ಕಾನೂನು ಶುಲ್ಕ: ಮಲ್ಯ ಮನವಿ ತಿರಸ್ಕರಿಸಿದ ಬ್ರಿಟನ್ ನ್ಯಾಯಾಲಯ

ಲಂಡನ್: ಭಾರತದಲ್ಲಿ ಬ್ಯಾಂಕ್ಗಳಿಂದ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯ ಅವರ ಕಾನೂನು ಶುಲ್ಕ ಪಾವತಿಸಲು, ‘ಕೋರ್ಟ್ ಫಂಡ್ಸ್ ಆಫೀಸ್’ (ಸಿಎಫ್ಒ) ಹಿಡಿದಿಟ್ಟುಕೊಂಡಿರುವ ಹಣವನ್ನು ಬಿಡುಗಡೆ ಮಾಡಲು ಇಲ್ಲಿನ ನ್ಯಾಯಾಲಯವೊಂದು ಸೋಮವಾರ ತಿರಸ್ಕರಿಸಿದೆ.
ಬ್ರಿಟನ್ನ ದಿವಾಳಿತನ ಕಾಯ್ದೆ 1986ರಡಿ ಸಿಎಫ್ಒ ಹಿಡಿದುಕೊಂಡಿಟ್ಟಿರುವ ಅಂದಾಜು ₹27 ಕೋಟಿ ಹಣವನ್ನು ಬಳಕೆ ಮಾಡಲು ಅನುಮತಿ ಕೋರಿ, ಮಲ್ಯ ದಾಖಲಿಸಿದ್ದ ತುರ್ತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸೆಬಾಸ್ಟಿಯನ್ ಪ್ರೆಂಟಿಸ್, ‘ಹಣ ಬಿಡುಗಡೆಗೊಳಿಸುವ ಆದೇಶ ಮಾಡಲು ಅಗತ್ಯವಾದ ಮಾಹಿತಿಯನ್ನು ಮಲ್ಯ ಅವರು ನೀಡಲು ವಿಫಲರಾಗಿದ್ದಾರೆ’ ಎಂದು ತಿಳಿಸಿದ್ದಾರೆ.
ವಂಚನೆ ಪ್ರಕರಣದಲ್ಲಿ ದಾಖಲಿಸಲಾಗಿರುವ ಅಪೀಲು ಬುಧವಾರ ವಿಚಾರಣೆಗೆ ಬರಲಿದ್ದು, ಇದಕ್ಕಷ್ಟೇ ಅಗತ್ಯವಾದ ಹಣ ಬಿಡುಗಡೆ ಮಾಡಲು ನ್ಯಾಯಾಧೀಶರು ಒಪ್ಪಿಗೆ ನೀಡಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.