ಮಂಗಳವಾರ, ನವೆಂಬರ್ 29, 2022
21 °C

ಅಮೆರಿಕದಿಂದ ಗೂಢಚರ್ಯ ಉಪಗ್ರಹ ಉಡಾವಣೆ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಂಡೆನ್ಬರ್ಗ್‌ ಬಾಹ್ಯಾಕಾಶ ನೆಲೆ, ಅಮೆರಿಕ (ಎಪಿ): ಅಮೆರಿಕದ ರಾಷ್ಟ್ರೀಯ ವಿಚಕ್ಷಣ ಕಚೇರಿಯು ಗೂಢಚರ್ಯ ಉಪಗ್ರಹವನ್ನು ಯುನೈಟೆಡ್‌ ಅಲ್ಲಿಯಾನ್ಸ್‌ ಡೆಲ್ಟಾ 4 ರಾಕೆಟ್‌ ಮೂಲಕ ಕಕ್ಷೆಗೆ ಉಡಾಯಿಸಿದೆ.

ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ಕೌಂಟಿಯಲ್ಲಿರುವ ವಾಂಡೆನ್ಬರ್ಗ್‌ ಬಾಹ್ಯಾಕಾಶ ನೆಲೆಯ ಮೂಲಕ ಮಧ್ಯಾಹ್ನ 3.25ಕ್ಕೆ (ಸ್ಥಳೀಯ ಕಾಲಮಾನ) ಎನ್‌ಆರ್‌ಒಎಲ್‌–91 ಗೂಢಚರ್ಯ ಉಪಗ್ರಹವನ್ನು ಉಡಾಯಿಸಲಾಗಿದೆ.

ಪಶ್ಚಿಮ ಕರಾವಳಿಯಲ್ಲಿ ಡೆಲ್ಟಾ 4 ರಾಕೆಟ್‌ ಮೂಲಕ ನಡೆಸಲಾದ ಕೊನೆಯ ಉಡಾವಣೆ ಇದಾಗಿದೆ. ಡೆಲ್ಟಾ ಬದಲಿಗೆ ಸುಧಾರಿತ ರಾಕೆಟ್‌ಗಳಾದ ವಲ್ಕನ್ ಸೆಂಟಾರ್‌ಗಳಿಂದ ಹೆಚ್ಚುವರಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು. ಈ ಉಡಾವಣೆಗಳು ಫ್ಲಾರಿಡಾದಲ್ಲಿ ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು