ಭಾನುವಾರ, ಜುಲೈ 25, 2021

ಅಮೆರಿಕದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರಿಕೆ: ಮೂರು ವಾರಗಳಲ್ಲಿ ದ್ವಿಗುಣ

ಎಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಕೋವಿಡ್‌ ವಿರುದ್ಧದ ಯುದ್ಧವನ್ನು ಇನ್ನೇನು ಗೆದ್ದುಬಿಟ್ಟೆವು ಎಂಬ ವಿಶ್ವಾಸದಲ್ಲಿದ್ದ ಅಮೆರಿಕಗೆ ಕೊರೊನಾ ಮತ್ತೆ ಶಾಕ್ ನೀಡಿದ್ದು, ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ವೇಗವಾಗಿ ಹರಡುವ ಡೆಲ್ಟಾ ರೂಪಾಂತರ ತಳಿಯಿಂದಾಗಿ ದೈನಂದಿನ ಪ್ರಕರಣಗಳು ಮೂರು ವಾರಕ್ಕೆ ದ್ವಿಗುಣಗೊಳ್ಳುತ್ತಿವೆ.

ಮೂರು ವಾರಗಳ ಹಿಂದೆ 11,300 ರಷ್ಟಿದ್ದ ದಿನದ ಸರಾಸರಿ ಕೋವಿಡ್ ಪ್ರಕರಣಗಳ ಸಂಖ್ಯೆ ಜುಲೈ 12ಕ್ಕೆ 23,600 ಕ್ಕೆ ಏರಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿ ಅಂಶಗಳು ತಿಳಿಸಿವೆ.

ಮೈನೆ ಮತ್ತು ದಕ್ಷಿಣ ಡಕೋತಾ ಈ ಎರಡು ರಾಜ್ಯಗಳಲ್ಲಿ ಎರಡು ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

'ಜುಲೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು ಎಂದು ನಾವು ನಿರೀಕ್ಷಿಸಿದ್ದೆವು. ಇದು ಖಂಡಿತಾ ಕಾಕತಾಳೀಯವಲ್ಲ’ ಎಂದು ವಾಷಿಂಗ್ಟನ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಮೆಡಿಸಿನ್‌ನ ಸಾಂಕ್ರಾಮಿಕ-ರೋಗ ವಿಭಾಗದ ಸಹ ನಿರ್ದೇಶಕ ಡಾ. ಬಿಲ್ ಪೌಡರ್ಲಿ ಹೇಳಿದ್ದಾರೆ.

ಅಮೆರಿಕದ ಕೆಲ ಭಾಗಗಳಲ್ಲಿ ಲಸಿಕೆ ಅಭಿಯಾನ ಅಭೂತಪೂರ್ವವಾಗಿ ನಡೆಯುತ್ತಿದ್ದರೆ, ಮತ್ತೊಂದೆಡೆ ವೇಗವಾಗಿ ಹರಡುತ್ತಿರುವ ಡೆಲ್ಟಾ ವೈರಸ್ ರೂಪಾಂತರ ತಳಿ ಕೋವಿಡ್ ಪ್ರಕರಣಗಳನ್ನು ಹೆಚ್ಚಿಸುತ್ತಿದೆ.

ಅಮೆರಿಕನ್ನರಲ್ಲಿ ಶೇಕಡಾ 55.6 ರಷ್ಟು ಜನರು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ತಿಳಿಸಿವೆ.

ಎರಡು ವಾರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಐದು ರಾಜ್ಯಗಳು ಕಡಿಮೆ ಪ್ರಮಾಣದ ಲಸಿಕಾ ದರವನ್ನು ಹೊಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು