವಾಗಿವೆ.

ಭೂಕಂಪನದಿಂದಾಗಿ ಟರ್ಕಿಯ ಅತಿದೊಡ್ಡ ನಗರ ಇಜ್ಮೀರ್‌ನಲ್ಲಿ ಕಟ್ಟಡಗಳು ಧರೆಗೆ ಉರುಳಿದವು. ಈ ಭೂಕಂಪನ ಸೆಫೆರಿಹಿಸರ್‌ ಜಿಲ್ಲೆಯಲ್ಲಿ ಮತ್ತು ಸಮೋಸ್‌ನಲ್ಲಿ ಸಣ್ಣದೊಂದು ಸುನಾಮಿ ಸೃಷ್ಟಿಗೆ ಕಾರಣವಾಯಿತು.

ಶನಿವಾರ ಮುಂಜಾನೆ ರಕ್ಷಣಾ ತಂಡದವರು ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ಹದಿಹರೆಯದ ಇನ್ಸಿ ಒಕಾನ್ ಎಂಬುವವರನ್ನು ರಕ್ಷಿಸಿದ್ದರು. ಎಂಟು ಅಂತಸ್ತುಗಳ ಅಪಾರ್ಟ್‌ಮೆಂಟ್‌ ಬ್ಲಾಕ್‌ ಕುಸಿದ ಪರಿಣಾಮ, ಇನ್ಸಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದರು. ಕಟ್ಟಡದೊಳಗಿನ ನೆಲ ಅಂತಸ್ತಿನಲ್ಲಿ ಸಿಲುಕಿದ್ದ ದಂತ ವೈದ್ಯರು ಮತ್ತು ನೌಕರರನ್ನು ರಕ್ಷಿಸಿ ಕರೆತರುವುದನ್ನು ಅವರ ಸಂಬಂಧಿಕರು, ಸ್ನೇಹಿತರು ಹೊರಗೆ ನಿಂತು ಕಾಯುತ್ತಿದ್ದರು.

ಭೂಕಂಪನದಿಂದ ಕುಸಿದಿರುವ ಎರಡು ಅಂತಸ್ತುಗಳ ಮತ್ತೊಂದು ಕಟ್ಟಡದಿಂದ 53 ವರ್ಷ ಮತ್ತು 35 ವಯೋಮಾನದ ಇಬ್ಬರು ಮಹಿಳೆಯರನ್ನು ಪರಿಹಾರ ಕಾರ್ಯ ಪಡೆಯವರು ರಕ್ಷಿಸಿ ಕರೆತಂದರು.

ಟರ್ಕಿಯ ವಿಪತ್ತು ಮತ್ತು ತುರ್ತುಸ್ಥಿತಿ ನಿರ್ವಹಣಾ ಪ್ರೆಸಿಡೆನ್ಸಿ ಪ್ರಕಾರ ಹಿರಿಯ ಮಹಿಳೆ ಸೇರಿದಂತೆ ಇಜ್ಮಿರ್‌ನಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT