ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಯಾರ್ಕ್‌ ಎಂಪೈರ್‌ಸ್ಟೇಟ್ ಕಟ್ಟಡಕ್ಕೆ ಕಿತ್ತಳೆ ಬಣ್ಣದ ದೀಪಗಳ ಅಲಂಕಾರ

ಅಮೆರಿಕದಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಡಗರ
Last Updated 14 ನವೆಂಬರ್ 2020, 7:38 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಕಟ್ಟಡವನ್ನು ಕಿತ್ತಳೆ ಬಣ್ಣದ ದೀಪಗಳಿಂದ ಬೆಳಗಿಸಲಾಯಿತು.

ನ್ಯೂಯಾರ್ಕ್‌ನ ಟ್ರೈ–ಸ್ಟೇಟ್ ಪ್ರದೇಶದಲ್ಲಿರುವ ದಿ ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್‌ (ಎಫ್‌ಐಎ), ನ್ಯೂಜರ್ಸಿ ಮತ್ತು ಕೆನೆಕ್ಟಿಕಟ್‌ ಮತ್ತು ಎಂಪೈರ್‌ಸ್ಟೇಟ್ ಕಟ್ಟಡದ ಸಹಯೋಗದೊಂದಿಗೆ ದೀಪಾವಳಿ ಅಂಗವಾಗಿ, ಮ್ಯಾನ್‌ಹಟ್ಟನ್‌ಲ್ಲಿರುವ ಈ ಕಟ್ಟಡವನ್ನು ಶುಕ್ರವಾರ ಕಿತ್ತಳೆ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತು.

‘ನಾವು ಎಫ್‌ಐಎ ಸಹಭಾಗಿತ್ವದಲ್ಲಿ ನಮ್ಮ ಕಟ್ಟಡವನ್ನು ಕಿತ್ತಳೆ ಬಣ್ಣದ ದೀಪಗಳಿಂದ ಬೆಳಗಿಸುವ ಮೂಲಕ ಬೆಳಕಿನ ಹಬ್ಬವನ್ನು ಸಂಭ್ರಮಿಸುತ್ತಿದ್ದೇವೆ’ ಎಂದು ಎಂಪೈರ್‌ ಸ್ಟೇಟ್‌ ಕಟ್ಟಡದವರು ಟ್ವೀಟ್‌ ಮಾಡಿದ್ದಾರೆ.

‘ಭಾರತದ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ವಿವಿಧ ಜನರಿಗೆ ತಿಳಿಸುವ ನಿಟ್ಟಿನಲ್ಲಿ ‘ದೀಪಾವಳಿ ಸೂಪ್‌ ಮತ್ತು ಕಿಚನ್‌’ ಅಭಿಯಾನದಡಿ ನ್ಯೂಜರ್ಸಿ, ನ್ಯೂಯಾರ್ಕ್‌, ಕನೆಕ್ಟಿಕಟ್‌ನಲ್ಲಿ 10,000 ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ’ ಎಂದು ಎಫ್‌ಐಎ ತಿಳಿಸಿದೆ.

ಎಫ್‌ಐಎ ಅಧ್ಯಕ್ಷ ಅಂಕೂರ್‌ ವೈದ್ಯ ಅವರ ನೇತೃತ್ವದಲ್ಲಿ ‘ದೀಪಾವಳಿ ಸೂಪ್‌ ಮತ್ತು ಕಿಚನ್‌’ ಅಭಿಯಾನವನ್ನು ನಡೆಸಲಾಯಿತು. ಎಫ್‌ಐಎ ಕ್ರಮವನ್ನು ನ್ಯೂಯಾರ್ಕ್‌ನ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT