ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಮಿಲಿಟರಿ: ಆಧ್ಯಾತ್ಮದ ಮಾರ್ಗದರ್ಶಕರಾಗಿ ಜಬೀನ್‌

Last Updated 18 ಫೆಬ್ರುವರಿ 2021, 7:36 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತೀಯ ಸಂಜಾತ ಮುಸ್ಲಿಂ ಮಹಿಳೆ ಸಲೆಹಾ ಜಬೀನ್‌ ಅವರು ಅಮೆರಿಕದ ಮಿಲಿಟರಿಯಲ್ಲಿ ಆಧ್ಯಾತ್ಮಿಕಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಮೆರಿಕ ಮಿಲಿಟರಿಯಲ್ಲಿ ಈ ಕಾರ್ಯಕ್ಕೆ ನಿಯೋಜನೆಗೊಂಡಿರುವ ಮೊದಲ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು.

ಅವರು ಅಮೆರಿಕ ವಾಯುಪಡೆಯಲ್ಲಿ ‘ಚಾಪ್ಲೈನ್‌ ಕೋರ್ಸ್‌’ ಪೂರೈಸಿದ್ದು, ಫೆಬ್ರುವರಿ 5ರಂದು ಪದವಿ ಪ್ರತಿಜ್ಞೆ ಸ್ವೀಕರಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ನನಗೆ ದೊರೆತ ಈ ಅವಕಾಶಕ್ಕಾಗಿ ಕೃತಜ್ಞಳಾಗಿದ್ದೇನೆ. ನನ್ನ ಜವಾಬ್ದಾರಿಯ ಬಗ್ಗೆ ಅರಿವಿದೆ. ಸೇವೆ ಮಾಡಬಯಸುವವರಿಗೆ ಮಿಲಿಟರಿಯಲ್ಲಿ ಸ್ಥಾನ ದೊರೆಯುತ್ತದೆ ಎಂಬುದಕ್ಕೆ ನಾನೇ ನಿದರ್ಶನ’ ಎಂದು ಜಬೀನ್‌ ಹೇಳಿದ್ದಾರೆ.

ಜಬೀನ್ ಅವರನ್ನು ಡಿಸೆಂಬರ್‌ನಲ್ಲಿ ಶಿಕಾಗೊದ ಕ್ಯಾಥೊಲಿಕ್ ಥಿಯಲಾಜಿಕಲ್ ಯೂನಿಯನ್‌ನಲ್ಲಿ ಎರಡನೇ ಲೆಫ್ಟಿನೆಂಟ್ ಆಗಿ ನಿಯೋಜಿಸಲಾಗಿತ್ತು. ಅವರು ರಕ್ಷಣಾ ಇಲಾಖೆಯ ಮೊದಲ ಮಹಿಳಾ ಮುಸ್ಲಿಂ ಪ್ರಾರ್ಥನಾಧಿಕಾರಿ ಆಗಿದ್ದಾರೆ. 14 ವರ್ಷಗಳ ಹಿಂದೆ ಅವರು ಅಂತರರಾಷ್ಟ್ರೀಯ ವಿದ್ಯಾರ್ಥಿಯಾಗಿ ಅಮೆರಿಕಕ್ಕೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT