ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌–ರಷ್ಯಾ ಬಿಕ್ಕಟ್ಟು ಉಲ್ಬಣ: ಪೋಲಂಡ್‌ನತ್ತ ಅಮೆರಿಕದ 3 ಸಾವಿರ ಯೋಧರು

ಉಕ್ರೇನ್‌ ತೊರೆಯಲು ತನ್ನ ಪ್ರಜೆಗಳಿಗೆ ವಿವಿಧ ದೇಶಗಳ ಸೂಚನೆ
Last Updated 12 ಫೆಬ್ರುವರಿ 2022, 20:35 IST
ಅಕ್ಷರ ಗಾತ್ರ

ವಾಷಿಂಗ್ಟನ್: ಉಕ್ರೇನ್‌ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚುತ್ತಿರುವ ನಡುವೆಯೇ, ಅಮೆರಿಕ 3,000 ಯೋಧರನ್ನು ಒಳಗೊಂಡ ಮತ್ತೊಂದು ತುಕಡಿಯನ್ನು ಪೋಲಂಡ್‌ಗೆ ಕಳಿಸುವುದಾಗಿ ಘೋಷಿಸಿದೆ.

ನ್ಯಾಟೊ ಮಿತ್ರರಾಷ್ಟ್ರಗಳಿಗೆ ತನ್ನ ಬೆಂಬಲ ಸೂಚಿಸುವ ಭಾಗವಾಗಿ ಯೋಧರನ್ನು ಕಳುಹಿಸಲಾಗುತ್ತಿದೆ. ಈಗಾ
ಗಲೇ, ಪೋಲಂಡ್‌ನಲ್ಲಿ 1,700 ಯೋಧರನ್ನು ನಿಯೋಜಿಸಲಾಗಿದೆ. ಈಗ ಹೆಚ್ಚುವರಿಯಾಗಿ 3,000 ಯೋಧರನ್ನು ಕಳುಹಿಸುತ್ತಿರುವುದಾಗಿ ಅಮೆರಿಕ ರಕ್ಷಣಾ ಇಲಾಖೆ (ಪೆಂಟಗನ್) ತಿಳಿಸಿದೆ.

ಈ ಯೋಧರು ಇನ್ನೆರಡು ದಿನಗಳಲ್ಲಿ ನಾರ್ತ್ ಕೆರೋಲಿನಾದಲ್ಲಿರುವ ಫೋರ್ಟ್‌ ಬ್ರ್ಯಾಗ್ ಸೇನಾನೆಲೆಯಿಂದ ಇನ್ನೆರಡು ದಿನಗಳಲ್ಲಿ ಪೋಲಂಡ್‌ನತ್ತ ಪ್ರಯಾಣಿಸುವರು. ಈ ಯೋಧರು ಉಕ್ರೇನ್ ಪಡೆಗಳಿಗೆ ತರಬೇತಿ ನೀಡಲಿದ್ದು, ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪೆಂಟಗನ್‌ ಮೂಲಗಳು ಹೇಳಿವೆ.

ಉಕ್ರೇನ್‌ ತೊರೆಯಲು ಸೂಚನೆ: ರಷ್ಯಾ ಪಡೆಗಳು ಉಕ್ರೇನ್‌ ಮೇಲೆ ದಾಳಿ ನಡೆಸುವ ಸಾಧ್ಯತೆಗಳು ಹೆಚ್ಚು
ತ್ತಿರುವ ಕಾರಣ, ಉಕ್ರೇನ್‌ ತೊರೆಯುವಂತೆ ಹಲವು ದೇಶಗಳು ತಮ್ಮ ಪ್ರಜೆಗಳಿಗೆ ಶನಿವಾರ ಸೂಚನೆ ನೀಡಿವೆ.

‘ಉಕ್ರೇನ್‌ನಲ್ಲಿರುವುದು ತೀರ ಅಗತ್ಯ ಎನಿಸಿದರೆ ಮಾತ್ರ ಉಳಿದುಕೊಳ್ಳಬೇಕು. ಇಲ್ಲದಿದ್ದರೆ ಕೂಡಲೇ ದೇಶ ತೊರೆಯಬೇಕು’ ಎಂದು ಜರ್ಮನಿಯ ವಿದೇಶಾಂಗ ಸಚಿವಾಲಯ ಟ್ವೀಟ್ ಮೂಲಕ ತನ್ನ ಪ್ರಜೆಗಳಿಗೆ ಸೂಚಿಸಿದೆ.

ನೆದರ್ಲೆಂಡ್ ಸಹ ತನ್ನ ಪ್ರಜೆಗಳಿಗೆ ಉಕ್ರೇನ್‌ ತೊರೆಯುವಂತೆ ಸೂಚಿಸಿದೆ. ಕೀವ್‌ನಲ್ಲಿರುವ ರಾಯಭಾರಿಯ ಕಚೇರಿಯ ಸಿಬ್ಬಂದಿ ಪೈಕಿ, ತುರ್ತು ಸೇವೆ ಹೊರತುಪಡಿಸಿ ಉಳಿದವರು ಹಿಂತಿರುಗುವಂತೆ ಅಮೆರಿಕ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT