ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೂಲದ ಅರುಣ್ ಸುಬ್ರಮಣಿಯನ್ ನ್ಯೂಯಾರ್ಕ್‌ನ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ

Last Updated 8 ಮಾರ್ಚ್ 2023, 11:36 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಭಾರತೀಯ ಮೂಲದ ಅರುಣ್ ಸುಬ್ರಮಣಿಯನ್ ಅವರನ್ನು ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರನ್ನಾಗಿ ನೇಮಕ ಮಾಡುವುದಕ್ಕೆ ಅಮೆರಿಕದ ಸೆನೆಟ್ ಮಂಗಳವಾರ ಅನುಮೋದನೆ ನೀಡಿದೆ. ಈ ಹುದ್ದೆಗೆ ನೇಮಕವಾದ ದಕ್ಷಿಣ ಏಷ್ಯಾದ ಮೊದಲ ನ್ಯಾಯಾಧೀಶರು ಎಂಬ ಕೀರ್ತಿಗೂ ಇವರು ಪಾತ್ರರಾಗಿದ್ದಾರೆ.

ಮಂಗಳವಾರ ಸಂಜೆ ನಡೆದ ಮತದಾನದಲ್ಲಿ ಇವರ ನೇಮಕದ ಪರವಾಗಿ 58 ಮಂದಿ ಮತ ಹಾಕಿದ್ದರೆ, 37 ಮಂದಿ ವಿರುದ್ಧವಾಗಿ ಮತ ಹಾಕಿದರು. ಅಂತಿಮವಾಗಿ ಬಹುಮತದ ಮೂಲಕ ಸುಬ್ರಮಣಿಯನ್ ಅವರ ನೇಮಕಕ್ಕೆ ಅನುಮೋದನೆ ದೊರೆಯಿತು.

ಇವರು ಭಾರತದಿಂದ ಅಮೆರಿಕಗೆ ವಲಸೆ ಬಂದ ದಂಪತಿಯ ಮಗ. 1979ರಲ್ಲಿ ಪಿಟ್ಸ್‌ಬರ್ಗ್‌ನಲ್ಲಿ ಜನಿಸಿದ ಸುಬ್ರಮಣಿಯನ್ ಅವರು ತನ್ನ ವೃತ್ತಿ ಜೀವನವನ್ನು ಅಮೆರಿಕದಲ್ಲಿಯೇ ಆರಂಭಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT